For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ 15ನೇ ಅರ್ಧಶತಕ ಬಾರಿಸಿದ ಕ್ವಿಂಟನ್ ಡಿ ಕಾಕ್

IPL 2021: Mumbai Indians batsman Quinton de Kock slams 15th IPL fifty

ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 29) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 25ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 7 ವಿಕೆಟ್ ಸುಲಭ ಜಯ ಗಳಿಸಿದೆ. ಆರಂಭಿಕ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿ ಕಾಕ್ ಅರ್ಧ ಶತಕದೊಂದಿಗೆ ಮುಂಬೈ 3ನೇ ಜಯ ದಾಖಲಿಸಿದೆ.

ಆರಂಭಿಕರಾಗಿ ಬಂದಿದ್ದ ಕ್ವಿಂಟನ್ ಡಿ ಕಾಕ್ 50 ಎಸೆತಗಳಿಗೆ ಅಜೇಯ 70 ರನ್‌ ಗಳಿಸಿದ್ದರು. ಇದರಲ್ಲಿ 6 ಫೋರ್ಸ್, 2 ಸಿಕ್ಸರ್ ಸೇರಿತ್ತು. ಇದು ಡಿ ಕಾಕ್ ಐಪಿಎಲ್‌ನಲ್ಲಿ ಬಾರಿಸಿದ 15ನೇ ಅರ್ಧ ಶತಕ. 71ನೇ ಐಪಿಎಲ್ ಪಂದ್ಯದಲ್ಲಿ ಡಿ ಕಾಕ್ ಈ ಸಾಧನೆ ಮಾಡಿದ್ದಾರೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಜಸ್ಥಾನ್ ರಾಯಲ್ಸ್, ಜೋಸ್ ಬಟ್ಲರ್ 41, ಯಶಸ್ವಿ ಜೈಸ್ವಾಲ್ 32, ಸಂಜು ಸ್ಯಾಮ್ಸನ್ 42, ಶಿವಂ ದೂಬೆ 35, ಡೇವಿಡ್ ಮಿಲ್ಲರ್ 7, ರಿಯಾನ್ ಪರಾಗ್ 8 ರನ್‌ನೊಂದಿಗೆ 20 ಓವರ್‌ಗೆ 4 ವಿಕೆಟ್‌ ಕಳೆದು 171 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 14, ಕ್ವಿಂಟನ್ ಡಿ ಕಾಕ್ 70, ಸೂರ್ಯಕುಮಾರ್ ಯಾದವ್ 16, ಕೃನಾಲ್ ಪಾಂಡ್ಯ 39, ಕೀರನ್ ಪೊಲಾರ್ಡ್ 16 ರನ್‌ನೊಂದಿಗೆ 18.3ನೇ ಓವರ್‌ಗೆ 3 ವಿಕೆಟ್ ಕಳೆದು 172 ರನ್ ಗಳಿಸಿ ಗೆಲುವನ್ನಾಚರಿಸಿತು.

Story first published: Friday, April 30, 2021, 9:54 [IST]
Other articles published on Apr 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+