Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

CSK vs SRH Preview: ಚೆನ್ನೈ vs ಹೈದರಾಬಾದ್, ಸಂಭಾವ್ಯ ತಂಡ ಹಾಗೂ ಪಂದ್ಯದ ಮಾಹಿತಿ

IPL 2021 Match 23, CSK vs SRH: Preview, probable XI, Delhi weather forecast and pitch report

ಐಪಿಎಲ್‌ನಲ್ಲಿ ಬುಧವಾರ 23ನೇ ಪಂದ್ಯಕ್ಕೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸಜ್ಜಾಗಿದೆ. ಧೋನಿ ನೇತೃತ್ವದ ತಂಡ ಅತ್ಯುತ್ತಮ ಪ್ರದರ್ಶನದ ಮೂಲಕ ಅಂಕಪಟ್ಟಿಯಲ್ಲಿ ಉತ್ತಮ ಸಾಧನೆ ಮಾಡಿದ್ದರೆ ಡೇವಿಡ್ ವಾರ್ನರ್ ಬಳಗ ಈ ಬಾರಿಯ ಆವೃತ್ತಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲುವಿಗಾಗಿ ಹರಸಾಹಸಪಡಲಿದೆ.

ಪಂದ್ಯದ ಆರಂಭ
ಚೆನ್ನೈ ಹಾಗೂ ಹೈದರಾಬಾದ್ ತಂಡಗಳ ನಡುವಿನ ಈ ಕಾದಾಟಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ವೇದಿಕೆಯಾಗಲಿದ್ದು ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಈ ಮೂಲಕ ದೆಹಲಿಯ ಕ್ರೀಡಾಂಗಣದಲ್ಲಿನ ಪಂದ್ಯಗಳು ಆರಂಭವಾಗಲಿದೆ.

ಹವಾಮಾನ ವರದಿ ಹಾಗೂ ಪಿಚ್ ರಿಪೋರ್ಟ್
ಪಂದ್ಯ ನಡೆಯುವ ಸಂದರ್ಭದಲ್ಲಿ ಡೆಲ್ಲಿಯ ವಾತಾವರಣ ಸಾಕಷ್ಟು ಉಷ್ಣಾಂಶದಿಂದ ಕೂಡಿರಲಿದೆ. 38 ಡಿಗ್ರಿ ಸೆಲ್ಸಿಯಸ್ ಸರಾಸರು ಉಷ್ಣಾಂಶವಿರಲಿದೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಸ್ವಲ್ಪ ಮಟ್ಟಿಗೆ ಪರಿಣಾಮ ಬೀರುವ ಸಂಭವವಿದೆ. ಪಿಚ್ ಸ್ಪಿನ್ನರ್‌ಗಳಿಗೆ ಪೂರಕವಾಗಿದ್ದು ನಿಧಾನಗತಿಯಲ್ಲಿ ವರ್ತಿಸಲಿದೆ. 160 ರನ್‌ ಎದುರಾಳಿಗೆ ಸವಾಲಿನ ಮೊತ್ತವೆನಿಸಬಹುದು.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ
ಋತುರಾಜ್ ಗಾಯಕ್ವಾಡ್, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ /ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರನ್, ಡ್ವೇಯ್ನ್ ಬ್ರಾವೋ, ಮೊಯೀನ್ ಅಲಿ/ಇಮ್ರಾನ್ ತಾಹಿರ್, ಶಾರ್ದುಲ್ ಠಾಕೂರ್ ಮತ್ತು ದೀಪಕ್ ಚಹರ್.

ಸನ್‌ರೈಸರ್ಸ್ ಹೈದರಾಬಾದ್
ಸನ್‌ರೈಸರ್ಸ್ ಹೈದರಾಬಾದ್: ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ವಿಜಯ್ ಶಂಕರ್, ಕೇದಾರ್ ಜಾಧವ್, ಅಭಿಷೇಕ್ ಶರ್ಮಾ, ರಶೀದ್ ಖಾನ್, ಜಗದೀಶ ಸುಚಿತ್, ಖಲೀಲ್ ಅಹ್ಮದ್ ಮತ್ತು ಸಂದೀಪ್ ಶರ್ಮಾ

Story first published: Wednesday, April 28, 2021, 11:17 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+