ಐಪಿಎಲ್ 2021: ಚೆನ್ನೈ vs ಬೆಂಗಳೂರು, ಆಟಗಾರರ ಸಂಭಾವ್ಯ ದಾಖಲೆ ಹಾಗೂ ಮೈಲಿಗಲ್ಲುಗಳು

ಐಪಿಎಲ್ 14ನೇ ಆವೃತ್ತಿಯ 19ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯಲ್ಲಿ ಇದುವರೆಗೂ 4 ಪಂದ್ಯಗಳನ್ನಾಡಿ ಮೂರರಲ್ಲಿ ಜಯಗಳಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಎಲ್ಲಾ 4 ಪಂದ್ಯಗಳಲ್ಲಿಯೂ ಜಯಗಳಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡೂ ತಂಡಗಳು ಸಹ ಗೆಲುವು ಸಾಧಿಸಿ ಅಗ್ರಸ್ಥಾನ ಪಡೆದುಕೊಳ್ಳುವ ತವಕದಲ್ಲಿವೆ. ಪ್ರಸ್ತುತ ಐಪಿಎಲ್ ಆವೃತ್ತಿಯ ಬಹುನಿರೀಕ್ಷಿತ ಪಂದ್ಯ ಇದಾಗಿದ್ದು ಅಪಾರವಾದ ವೀಕ್ಷಕ ಬಳಗ ಪಂದ್ಯವನ್ನು ವೀಕ್ಷಿಸಲು ಕಾತುರರಾಗಿದ್ದಾರೆ. ಈ ಪಂದ್ಯದಲ್ಲಿ ಎರಡೂ ತಂಡಗಳ ಕೆಲವು ಆಟಗಾರರು ಕೆಲವೊಂದಿಷ್ಟು ಮೈಲಿಗಲ್ಲು ಮತ್ತು ದಾಖಲೆಗಳನ್ನು ಬರೆಯುವ ಸಾಧ್ಯತೆಯಿದೆ.
ಈ ಪಂದ್ಯದ ಮೂಲಕ ದಾಖಲೆ ಬರೆಯಬಹುದಾದ ಆಟಗಾರರ ಪಟ್ಟಿ ಮುಂದೆ ಇದೆ ಓದಿ.
ಸುರೇಶ್ ರೈನಾ :
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಸುರೇಶ್ ರೈನಾ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 199 ಸಿಕ್ಸ್‌ಗಳನ್ನು ಬಾರಿಸಿದ್ದು 200 ಸಿಕ್ಸ್‌ಗಳನ್ನು ಪೂರೈಸಲು ಒಂದು ಸಿಕ್ಸ್‌ನ ಅಗತ್ಯವಿದ್ದು, ಈ ಪಂದ್ಯದಲ್ಲಿ ಆ ಒಂದು ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ ನಂತರ 200 ಸಿಕ್ಸರ್ ಪೂರೈಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆಯುವ ಸಾಧ್ಯತೆಯಿದೆ.
ಎಬಿ ಡಿವಿಲಿಯರ್ಸ್ :
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 5000 ರನ್ ಪೂರೈಸಲು ಎಬಿ ಡಿವಿಲಿಯರ್ಸ್ ಅವರಿಗೆ 26 ರನ್‌ಗಳ ಅವಶ್ಯಕತೆಯಿದ್ದು ಈ ಪಂದ್ಯದಲ್ಲಿ ಈ ಸಾಧನೆಯನ್ನು ಪೂರೈಸುವ ನಿರೀಕ್ಷೆಯಲ್ಲಿದ್ದಾರೆ. ಎಬಿಡಿ ಈ ಸಾಧನೆಯನ್ನು ಮಾಡಿದರೆ ಡೇವಿಡ್ ವಾರ್ನರ್ ನಂತರ 5000 ಐಪಿಎಲ್ ರನ್ ಪೂರೈಸಿದ ವಿದೇಶಿ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.
ಅಂಬಾಟಿ ರಾಯುಡು :
ವಾಂಖೆಡೆ ಕ್ರೀಡಾಂಗಣದಲ್ಲಿ 1000 ರನ್ ಪೂರೈಸಲು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಅಂಬಾಟಿ ರಾಯುಡುಗೆ 29 ರನ್‌ಗಳ ಅಗತ್ಯವಿದ್ದು ಈ ಪಂದ್ಯದಲ್ಲಿ ಅದನ್ನು ಸಾಧಿಸಿ ಹೊಸ ಮೈಲಿಗಲ್ಲು ಮುಟ್ಟುವ ಸಾಧ್ಯತೆಯಿದೆ. ಅಂಬಾಟಿ ರಾಯುಡು ಈ ಸಾಧನೆ ಮಾಡಿದರೆ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮ ಹಾಗೂ ಕೀರನ್ ಪೊಲಾರ್ಡ್ ನಂತರ 1000 ರನ್ ಪೂರೈಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ
ಎಂಎಸ್ ಧೋನಿ ರನ್ ದಾಖಲೆ :
ಐಪಿಎಲ್ ಇತಿಹಾಸದಲ್ಲಿ ಮಹೇಂದ್ರ ಸಿಂಗ್ ಧೋನಿ ರಾಯಲ್ ಚಾಲೆಂಜರ್ಸ್ ವಿರುದ್ಧ 823 ರನ್ ಬಾರಿಸಿದ್ದಾರೆ. ಇದು ಆಟಗಾರನೊಬ್ಬ ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗಳಿಸಿರುವ ಅತಿಹೆಚ್ಚು ರನ್ ಆಗಿದೆ.
ಎಂಎಸ್ ಧೋನಿ ಸಿಕ್ಸ್ ದಾಖಲೆ :
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಧೋನಿ 43 ಸಿಕ್ಸರ್ ಬಾರಿಸಿದ್ದಾರೆ. ಇದು ಆಟಗಾರನೊಬ್ಬ ಐಪಿಎಲ್ ತಂಡವೊಂದರ ವಿರುದ್ಧ ಬಾರಿಸಿರುವ ಅತಿಹೆಚ್ಚು ಸಿಕ್ಸರ್.
ಎಬಿ ಡಿವಿಲಿಯರ್ಸ್ :
ಎಬಿ ಡಿವಿಲಿಯರ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 154.49 ಸ್ಟ್ರೈಕ್ ರೇಟ್ ಜೊತೆಗೆ 516 ರನ್ ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 150ಕ್ಕಿಂತ ಅಧಿಕ ಸ್ಟ್ರೈಕ್ ರೇಟ್ ಜೊತೆಗೆ 500ಕ್ಕಿಂತ ಹೆಚ್ಚಿನ ರನ್ ಗಳಿಸಿರುವ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications