ಐಪಿಎಲ್ 2021: ಮಹತ್ವದ ಮೈಲಿಗಲ್ಲುಗಳ ಮೇಲೆ ರೋಹಿತ್, ರೈನಾ, ಬ್ರಾವೋ ಚಿತ್ತ

ಐಪಿಎಲ್ 14ನೇ ಆವೃತ್ತಿಯ 27ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಠಿಣ ಸವಾಲನ್ನು ಒಡ್ಡಲಿದೆ. ಈ ಎರಡು ತಂಡಗಳಲ್ಲಿಯೂ ಸಾಕಷ್ಟು ಸ್ಟಾರ್ ಆಟಗಾರರಿದ್ದು ಪಂದ್ಯದ ಮೇಲೆ ಕುತೂಹಲ ಮೂಡಿಸಿದೆ. ಈ ರೋಚಕ ಕಾದಾಟದಲ್ಲಿ ಕೆಲ ಮಹತ್ವದ ಮೈಲಿಗಲ್ಲುಗಳು ಹಾಗೂ ದಾಖಲೆಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.
ರೋಹಿತ್ ಶರ್ಮಾ
*ಇಂದಿನ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಗೆದ್ದರೆ ಅದು ರೋಹಿತ್ ಶರ್ಮಾ ಪಾಲಿಗೆ ಮುಂಬೈ ನಾಯಕನಾಗಿ 72ನೇ ಗೆಲುವಾಗಲಿದೆ. ಈ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ನಾಯಕರ ಪಟ್ಟಿಯಲ್ಲಿ ಗೌತಮ್ ಗಂಭೀರ್(71 ಗೆಲುವು)ಅವರನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಲಿದ್ದಾರೆ. 115 ಗೆಲುವು ಸಾಧಿಸಿರುವ ಧೋನಿ ಮೊದಲ ಸ್ಥಾನದಲ್ಲಿದ್ದಾರೆ.
*ಈ ಪಂದ್ಯದಲ್ಲಿ ನಾಲ್ಕು ಸಿಕ್ಸರ್ ಬಾರಿಸಿದರೆ ರೊಹಿತ್ ಶರ್ಮಾ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದಂತಾಗುತ್ತದೆ.
ಸುರೇಶ್ ರೈನಾ
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಸುರೇಶ್ ರೈನಾ ಐಪಿಎಲ್‌ನಲ್ಲಿ 200 ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ದೀಪಕ್ ಚಾಹರ್
ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ದೀಪಕ್ ಚಾಹರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ 50ನೇ ಪಂದ್ಯವನ್ನಾಡಲಿದ್ದರೆ.
ಇಶಾನ್ ಕಿಶನ್
ಇಶಾನ್ ಕಿಶನ್‌ಗೆ ಇಂದಿನ ಪಂದ್ಯದಲ್ಲಿ ಆಡುವ ಅವಕಾಶ ದೊರೆತು 35 ರನ್‌ಗಳಿಸಿದರೆ ಐಪಿಎಲ್‌ನಲ್ಲಿ 1000 ರನ್ ಪೂರೈಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.
ಕೃನಾಲ್ ಪಾಂಡ್ಯ
ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಒಂದು ವಿಕೆಟ್ ಪಡೆದರೆ ಐಪಿಎಲ್‌ನಲ್ಲಿ 50 ವಿಕೆಟ್ ಸಂಪಾದಿಸಿದಂತಾಗುತ್ತದೆ.
ಡ್ವೇಯ್ನ್ ಬ್ರಾವೋ
ಐಪಿಎಲ್‌ನಲ್ಲಿ 156 ವಿಕೆಟ್ ಸಂಪಾದಿಸಿರಿವ ಡ್ವೇಯ್ನ್ ಬ್ರಾವೋ ಇಂದಿನ ಪಂದ್ಯದಲ್ಲಿ ಒಂದು ವಿಕೆಟ್ ಪಡೆದುಕೊಂಡರೆ ಪಿಯೂಷ್ ಚಾವ್ಲಾ ಅವರನ್ನು ಹಿಂದಿಕ್ಕಿ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪೊಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಲಿದ್ದಾರೆ. ಲಸಿತ್ ಮಲಿಂಗ ಹಾಗೂ ಅಮಿತ್ ಮಿಶ್ರಾ ಈ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications