ಐಪಿಎಲ್ 2021: ಎಂಐ vs ಡಿಸಿ ಪಂದ್ಯದಲ್ಲಿ ಆಗಲಿರುವ ದಾಖಲೆಗಳಿವು!

ಶಾರ್ಜಾ: ಅಕ್ಟೋಬರ್ 2ರಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 46ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಹಿಂದಿನ ಸೀಸನ್‌ನಲ್ಲಿ ಫೈನಲ್‌ನಲ್ಲಿ ಸೆಣಸಾಡಿದ್ದವು. ಇದರಲ್ಲಿ ಮುಂಬೈ ಪಂದ್ಯ ಗೆದ್ದು ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.
ಶನಿವಾರ ಡಬಲ್ ಹೆಡ್ಡರ್ ಪಂದ್ಯಗಳಿವೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಡಿದರೆ, ದ್ವಿತೀಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಮುಂಬೈ-ಡೆಲ್ಲಿ ಕದನ ಹೆಚ್ಚು ಹುತೂಹಲ ಮೂಡಿಸಿದೆ.
ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಯುವ ಆಟಗಾರ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದಲ್ಲಿ ಹಲವಾರು ದಾಖಲೆಗಳಾಗಲಿವೆ. ಇತ್ತಂಡಗಳ ಮುಖಾಮುಖಿಯಲ್ಲಿ ಆಗಲಿರುವ ಕುತೂಹಲಕಾರಿ ದಾಖಲೆಗಳ ಪಟ್ಟಿ ಇಲ್ಲಿದೆ.
ಎಂಐ vs ಡಿಸಿ ಪಂದ್ಯದಲ್ಲಿ ಆಗಲಿರುವ ದಾಖಲೆಗಳ ಪಟ್ಟಿ
* ಎಂಐ ನಾಯಕ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಸಿಕ್ಸರ್ ನಲ್ಲಿ ದಾಖಲೆ ನಿರ್ಮಿಸುವುದರಲ್ಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಶರ್ಮಾ ಒಟ್ಟಾರೆ 398 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇನ್ನು ಕೇವಲ 2 ಸಿಕ್ಸರ್ ಬಾರಿಸಿದರೆ ಶರ್ಮಾ ಹೆಸರಿನಲ್ಲಿ ಟಿ20 ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಆಗಲಿವೆ.
* ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ 100 ಸಿಕ್ಸರ್ ದಾಖಲಿಸಲು ಅವಕಾಶವಿದೆ. ಇನ್ನು 3 ಸಿಕ್ಸರ್ ಬಾರಿಸಿದರೆ ಪಾಂಡ್ಯ ಐಪಿಎಲ್‌ನಲ್ಲಿ 100 ಸಿಕ್ಸರ್ ಬಾರಿಸಿದಂತಾಗುತ್ತದೆ.
* ಜಸ್‌ಪ್ರೀತ್ ಬೂಮ್ರಾ vs ರಿಷಭ್ ಪಂತ್: ಐಪಿಎಲ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಅವರು ರಿಷಭ್ ಪಂತ್ ಅವರನ್ನು 6 ಬಾರಿ ಔಟ್ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಮತ್ತೆ ಪಂತ್ ಬೂಮ್ರಾಗೆ ವಿಕೆಟ್ ಒಪ್ಪಿಸಿದರೆ, 7 ಬಾರಿ ಔಟ್ ಆದಂತಾಗುತ್ತದೆ.
* ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಇಶನ್ ಕಿಶನ್ ಇನ್ನು 1 ರನ್ ಗಳಿಸಿದರೆ ಐಪಿಎಲ್‌ನಲ್ಲಿ ಕಿಶನ್ ಎಂಐ ಪರ 1000 ರನ್ ಬಾರಿಸಿದಂತಾಗುತ್ತದೆ.
* ಡೆಲ್ಲಿ ಕ್ಯಾಪಿಟಲ್ಸ್ ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ಇನ್ನು 67 ರನ್ ಬಾರಿಸಿದರೆ, ಡಿಸಿ ಪರ ಧವನ್ ಐಪಿಎಲ್‌ನಲ್ಲಿ 2000 ರನ್ ಬಾರಿಸಿದಂತಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications