Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಹರ್ಷಲ್ ವಿರುದ್ಧ ಸಿಡಿದ ಜಡೇಜಾ, ಆರ್‌ಸಿಬಿಗೆ 192 ರನ್‌ ಗುರಿ

IPL 2021:Match 19, RCB need 192 runs to win against CSK

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಧೋನಿ ಪಡೆ ಬೃಹತ್ ಗುರಿಯನ್ನು ಮುಂದಿಟ್ಟಿದೆ. ಹರ್ಷಲ್ ಪಟೇಲ್ ಎಸೆತ ಅಂತಿಮ ಓವರ್‌ನಲ್ಲಿ ರವೀಂದ್ರ ಜಡೇಜಾ 37 ರನ್‌ಗಳನ್ನು ಸಿಡಿಸಿದ ಪರಿಣಾಮವಾಗಿ ಸಿಎಸ್‌ಕೆ 191 ರನ್‌ಗಳಿಸಿದೆ.

ಮುಂಬೈನ ಬ್ಯಾಟಿಂಗ್ ಸಹಕಾರಿ ಪಿಚ್‌ನಲ್ಲಿ ಆರ್‌ಸಿಬಿ ಬೌಲರ್‌ಗಳು ಅಂತಿಮ ಓವರ್‌ವರೆಗೂ ಅತ್ಯುತ್ತಮ ಪ್ರದರ್ಶನ ನೀಡಿದರು. 19ನೇ ಓವರ್‌ನ ಅಂತ್ಯಕ್ಕೆ ಚೆನ್ನೈ 154 ರನ್‌ಗಳನ್ನು ಗಳಿಸಿತ್ತು. ಆದರೆ ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್ ವಿರಾಟ್ ಪಡೆಯ ಲೆಕ್ಕಾಚಾರವನ್ನು ತಲೆಕೆಳಗಾಗುವಂತೆ ಮಾಡಿತು. ಹೀಗಾಗಿ ದೊಡ್ಡ ಗುರಿಯನ್ನು ಬೆನ್ನಟ್ಟುವ ಸವಾಲನ್ನು ಪಡೆದುಕೊಂಡಿದೆ.

ಹರ್ಷಲ್ ಪಟೇಲ್ ಎಸೆದ ಅಂತಿಮ ಓವರ್‌ಅನ್ನು ಎದುರಿಸಿದ ರವೀಂದ್ರ ಜಡೇಜಾ ಸತತ ನಾಲ್ಕು ಸಿಕ್ಸರ್ ಬಾರಿಸಿದರು. ಇದರಲ್ಲಿ ಒಂದು ನೋಬಾಲ್ ಆಗಿತ್ತು. ಈ ಮೂಲಕ ಜಡೇಜಾ ತಮ್ಮ ಅರ್ಧ ಶತಕವನ್ನು ಪೂರ್ಣಗೊಳಿಸಿದರು. ಬಳಿಕ ಜೀವದಾನವೊಂದು ಪಡೆದ ಜಡೇಜಾ ಆ ಎಸೆತದಲ್ಲಿ ಎರಡು ರನ್ ಪಡೆದುಕೊಂಡರು. ನಂತರ ಮತ್ತೊಂದು ಸಿಕ್ಸರ್ ಬಾರಿಸಿದ ಜಡೇಜಾ ಅಂತಿಮ ಎಸೆತವನ್ನು ಬೌಂಡರಿಗೆ ಅಟ್ಟಿದರು. ಈ ಮೂಲಕ ಒಂದೇ ಓವರ್‌ನಲ್ಲಿ 37 ರನ್‌ಗಳನ್ನು ಗಳಿಸಿದರು.

ಅಂತಿಮವಾಗಿ ರವೀಂದ್ರ ಜಡೇಜಾ ಕೇವಲ 28 ಎಸೆತಗಳನ್ನು ಎದುರಿಸಿ 62 ರನ್‌ ಬಾರಿಸಿದ್ದಾರೆ. ಇದರಲ್ಲಿ 5 ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ಒಳಗೊಂಡಿತ್ತು. ಇದಕ್ಕೂ ಮುನ್ನ ಸಿಎಸ್‌ಕೆ ಉತ್ತಮ ಆರಂಭವನ್ನು ಪಡೆಯಿತು. ಋತುರಾಜ್ ಗಾಯಕ್ವಾಡ್ ಹಾಗೂ ಫಾಪ್ ಡು ಪ್ಲೆಸಿಸ್ 50 ರನ್‌ಗಳಿಸಿದರು. ಉಳಿದಂತೆ ರೈನಾ 24 ನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ ಪರವಾಗಿ ಹರ್ಷಲ್ ಪಟೇಲ್ 3 ವಿಕೆಟ್ ಪಡೆದರೆ ಚಾಹಲ್ 1 ವಿಕೆಟ್ ಕಿತ್ತರು.

Story first published: Monday, April 26, 2021, 9:39 [IST]
Other articles published on Apr 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+