For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ದಾಖಲೆ ಬರೆದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್

IPL 2021: Mumbai Indians creates record in IPL for highest total

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 8) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 55ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಹೊಸ ದಾಖಲೆ ನಿರ್ಮಿಸಿದೆ. ಐಪಿಎಲ್‌ನಲ್ಲಿ ಅತೀ ಹೆಚ್ಚು ಟೋಟಲ್ ಗಳಿಸಿದ ತಂಡಗಳಲ್ಲಿ ಮುಂಬೈ ಮತ್ತೊಂದು ಸಾಧನೆ ಮಾಡಿದೆ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಈ ದಾಖಲೆ ನಿರ್ಮಿಸಿದೆ.

ಶುಕ್ರವಾರದ ಪಂದ್ಯದಲ್ಲಿ ಮುಂಬೈ ಎರಡು ದಾಖಲೆಗಳನ್ನು ನಿರ್ಮಿಸಿದೆ. ಐಪಿಎಲ್ 2021ರ ಸೀಸನ್‌ನಲ್ಲಿ ತಂಡವೊಂದು ಬಾರಿಸಿದ ಅತೀ ದೊಡ್ಡ ಟೋಟಲ್‌ ಆಗಿ ಮುಂಬೈ ಬಾರಿಸಿದ ರನ್ ಗುರುತಿಸಿಕೊಂಡಿದೆ. ಅಲ್ಲದೆ, ಒಟ್ಟಾರೆ ಐಪಿಎಲ್‌ನಲ್ಲಿ ಮುಂಬೈ ಬಾರಿಸಿರುವ ದೊಡ್ಡ ಮೊತ್ತಗಳಲ್ಲಿ ಮತ್ತೊಂದು ಮೊತ್ತ ಸೇರ್ಪಡೆಯಾಗಿದೆ

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಮುಂಬೈ ಇಂಡಿಯನ್ಸ್, ರೋಹಿತ್ ಶರ್ಮಾ 18, ಇಶಾನ್ ಕಿಶನ್ 84 (32 ಎಸೆತ), ಸೂರ್ಯಕುಮಾರ್ ಯಾದವ್ 82 (40), ಹಾರ್ದಿಕ್ ಪಾಂಡ್ಯ 10, ಕೀರನ್ ಪೊಲಾರ್ಡ್ 13, ಕೃನಾಲ್ ಪಾಂಡ್ಯ 9, ಜೇಮ್ಸ್ ನೀಶಮ್ 0, ನಾಥನ್ ಕೌಲ್ಟರ್-ನೈಲ್ 3, ಜಸ್ಪ್ರೀತ್ ಬೂಮ್ರಾ 5 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 235 ರನ್ ಗಳಿಸಿತು. ಇದರೊಂದಿಗೆ ದಾಖಲೆ ನಿರ್ಮಾಣವಾಗಿದೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಬಾರಿಸಿರುವ ಅತೀ ದೊಡ್ಡ ಟೋಟಲ್‌ಗಳ ಪಟ್ಟಿ
* 235/9, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ, ಅಬುಧಾಬಿ, 2021*
* 223/6, ಪಂಜಾಬ್ ಕಿಂಗ್ಸ್ ವಿರುದ್ಧ, ಮುಂಬೈ, 2017
* 219/6, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ದೆಹಲಿ, 2021

Story first published: Saturday, October 9, 2021, 10:44 [IST]
Other articles published on Oct 9, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+