ಬಲು ಅಪರೂಪದ, ನಿರ್ಭೀತ ಬ್ಯಾಟ್ಸ್‌ಮನ್ ಹೆಸರಿಸಿದ ಮೊಹಮ್ಮದ್ ಕೈಫ್

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. 49 ಎಸೆತಗಳಲ್ಲಿ 92 ರನ್ ಧವನ್ ಬ್ಯಾಟಿಂದ ಸಿಡಿದಿತ್ತು. ಆ ಪಂದ್ಯದಲ್ಲಿ ಡೆಲ್ಲಿ 6 ವಿಕೆಟ್ ಗೆಲುವು ದಾಖಲಿಸಿತ್ತು ಕೂಡ. ಧವನ್ ಅಂದಿನ ಪಂದ್ಯದಲ್ಲಿ ಗೆಲುವಿನ ಹೀರೋ ಅನ್ನಿಸಿದ್ದರು.
ಭಾನುವಾರದ ಪಂದ್ಯ ನೋಡಿದರೆ ಶಿಖರ್ ಧವನ್ ಎಷ್ಟರ ಮಟ್ಟಿಗೆ ಪರಿಣಾಮಕಾರಿ, ಅನುಭವಿ ಆಟಗಾರ ಅನ್ನೋದು ಎಲ್ಲರಿಗೂ ಅರ್ಥವಾಗುವಂತಿತ್ತು. ರಿಷಭ್ ಪಂತ್ ಕೂಡ ಧವನ್ ಕೊಡುಗೆಯನ್ನು ಶ್ಲಾಘಿಸಿದ್ದರು. ಈ ಸೀಸನ್‌ನಲ್ಲಿ ಧವನ್ ಅದ್ಭುತ ಬ್ಯಾಟಿಂಗ್‌ನೊಂದಿಗೆ ಅತ್ಯಧಿಕ ರನ್ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಏರಿದ್ದಾರೆ ಕೂಡ.
ಡೆಲ್ಲಿ ತಂಡ ಫೀಲ್ಡಿಂಗ್ ಕೋಚ್, ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ಪಂಜಾಬ್ ವಿರುದ್ಧ ಧವನ್ ಅವರ ನಿರ್ಭೀತ ಆಟವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಧವನ್ ಒಬ್ಬರು ಅಪರೂಪದ ಫಿಯರ್ ಲೆಸ್ ಬ್ಯಾಟ್ಸ್‌ಮನ್ ಎಂದು ಕೈಫ್ ಕರೆದಿದ್ದಾರೆ.
'ಶಿಖರ್ ಧವನ್ ಬಲು ಅಪರೂಪದ ಆಟಗಾರ. ಅವರು ಫಿಯರ್‌ಲೆಸ್ ಆಟ ಆಡುವಾಗ ಇನ್ನೂ ಬಲಿಷ್ಠ ಆಟಗಾರರಾಗಿ ಕಾಣಿಸುತ್ತಾರೆ. ಸ್ಟ್ರೈಕ್‌ರೇಟ್ ಜೊತೆ ರಾಜಿ ಮಾಡಿಕೊಳ್ಳದೆಯೇ ಕಟ್ಟಿಂಗ್ ಶಾಟ್‌ಗಳ ತೊಂದರೆ ತೆಗೆದುಕೊಳ್ಳುತ್ತಾರೆ. ಅವರು ಟಿ20 ಕ್ರಿಕೆಟ್ ಬೇಡುವ ಶ್ರೇಷ್ಠ ಆಟಗಾರ. ಗಬ್ಬರ್ ಐಪಿಎಲ್ ಸೂಪರ್ ಸ್ಟಾರ್,' ಎಂದು ಕೈಫ್ ಟ್ವೀಟ್ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications