ಐಪಿಎಲ್ ಹರಾಜು 2021: ಆಟಗಾರರ ಅಂಕಿ-ಅಂಶಗಳು, ಮಾಹಿತಿ ಪ್ರಕಟ

ಬೆಂಗಳೂರು: 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ಈಗಾಗಲೇ ತಯಾರಿ ಶುರುವಾಗಿದೆ. ಇದೇ ತಿಂಗಳು ಅಂದರೆ ಫೆಬ್ರವರಿ 18ಕ್ಕೆ ಚೆನ್ನೈನಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಐಟೂರ್ನಿಗೂ ಮುನ್ನ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳಲಿರುವ ಆಟಗಾರರ ಬಗ್ಗೆ ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅಂಕಿ-ಅಂಶಗಳನ್ನು ನೀಡಿದೆ. 2021ರ ಐಪಿಎಲ್ ಹರಾಜುಗೆ ಒಟ್ಟಿಗೆ 1097 ಆಟಗಾರರು ನೋಂದಾಯಿಸಿಕೊಂಡಿದ್ದಾರೆ.
ಫೆಬ್ರವರಿ 4ರಂದು ಐಪಿಎಲ್ ಹರಾಜಿಗೆ ಆಟಗಾರರ ನೋಂದಾವಣೆ ಪ್ರಕ್ರಿಯೆ ಕೊನೆಗೊಂಡಿದೆ. ಹರಾಜಿಗೆ ನೋಂದಾಯಿಸಿಕೊಂಡ 1097 ಮಂದಿಯಲ್ಲಿ 814 ಮಂದಿ ಭಾರತೀಯರು, 283 ಜನ ವಿದೇಶಿಯರು. ಫೆಬ್ರವರಿ 18ರಂದು ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ 3 pmಗೆ ಆರಂಭಗೊಳ್ಳಲಿದೆ.
2021ರ ಐಪಿಎಲ್ ಆಟಗಾರರ ಹರಾಜಿಗೆ ಸಂಬಂಧಿಸಿ ಕುತೂಹಲಕಾರಿ ಅಂಕಿ-ಅಂಶಗಳು, ಪ್ರಮುಖ ಮಾಹಿತಿಗಳು ಇಲ್ಲಿವೆ ನೋಡಿ.

ಕ್ಯಾಪ್ಡ್, ಅನ್‌ಕ್ಯಾಪ್ಡ್ ಆಟಗಾರರು
* ಐಪಿಎಲ್‌ಗಾಗಿ ನೋಂದಾಯಿಸಿಕೊಂಡ 1097 ಮಂದಿ ಆಟಗಾರರಲ್ಲಿ 207 ಮಂದಿ ಕ್ಯಾಪ್ಡ್ ಆಟಗಾರರು.
* 863 ಮಂದಿ ಅನ್‌ಕ್ಯಾಪ್ಡ್ ಆಟಗಾರರು.
* ಕ್ಯಾಪ್ಡ್ ಭಾರತೀಯ ಆಟಗಾರರು 21
* ಕ್ಯಾಪ್ಡ್ ಅಂತಾರಾಷ್ಟ್ರೀಯ ಆಟಗಾರರು 186 ಮಂದಿ.

ಕನಿಷ್ಠ 1 ಐಪಿಎಲ್ ಆಡಿದ ಆಟಗಾರರು
* ಐಪಿಎಲ್ 2021ಕ್ಕೆ ನೋಂದಾಯಿತರಲ್ಲಿ ಕನಿಷ್ಠ 1 ಐಪಿಎಲ್‌ನಲ್ಲಿ ಆಡಿದ ಆಟಗಾರರ ಸಂಖ್ಯೆ 50 ಇದೆ.
* ಕನಿಷ್ಠ 1 ಐಪಿಎಲ್ ಆಡಿದ ವಿದೇಶಿ ಅನ್‌ಕ್ಯಾಪ್ಡ್ ಆಟಗಾರರ ಸಂಖ್ಯೆ 2.
* ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು 743.
* ಅನ್‌ಕ್ಯಾಪ್ಡ್ ಅಂತಾರಾಷ್ಟ್ರೀಯ ಆಟಗಾರರು 68.

ದೇಶಗಳಿಗಾನುಸಾರ ಆಟಗಾರರ ಸಂಖ್ಯೆ
* ಅಫ್ಘಾನಿಸ್ತಾನ 30
* ಆಸ್ಟ್ರೇಲಿಯಾ 42
* ಬಾಂಗ್ಲಾದೇಶ 5
* ಇಂಗ್ಲೆಂಡ್ 21
* ಐರ್ಲೆಂಡ್ 2
* ನೇಪಾಳ 8
* ನೆದರ್ಲ್ಯಾಂಡ್ಸ್ 1
* ನ್ಯೂಜಿಲೆಂಡ್ 29
* ಸ್ಕಾಟ್ಲೆಂಡ್ 7
* ದಕ್ಷಿಣ ಆಫ್ರಿಕಾ 38
* ಶ್ರೀಲಂಕಾ 31
* ಯುಎಇ 9
* ಯುಎಸ್‌ಎ 2
* ವೆಸ್ಟ್ ಇಂಡೀಸ್ 56
* ಜಿಂಬಾಬ್ವೆ 2
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications