Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2021 Points Table: ಐಪಿಎಲ್: ಬೆಂಗಳೂರು ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆರಿದ ಚೆನ್ನೈ

IPL 2021 Points Table, Orange and Purple Cap holders list after CSK vs RCB Match

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 35ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಜಯ ಗಳಿಸಿದೆ. ದೇವದತ್ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿ ಅದ್ಭುತ ಆರಂಭಿಕ ಆಟದ ಹೊರತಾಗಿಯೂ ಬೆಂಗಳೂರು ನಿರಾಸೆ ಅನುಭವಿಸಿದೆ. ಈ ಪಂದ್ಯದ ಬಳಿಕ ಐಪಿಎಲ್ ಅಂಕಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ನಾಯಕ ವಿರಾಟ್ ಕೊಹ್ಲಿ, 53, ದೇವದತ್ ಪಡಿಕ್ಕಲ್ 70, ಎಬಿ ಡಿ ವಿಲಿಯರ್ಸ್ 12, ಗ್ಲೆನ್ ಮ್ಯಾಕ್ಸ್‌ವೆಲ್ 11, ಹರ್ಷಲ್ ಪಟೇಲ್ 3, ಟಿಮ್ ಡೇವಿಡ್ 1, ವನಿಂದು ಹಸರಂಗ 1 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 156 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ 38, ಫಾಫ್ ಡು ಪ್ಲೆಸಿಸ್ 31, ಮೊಯೀಸ್ ಅಲಿ 23, ಅಂಬಾಟಿ ರಾಯುಡು 32, ಸುರೇಶ್ ರೈನಾ 17, ಎಂಎಸ್ ಧೋನಿ 11 ರನ್‌ನೊಂದಿಗೆ 18.1 ಓವರ್‌ಗೆ 4 ವಿಕೆಟ್ ಕಳೆದು 157 ರನ್ ಗಳಿಸಿ ಗೆಲುವನ್ನಾಚರಿಸಿತು.

ಈ ಪಂದ್ಯ ಬಳಿಕ ಧೋನಿ ನಾಯಕತ್ವದ ಸಿಎಸ್‌ಕೆ ಐಪಿಎಲ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಆಡಿರುವ 9 ಪಂದ್ಯಗಳಲ್ಲಿ 7 ಜಯದೊಂದಿಗೆ 14 ಪಾಯಿಂಟ್ಸ್ ಕಲೆ ಹಾಕಿ ಚೆನ್ನೈ ನಂ.1 ಸ್ಥಾನಕ್ಕೇರಿದೆ. ಸಿಎಸ್‌ಕೆ ಖಾತೆಯಲ್ಲಿ +1.185 ರೇಟಿಂಗ್ ಪಾಯಿಂಟ್ಸ್ ಕೂಡ ಇದೆ. ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವಿದೆ.

ಡೆಲ್ಲಿ ತಂಡ ಕೂಡ ಆಡಿರುವ 9 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧ ಸೋತರೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು 9ರಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿದೆ. 10 ಪಾಯಿಂಟ್ಸ್‌ನೊಂದಿಗೆ ಆರ್‌ಸಿಬಿ ತೃತೀಯ ಸ್ಥಾನದಲ್ಲಿ ಉಳಿದುಕೊಂಡಿದೆ.

ಆರ್‌ಸಿಬಿ ಐಪಿಎಲ್ ಆರಂಭಿಕ ಹಂತದಿಂದಲೂ ಉತ್ತಮ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಮೂರೊಳಗೆ ಸ್ಥಾನ ಉಳಿಸಿಕೊಂಡಿದೆ. ಇನ್ನುಳಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಆರ್‌ಸಿಬಿಗೆ ಪ್ಲೇ ಆಫ್ಸ್ ಅವಕಾಶವಿದೆ. ಇನ್ನೂ 5 ಪಂದ್ಯಗಳು ಆರ್‌ಸಿಬಿ ಕೈಯಲ್ಲಿದೆ. ಅದರಲ್ಲಿ ಚೆನ್ನಾಗಿ ಆಡಬೇಕಷ್ಟೇ.

ಸಿಎಸ್‌ಕೆ vs ಆರ್‌ಸಿಬಿ ಪಂದ್ಯದ ಬಳಿಕ ಅತ್ಯಧಿಕ ರನ್‌ಗಾಗಿ ಕೊಡಲಾಗುವ ಆರೆಂಜ್ ಕ್ಯಾಪ್‌ ಡೆಲ್ಲಿ ಕ್ಯಾಪಿಟಲ್ಸ್‌ನ ಶಿಖರ್ ಧವನ್ ಕೈಯಲ್ಲಿದೆ. ಈಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್‌ನ ಕೆಎಲ್ ರಾಹುಲ್ ಇದ್ದಾರೆ. ಇನ್ನು ಅತ್ಯಧಿಕ ವಿಕೆಟ್‌ಗಾಗಿ ಕೊಡುವ ಪರ್ಪಲ್ ಕ್ಯಾಪ್ ಆರ್‌ಸಿಬಿಯ ಹರ್ಷಲ್ ಪಟೇಲ್ ಕೈಯಲ್ಲಿದೆ. ದ್ವಿತೀಯ ಸ್ಥಾನದಲ್ಲಿ ಡೆಲ್ಲಿಯ ಆವೇಶ್ ಖಾನ್ ಇದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್ XI
ಋತುರಾಜ್ ಗಾಯಕವಾಡ್, ಫಾಫ್ ಡು ಪ್ಲೆಸಿಸ್, ಮೊಯೀನ್ ಅಲಿ, ಅಂಬಟಿ ರಾಯುಡು, ಸುರೇಶ್ ರೈನಾ, ಎಂಎಸ್ ಧೋನಿ (ಡಬ್ಲ್ಯೂ/ಸಿ), ರವೀಂದ್ರ ಜಡೇಜಾ, ಡ್ವೇನ್ ಬ್ರಾವೋ, ಶಾರ್ದೂಲ್ ಠಾಕೂರ್, ದೀಪಕ್ ಚಾಹರ್, ಜೋಶ್ ಹೇಜಲ್‌ವುಡ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಯಿಂಗ್ XI
ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ಡಬ್ಲ್ಯೂ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಟಿಮ್ ಡೇವಿಡ್, ವಾನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.

Story first published: Saturday, September 25, 2021, 10:29 [IST]
Other articles published on Sep 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+