ಐಪಿಎಲ್ 2021: ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ, ಬಿಟ್ಟಿರುವ ಆಟಗಾರರ ಪಟ್ಟಿ

ಮುಂಬೈ: 14ನೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನತ್ತ ಸಿದ್ಧತೆ ನಡೆಸುತ್ತಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ (ಎಂಐ) ಫ್ರಾಂಚೈಸಿ 2021ರ ಸೀಸನ್‌ಗೆ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಟ್ಟುಕೊಡುವ ಆಟಗಾರರ ಪಟ್ಟಿಯನ್ನು ಜನವರಿ 20ರ ಬುಧವಾರ ಪ್ರಕಟಿಸಿದೆ.
ದಾಖಲೆಯ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಕಳೆದ ಸೀಸನ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡದ ಅಥವಾ ಉತ್ತಮ ಪ್ರದರ್ಶನ ನೀಡದ ಆಟಗಾರರನ್ನು ಈ ಸಾರಿ ಕೈ ಬಿಟ್ಟಿದೆ. ಎಂಐ ಹೊರ ಹಾಕಿರುವ ಆಟಗಾರರ ಪಟ್ಟಿಯಲ್ಲಿ ಒಟ್ಟು ಏಳು ಹೆಸರುಗಳಿವೆ.
ಎಂಐ ಕೈ ಬಿಟ್ಟಿರುವ ಆಟಗಾರರ ಪಟ್ಟಿ
ಮಿಚೆಲ್ ಮೆಕ್‌ಕ್ಲೆನೆಗನ್, ಜೇಮ್ಸ್ ಪ್ಯಾಟಿನ್ಸನ್, ಲಸಿತ್ ಮಾಲಿಂಗ, ನಾಥನ್ ಕೌಲ್ಟರ್-ನೈಲ್, ಶೆರ್ಫೇನ್ ರುದರ್‌ಫೋರ್ಡ್, ದಿಗ್ವಿಜಯ್ ದೇಶ್‌ಮುಖ್, ಪ್ರಿನ್ಸ್ ಬಲ್ವಂತ್ ರೈ ಸಿಂಗ್.
ಮುಂಬೈ ಇಂಡಿಯನ್ಸ್ ಉಳಿಸಿಕೊಂಡಿರುವ ಆಟಗಾರರು
ರೋಹಿತ್ ಶರ್ಮಾ (ಸಿ), ಆದಿತ್ಯ ತಾರೆ, ಅನ್ಮೋಲ್ಪ್ರೀತ್ ಸಿಂಗ್, ಅನುಕೂಲ್ ರಾಯ್, ಧವಲ್ ಕುಲಕರ್ಣಿ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಜಸ್ಪ್ರೀತ್ ಬೂಮ್ರಾ, ಜಯಂತ್ ಯಾದವ್, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಕ್ವಿಂಟನ್ ಡಿ ಕಾಕ್, ರಾಹುಲ್ ಚಹರ್, ಸೂರ್ಯಕುಮಾರ್ ಯಾದ್, ಕ್ರಿಸ್ ಲಿನ್, ಮೋಹ್ಸಿನ್ ಖಾನ್, ಸೌರಭ್ ತಿವಾರಿ, ಟ್ರೆಂಟ್ ಬೌಲ್ಟ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications