ಐಪಿಎಲ್: ಒಂದೇ ತಂಡದ ಪರ ಅತಿ ಹೆಚ್ಚು ಪಂದ್ಯಗಳನ್ನಾಡಿರುವ ಆಟಗಾರರ ಪಟ್ಟಿ

ಇಂಡಿಯನ್ ಪ್ರೀಮಿಯರ್ ಲೀಗ್‌ನಂಥ ಫ್ಯಾಂಟಸಿ ಕ್ರಿಕೆಟ್ ಲೀಗ್‌ಗಳಲ್ಲಿ ಹಲವಾರು ವರ್ಷಗಳ ಕಾಲ ಒಂದೇ ತಂಡದ ಪರ ಆಡುವುದು ಸುಲಭದ ಮಾತಲ್ಲ. ಆಟಗಾರನೋರ್ವನ ಆಟದ ಮೇಲೆ ನಂಬಿಕೆ ಇಟ್ಟು ಖರೀದಿಸುವ ಫ್ರಾಂಚೈಸಿಗಳ ಪರ ಉತ್ತಮ ಆಟ ಆಡದೇ ಇದ್ದರೆ ಅಂಥ ಆಟಗಾರರನ್ನು ಮುಲಾಜಿಲ್ಲದೆ ಫ್ರಾಂಚೈಸಿಗಳು ಬಿಟ್ಟುಕೊಡುತ್ತವೆ. ತಮ್ಮನ್ನು ನಂಬಿ ಖರೀದಿಸಿದ ಫ್ರಾಂಚೈಸಿ ಪರ ಅಚ್ಚುಕಟ್ಟಿನ ಆಟ ಆಡಿದರೆ ಮಾತ್ರ ಅದೇ ತಂಡದಲ್ಲಿ ಹಲವಾರು ವರ್ಷಗಳ ಕಾಲ ಇರಲು ಸಾಧ್ಯ.
ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಎಷ್ಟೇ ದೊಡ್ಡ ಮಟ್ಟದ ಬ್ಯಾಟ್ಸ್‌ಮನ್ ಆದರೂ ಕೂಡ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಮಾತ್ರ ತಕ್ಕ ಬೆಲೆ ಸಿಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಹೆಸರು ಮಾಡಿರುವ ಎಷ್ಟೋ ಆಟಗಾರರು ಆವೃತ್ತಿಗಳು ಕಳೆದಂತೆ ತಂಡದಿಂದ ತಂಡಕ್ಕೆ ಪಲಾಯನ ಮಾಡುತ್ತಿರುವುದನ್ನು ನೀವು ಗಮನಿಸಿಯೇ ಇರುತ್ತೀರ.
ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಬಿಟ್ಟುಕೊಡುವುದು ಒಂದೆಡೆಯಾದರೆ, ಇನ್ನೂ ಕೆಲವು ಆಟಗಾರರನ್ನು ಕೆಲ ಐಪಿಎಲ್ ಫ್ರಾಂಚೈಸಿಗಳು ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಸಹ ಬಿಟ್ಟುಕೊಟ್ಟಿಲ್ಲ ಹಾಗೂ ಇನ್ನೂ ಕೆಲವು ಫ್ರಾಂಚೈಸಿಗಳು ಏಳೆಂಟು ವರ್ಷಗಳಿಂದ ಕೆಲವೊಂದಷ್ಟು ಆಟಗಾರರನ್ನು ತಮ್ಮ ತಂಡದಿಂದ ಬಿಟ್ಟುಕೊಡದೆ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗೆ ಒಂದೇ ತಂಡದ ಪರ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡಿರುವ ಐಪಿಎಲ್ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ.

1. ವಿರಾಟ್ ಕೊಹ್ಲಿ
ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟು ಬೇರೆ ಯಾವ ತಂಡಕ್ಕೂ ವಿರಾಟ್ ಕೊಹ್ಲಿ ಆಡಿಲ್ಲ. ಐಪಿಎಲ್ ಇತಿಹಾಸದಲ್ಲಿ ಒಂದೇ ಫ್ರಾಂಚೈಸಿ ಪರ ಆಡಿರುವ ಏಕೈಕ ಆಟಗಾರ ಎಂಬ ದಾಖಲೆ ಸಹ ಕೊಹ್ಲಿ ಹೆಸರಲ್ಲಿದೆ. ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿರುವ ಒಟ್ಟು ಟಿ ಟ್ವೆಂಟಿ ಪಂದ್ಯಗಳ ಸಂಖ್ಯೆ 209. ಈ ಮೂಲಕ ವಿರಾಟ್ ಕೊಹ್ಲಿ ಒಂದೇ ಐಪಿಎಲ್ ತಂಡದ ಪರ ಅತಿಹೆಚ್ಚು ಪಂದ್ಯ ಆಡಿರುವ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

2. ಎಂಎಸ್ ಧೋನಿ
ಶುಕ್ರವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಮೂಲಕ ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ತಮ್ಮ 200ನೇ ಪಂದ್ಯವನ್ನಾಡಿದರು. ಐಪಿಎಲ್ ಆರಂಭವಾದಾಗಿನಿಂದ ಇಲ್ಲಿಯವರೆಗೂ ಧೋನಿ ಸಿ ಎಸ್ ಕೆ ಮತ್ತು ಪುಣೆ ತಂಡಗಳ ಪರ ಆಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವರ್ಷಗಳ ಕಾಲ ನಿಷೇಧ ಹೊಂದದೆ ಇದ್ದಿದ್ದರೆ ಎಂಎಸ್ ಧೋನಿ ಚೆನ್ನೈ ಪರ ಅತಿ ಹೆಚ್ಚು ಪಂದ್ಯಗಳನ್ನಾಡುವ ಮೂಲಕ ವಿರಾಟ್ ಕೊಹ್ಲಿಗಿಂತ ಮುಂಚೂಣಿಯಲ್ಲಿರುತ್ತಿದ್ದರು.

3. ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಸುರೇಶ್ ರೈನಾ 190 ಪಂದ್ಯಗಳನ್ನಾಡಿದ್ದಾರೆ. ರೈನಾ ಅವರು ಸಹ ಎಂಎಸ್ ಧೋನಿ ಅವರಂತೆಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡ 2 ವರ್ಷಗಳ ಕಾಲ ಬ್ಯಾನ್ ಆಗಿದ್ದಾಗ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ದರು. ಇಲ್ಲದೇ ಇದ್ದಿದ್ದರೆ ರೈನಾ ಚೆನ್ನೈ ತಂಡದ ಪರ ಇನ್ನೂ ಹೆಚ್ಚು ಪಂದ್ಯಗಳಲ್ಲಿ ಆಡಿರುತ್ತಿದ್ದರು.

4. ಕೀರನ್ ಪೊಲಾರ್ಡ್
ಕೀರನ್ ಪೊಲಾರ್ಡ್ 2010ರ ಐಪಿಎಲ್ ಟೂರ್ನಿಯಿಂದ ಇಲ್ಲಿಯವರೆಗೂ ಮುಂಬೈ ಇಂಡಿಯನ್ಸ್ ತಂಡದ ಪರ 188 ಪಂದ್ಯಗಳನ್ನಾಡಿದ್ದು, ತಂಡವೊಂದರ ಪರ ಅತಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications