CSK vs PBKS : ಐಪಿಎಲ್ 2021: ಚೆನ್ನೈ vs ಪಂಜಾಬ್: ಸಂಭಾವ್ಯ ತಂಡ, ಹವಾಮಾನ, ಪಿಚ್ ರಿಪೋರ್ಟ್

ಮೊದಲ ಪಂದ್ಯವನ್ನು ಗೆದ್ದು ಉತ್ಸಾಹದಲ್ಲಿರುವ ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಇಂದು ಎಂಎಸ್ ಧೋನಿ ನೇತೃತ್ವದ ತಂಡವನ್ನು ಎದುರಿಸಲಿ ಸಜ್ಜಾಗಿದೆ. ಧೋನಿ ಪಡೆ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲಿನ ಮೂಲಕ ಆರಂಭಿಸಿರುವುದರಿಂದ ಗೆಲುವಿನ ಹಂಬಲದಲ್ಲಿದೆ.
ಪಂದ್ಯದ ಆರಂಭ: ಪಂದ್ಯ ಸಂಜೆ 7:30ಕ್ಕೆ ಆರಂಭವಾಗಲಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣ ಈ ಪಂದ್ಯದ ಆತಿಥ್ಯವನ್ನು ವಹಿಸಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪಂದ್ಯದ ನೇರಪ್ರಸಾರವಿರಲಿದೆ. ಡಿಸ್ನಿ +ಹಾಟ್‌ಸ್ಟಾರ್ VIP ಚಂದಾದಾರರು ಕೂಡ ಪಂದ್ಯ ವೀಕ್ಷಿಸಬಹುದು.

ಹವಾಮಾನ ವರದಿ
ಹವಾಮಾನ ವರದಿಯ ಪ್ರಕಾರ ಚೆನ್ನೈ ಹಾಗೂ ಪಂಜಾಬ್ ವಿರುದ್ಧದ ಪಂದ್ಯದ ದಿನ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ಆದರೆ ತಾಪಮಾನ 31ಡಿಗ್ರಿ ಉಷ್ಣಾಂಶವಿರಲಿದೆ. ಸಹಜವಾಗಿಯೇ ಇಬ್ಬನಿ ಎರಡನೇ ಇನ್ನಿಂಗ್ಸ್‌ಗೆ ಪರಿಣಾಮ ಬೀಳುವ ಸಾಧ್ಯತೆಯಿರುತ್ತದೆ.

ಪಿಚ್ ರಿಪೋರ್ಟ್
ವಾಂಖೆಡೆ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿರುವುದನ್ನು ನಾವು ಕಾಣಬಹುದು. ಹೀಗಾಗಿ ಚೆನ್ನೈ ಹಾಗೂ ಪಂಜಾಬ್ ವಿರುದ್ಧದ ಪಂದ್ಯ ಕೂಡ ಹೈವೋಲ್ಟೇಜ್ ಪಂದ್ಯವಾಗುವ ಸಾಧ್ಯತೆಯಿದೆ. ಆದರೆ ಗುರುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯ ದೊಡ್ಡ ಮೊತ್ತದ ಪಂದ್ಯವಾಗಿರಲಿಲ್ಲ ಎಂಬುದು ಗಮನಾರ್ಹ. ಹೀಗಾಗಿ ಬಳಸುವ ಪಿಚ್ ಪ್ರಮುಖ ಪಾತ್ರವಹಿಸುತ್ತದೆ.

ಚೆನ್ನೈ vs ಪಂಜಾಬ್
ಕೆ.ಎಲ್. ರಾಹುಲ್ (ನಾಯಕ/ವಿಕೆಟ್ ಕೀಪರ್), ಮಾಯಾಂಕ್ ಅಗರ್ವಾಲ್, ಕ್ರಿಸ್ ಗೇಲ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಶಾರುಖ್ ಖಾನ್, ಜೈ ರಿಚರ್ಡ್ಸನ್, ಮುರುಗನ್ ಅಶ್ವಿನ್, ರಿಲೆ ಮೆರೆಡಿತ್, ಮೊಹಮ್ಮದ್ ಶಮಿ, ಮತ್ತು ಅರ್ಷ್‌ದೀಪ್ ಸಿಂಗ್.

ಸಂಭಾವ್ಯ ತಂಡ ಚೆನ್ನೈ
ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಎಂ.ಎಸ್.ಧೋನಿ (ನಾಯಕ/ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಸ್ಯಾಮ್ ಕರ್ರನ್, ಡಿಜೆ ಬ್ರಾವೋ, ಶಾರ್ದುಲ್ ಠಾಕೂರ್, ಮತ್ತು ದೀಪಕ್ ಚಾಹರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications