ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್

ಸಂಜು ಸ್ಯಾಮ್ಸನ್ ಸೋಮವಾರ ( ಏಪ್ರಿಲ್ 12 ) ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದಲ್ಲಿ 63 ಎಸೆತಗಳಿಗೆ 119 ರನ್ ಗಳಿಸುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೆಂಟ್ ಆಗುತ್ತಿದ್ದಾರೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಸಂಜು ಸ್ಯಾಮ್ಸನ್ ಬಾರಿಸಿದ ಈ ಶತಕದಿಂದ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದಾರೆ. ಅದರಲ್ಲಿ ವಿಶೇಷವಾಗಿ ಎಬಿ ಡಿವಿಲಿಯರ್ಸ್ ಮಾಡಿದ್ದ ದಾಖಲೆಯೊಂದನ್ನು ಸಂಜು ಸ್ಯಾಮ್ಸನ್ ಸರಿದೂಗಿಸಿದ್ದಾರೆ. ಹೌದು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇತಿಹಾಸದಲ್ಲಿ ಆರಂಭಿಕ ಆಟಗಾರನಾಗಿ ಬರದೇ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಅವರ ಜತೆ ಅಗ್ರಸ್ಥಾನವನ್ನು ಸಂಜು ಸ್ಯಾಮ್ಸನ್ ಹಂಚಿಕೊಂಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಎಬಿ ಡಿವಿಲಿಯರ್ಸ್ ಇದುವರೆಗೂ 3 ಬಾರಿ ಆರಂಭಿಕ ಆಟಗಾರನಾಗಿ ಆಡದೇ ಶತಕಗಳನ್ನು ಬಾರಿಸಿದ್ದಾರೆ. ಇದೀಗ ಸಂಜು ಸ್ಯಾಮ್ಸನ್ ಅವರು ಸಹ ಆರಂಭಿಕ ಆಟಗಾರನಾಗಿ ಆಡದೇ 3 ಶತಕಗಳನ್ನು ಬಾರಿಸಿ ಎಬಿ ಡಿ ವಿಲಿಯರ್ಸ್ ಅವರ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಎಬಿ ಡಿವಿಲಿಯರ್ಸ್ ಮತ್ತು ಸಂಜು ಸ್ಯಾಮ್ಸನ್ ಹೊರತುಪಡಿಸಿ ಉಳಿದಂತೆ ಸುರೇಶ್ ರೈನಾ, ರೋಹಿತ್ ಶರ್ಮ, ಯೂಸುಫ್ ಪಠಾಣ್, ರಿಷಭ್ ಪಂತ್, ಸ್ಟೀವ್ ಸ್ಮಿತ್, ಆ್ಯಂಡ್ರ್ಯೂ ಸೈಮಂಡ್ಸ್ , ಡೇವಿಡ್ ಮಿಲ್ಲರ್, ವೃದ್ಧಿಮಾನ್ ಸಹಾ, ಕೆವಿನ್ ಪೀಟರ್ಸನ್, ಬೆನ್ ಸ್ಟೋಕ್ಸ್ ಮತ್ತು ಮೈಕಲ್ ಹಸ್ಸಿ ತಲಾ 1 ಶತಕವನ್ನು ಆರಂಭಿಕ ಆಟಗಾರರಾಗಿ ಬರದೇ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications