Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಲ್ಕೋಹಾಲ್ ಬ್ರ್ಯಾಂಡ್ ಲೋಗೊ ಜರ್ಸಿಯಲ್ಲಿ ತೊಡಲ್ಲ ಎಂದ ಮೊಯೀನ್ ಅಲಿ ನಿರ್ಧಾರಕ್ಕೆ ಸಮ್ಮತಿಸಿದ CSK

IPL 2021: Moeen Ali tells CSK he wont wear logo of alcohol brand on jersey

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮೊಯೀನ್ ಅಲಿ ತಂಡದ ಮ್ಯಾನೇಜ್‌ಮೆಂಟ್‌ಗೆ ವಿಶೇಷ ಮನವಿಯೊಂದನ್ನು ಮಾಡಿದ್ದರು. ಜರ್ಸಿಯಲ್ಲಿ ಒಂದು ನಿರ್ದಿಷ್ಟ ಲೋಗೋವನ್ನು ಧರಿಸಲು ನಾನು ಬಯಸುವುದಿಲ್ಲ, ಅದಕ್ಕೆ ಅವಕಾಶ ಮಾಡಿಕೊಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸಮ್ಮತಿಯನ್ನು ನೀಡಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂದ ಆಲ್‌ರೌಂಡರ್ ಮೊಯೀನ್ ಅಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಪ್ಪಂದವನ್ನು ಹೊಂದಿರುವ ಆಲ್ಕೋಹಾಲ್ ಬ್ರ್ಯಾಂಡ್ ಲೋಗೋವನ್ನು ಧರಿಸದಿರುವ ನಿರ್ಧಾರವನ್ನು ತೆಗೆದುಕೊಂಡಿದ್ದರು. ವೈಯ್ಯಕ್ತಿಕವಾಗಿ ಮೊಯೀನ್ ಅಲಿ ಮಾದಕ ವ್ಯಸನಗಳನ್ನು ಪ್ರಚಾರ ಮಾಡದಿರುವ ನಿರ್ಧಾರವನ್ನು ತೆಗದುಕೊಂಡಿರುವುದು ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜರ್ಸಿ SNJ 10000ನ ಲೋಗೋವನ್ನು ಹೊಂದಿದೆ. ಇದು ಚೆನ್ನೈ ಮೂಲದ ಎಸ್‌ಎನ್‌ಜೆ ಡಿಸ್ಟಿಲಸೀರ್‌ನ ಉತ್ಪನ್ನದ ಬ್ರ್ಯಾಂಡ್ ಆಗಿದೆ. ಮೊಯೀನ್ ಅಲಿ ಅವರ ಮನವಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಪ್ಪಿಗೆಯನ್ನು ನೀಡಿದ್ದು ಅವರ ಜರ್ಸಿಯಲ್ಲಿ ಈ ಲೋಗೋವನ್ನು ತೆಗೆದುಹಾಕಿದೆ.

ಈ ಬಾರಿಯ ಐಪಿಎಲ್ ಆವೃತ್ತಿಗಾಗಿ ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮೊಯೀನ್ ಅಲಿ 7 ಕೋಟಿ ಮೌಲ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದರು. ಇದಕ್ಕೂ ಮುನ್ನ ಆರ್‌ಸಿಬಿ ತಂಡದ ಪರವಾಗಿ 2018ರಿಂದ ಐಪಿಎಲ್‌ನಲ್ಲಿ ಮೊಯೀನ್ ಅಲಿ ಭಾಗಿಯಾಗಿದ್ದಾರೆ. ಇದು ಅವರ ಎರಡನೇ ಐಪಿಎಲ್ ತಂಡವಾಗಿದೆ.

ಐಪಿಎಲ್‌ನಲ್ಲಿ ಮೊಯೀನ್ ಅಲಿ ಈವರೆಗೆ 19 ಪಂದ್ಯಗಳನ್ನು ಆಡಿದ್ದು 309 ರನ್‌ಗಳನ್ನು ಗಳಿಸಿದ್ದಾರೆ. ಅಲ್ಲದೆ ಬೌಲರ್ ಆಗಿ 10 ವಿಕೆಟ್‌ಗಳನ್ನು ಕೂಡ ಮೊಯೀನ್ ಅಲಿ ಕಿತ್ತಿದ್ದಾರೆ. ಕಳೆದ ತಿಂಗಳು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿರುವ ಹಿನ್ನೆಲೆಯಲ್ಲಿ ಧೋನಿ ನಾಯಕತ್ವದಲ್ಲಿ ಆಡುವುದಕ್ಕೆ ಅವರು ಉತ್ಸುಕತೆಯನ್ನು ವ್ಯಕ್ತಪಡಿಸಿದ್ದರು.

Story first published: Monday, April 5, 2021, 10:47 [IST]
Other articles published on Apr 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+