ಸಿಎಸ್‌ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿ ಕೋವಿಡ್ ವರದಿ ನೆಗೆಟಿವ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಆಸ್ಟ್ರೇಲಿಯಾ ಮೂಲದ ಮೈಕ್ ಹಸ್ಸಿ ಪಾಲಿಗೆ ಸಂತಸದ ಬೆಳವಣಿಗೆಯಾಗಿದೆ. ಕೊರೊನಾ ವೈರಸ್‌ಗೆ ತುತ್ತಾಗಿ ಭಾರತದಲ್ಲಿಯೇ ಉಳಿದುಕೊಂಡಿರುವ ಮೈಕ್ ಹಸ್ಸಿ ಅವರ ಇತ್ತೀಚೊನ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ. ಹೀಗಾಗಿ ಹಸ್ಸಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸದ್ಯ ಮೈಕ್ ಹಸ್ಸಿ ಭಾರತದಲ್ಲಿ ಕ್ವಾರಂಟೈನ್‌ನಲ್ಲಿ ಮುಂದುವರಿಯಲಿದ್ದಾರೆ. ಇನ್ನೊಂದು ಕೊರೊನಾ ಪರೀಕ್ಷೆಯನ್ನು ಮೈಕ್ ಹಸ್ಸಿಗೆ ನಡೆಸಲಿದ್ದು ಮತ್ತೆ ನೆಗೆಟಿವ್ ವರದಿ ಬಂದರೆ ಮೈಕ್ ಹಸ್ಸಿ ಕ್ವಾರಂಟೈನ್ ತೊರೆಯುವ ಅವಕಾಶ ದೊರೆಯಲಿದೆ.
ಹೀಗಾಗಿ ಮತ್ತೊಂದು ಕೊರೊನಾ ಪರೀಕ್ಷೆಯ ವರದಿಗಾಗಿ ಮೈಕ್ ಹಸ್ಸಿ ಈಗ ಕಾಯುತ್ತಿದ್ದು ಅದು ಅಂದುಕೊಂಡಂತೆ ನೆಗೆಟಿವ್ ಬಂದಲ್ಲಿ ಮೈಕ್ ಹಸ್ಸಿ ಮಾಲ್ಡೀವ್ಸ್‌ಗೆ ಪ್ರಯಾಣವನ್ನು ಬೆಳೆಸಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಆಸ್ಟ್ರೇಲಿಯಾದ ಇತರ ಆಟಗಾರರಿ ಹಾಗೂ ಸಿಬ್ಬಂದಿಗಳು ಸದ್ಯ ಉಳಿದುಕೊಂಡಿದ್ದು ಈ ಬಳಗವನ್ನು ಮೈಕ್ ಹಸ್ಸಿ ಕೂಡಿಕೊಳ್ಳಲಿದ್ದಾರೆ.
"ಮೈಕ್ ಹಸ್ಸಿ ಗುರುವಾರ ಡೆಲ್ಲಿಯಿಂದ ಚೆನ್ನೈಗೆ ಪ್ರಯಾಣಿಸುವ ಮುನ್ನ ಅವರ ಕೊರೊನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿತ್ತು. ಅವರು ಸಂಪೂರ್ಣ ಆರೋಗ್ಯವಾಗಿದ್ದಾರೆ. ವಿದೇಶದ ಉಳಿದ ಸಿಬ್ಬಂದಿಗಳು ಹಾಗೂ ಆಟಗಾರರು ಪ್ರಯಾಣವನ್ನು ಬೆಳೆಸಿದ್ದಾರೆ. ಹೆಡ್ ಕೋಚ್ ಸ್ಟೀಫನ್ ಫ್ಲೆಮಿಂಗ್ ನಾಳೆ ಪ್ರಯಾಣಿಸಲಿದ್ದಾರೆ" ಎಂದು ಸಿಎಸ್‌ಕೆ ತಂಡದ ಸಿಇಒ ಕಾಸಿ ವಿಶ್ವನಾಥ್ ಪ್ರತಿಕ್ರಿಯಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications