ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ 200ನೇ ಪಂದ್ಯವನ್ನಾಡಲು ಎಂ ಎಸ್ ಧೋನಿ ಸಜ್ಜು

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಮಹತ್ವದ ಮೈಲಿಗಲ್ಲೊಂದನ್ನು ಮುಟ್ಟಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗ ಮಹೇಂದ್ರ ಸಿಂಗ್ ಧೋನಿ 200ನೇ ಪಂದ್ಯವನ್ನಾಡಲು ಧೋನಿ ಸಜ್ಜಾಗಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ಆಡುವ ಮೂಲಕ ಈ ಸಾಧನೆಯನ್ನು ಧೋನಿ ಪೂರ್ಣಗೊಳಿಸಲಿದ್ದಾರೆ.
2008ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ಮುನ್ನಡೆಸುತ್ತಿದ್ದಾರೆ. ಎರಡು ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫಿಕ್ಸಿಂಗ್ ಆರೋಪದಿಂದ ನಿಷೇಧಗೊಂಡಿದ್ದ ಅವಧಿಯಲ್ಲಿ ಮಾತ್ರ ಪುಣೆ ತಂಡವನ್ನು ಧೋನಿ ಪ್ರತಿನಿಧಿಸಿದ್ದಾರೆ.
ಐಪಿಎಲ್‌ನಲ್ಲಿ ಒಟ್ಟು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಹೇಂದ್ರ ಸಿಂಗ್ ಧೋನಿ 175 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಉಳಿದಂತೆ 24 ಪಂದ್ಯಗಳು ಚಾಂಪಿಯನ್ಸ್ ಲೀಗ್‌ನಲ್ಲಿ ಸಿಎಸ್‌ಕೆಯನ್ನು ಮುನ್ನಡೆಸಿದ್ದಾರೆ. ಹೀಗೆ ಒಟ್ಟಾರೆ 199 ಪಂದ್ಯಗಳಲ್ಲಿ ಈವರೆಗೆ ಕಳದಿ ಜರ್ಸಿಯಲ್ಲಿ ಧೋನಿ ಮೈದಾನಕ್ಕೆ ಇಳಿದಿದ್ದಾರೆ.
ಸಿಎಸ್‌ಕೆ ಪರವಾಗಿ ಆಡಿರುವ 199 ಪಂದ್ಯಗಳಲ್ಲಿ ಧೋನಿ 4507 ರನ್‌ಗಳಿಸಿದ್ದಾರೆ. 40.60 ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿರುವ ಮಾಹಿ 138.80 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. 84 ರನ್ ಸಿಎಸ್‌ಕೆ ಪರ ಧೋನಿ ಹೈಯೆಸ್ಟ್ ಸ್ಕೋರ್ ಎನಿಸಿದೆ.
ಐಪಿಎಲ್‌ನಲ್ಲಿ ಧೋನಿ ಈವರೆಗೆ 22 ಅರ್ಧ ಶತಕವನ್ನು ದಾಖಲಿಸಿದ್ದಾರೆ. 308 ಬೌಂಡರಿ ಹಾಗೂ 212 ಸಿಕ್ಸರ್‌ಗಳು ಧೋನಿ ಖಾತೆಯಲ್ಲಿದೆ. ನಾಯಕನಾಗಿ ಮೂರು ಚಾರಿ ಚೆನ್ನೈ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿರುವ ಧೋನಿ ಎರಡು ಬಾರಿ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications