PBKS vs KKR ಪಂದ್ಯದ ಬಳಿಕ ಆರೆಂಜ್, ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆ

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದ್ದು ಯಾವ ತಂಡ ಪ್ಲೇಆಫ್ ಪ್ರವೇಶಿಸಲಿದೆ, ಯಾವ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿ ವಿಫಲವಾಗಿ ಟೂರ್ನಿಯಿಂದ ಹೊರ ಬೀಳಲಿದೆ ಎನ್ನುವುದರ ಕುರಿತು ಚರ್ಚೆ ಮತ್ತು ಲೆಕ್ಕಾಚಾರಗಳು ಜೋರಾಗಿವೆ.
ಇತ್ತೀಚೆಗಷ್ಟೇ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 11 ಪಂದ್ಯಗಳನ್ನಾಡಿದ್ದು 9 ಪಂದ್ಯಗಳಲ್ಲಿ ಜಯ ಸಾಧಿಸುವುದರ ಮೂಲಕ 18 ಅಂಕಗಳನ್ನು ಪಡೆದುಕೊಂಡು ಟೂರ್ನಿಯಲ್ಲಿ ಇನ್ನೂ ತನ್ನ ಪಾಲಿನ 3 ಲೀಗ್ ಪಂದ್ಯಗಳು ಬಾಕಿ ಇರುವಾಗಲೇ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಟ್ಟಿದೆ.
ಇನ್ನು 11 ಪಂದ್ಯಗಳನ್ನಾಡಿ 8 ಪಂದ್ಯಗಳಲ್ಲಿ ಜಯ ಸಾಧಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ದ್ವಿತೀಯ ಸ್ಥಾನದಲ್ಲಿದೆ. ಶುಕ್ರವಾರ ( ಅಕ್ಟೋಬರ್ 1 ) ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಗೆಲುವು ಸಾಧಿಸಿದ ಕಾರಣ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಅಧಿಕೃತವಾಗಿ ಪ್ಲೇ ಆಫ್ ಹಂತಕ್ಕೆ ಪ್ರವೇಶವನ್ನು ಪಡೆದುಕೊಂಡಿತು. ಹೀಗೆ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದ ಫಲಿತಾಂಶ ಅಂಕಪಟ್ಟಿಯಲ್ಲಿ ಕೆಲ ಬದಲಾವಣೆ ತರುವುದು ಮಾತ್ರವಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್ ಪ್ರವೇಶಿಸುವಲ್ಲಿಯೂ ಪ್ರಭಾವವನ್ನು ಬೀರಿತು.
ಹೌದು, ಅಕ್ಟೋಬರ್ 1ರ ಶುಕ್ರವಾರದಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ 5 ವಿಕೆಟ್‍ಗಳ ಗೆಲುವನ್ನು ದಾಖಲಿಸಿ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಏರಿದೆ, ಈ ಪಂದ್ಯದಲ್ಲಿ ಸೋತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಈ ಪಂದ್ಯದ ನಂತರ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಅಂಕಪಟ್ಟಿ, ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿ ಹೇಗಿದೆ ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಓದಿ..

ಅಂಕಪಟ್ಟಿಯಲ್ಲಿ ತಂಡಗಳ ಸ್ಥಾನ ಹೀಗಿದೆ
1. ಚೆನ್ನೈ ಸೂಪರ್ ಕಿಂಗ್ಸ್ - 18 ಅಂಕಗಳು
2. ಡೆಲ್ಲಿ ಕ್ಯಾಪಿಟಲ್ಸ್ - 16 ಅಂಕಗಳು
3. ರಾಯಲ್ ಚಾಲೆಂಜರ್ಸ್ ಬೆಂಗಳೂರು - 14 ಅಂಕಗಳು
4. ಕೋಲ್ಕತ್ತ ನೈಟ್ ರೈಡರ್ಸ್ - 10 ಅಂಕಗಳು
5. ಪಂಜಾಬ್ ಕಿಂಗ್ಸ್ - 10 ಅಂಕಗಳು
6. ಮುಂಬೈ ಇಂಡಿಯನ್ಸ್ - 10 ಅಂಕಗಳು
7. ರಾಜಸ್ಥಾನ್ ರಾಯಲ್ಸ್ - 8 ಅಂಕಗಳು
8. ಸನ್ ರೈಸರ್ಸ್ ಹೈದರಾಬಾದ್ - 4 ಅಂಕಗಳು
( ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 45 ಪಂದ್ಯಗಳ ನಂತರ )

ಆರೆಂಜ್ ಕ್ಯಾಪ್ ಪಟ್ಟಿ - ಟಾಪ್ 5 ಬ್ಯಾಟ್ಸ್‌ಮನ್‌ಗಳು
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ 55 ಎಸೆತಗಳಲ್ಲಿ 67 ರನ್ ಬಾರಿಸುವುದರ ಮೂಲಕ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದು ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ ಈ ಕೆಳಕಂಡಂತಿದೆ.
1. ಕೆಎಲ್ ರಾಹುಲ್ - 489 ರನ್
2. ಶಿಖರ್ ಧವನ್ - 454 ರನ್
3. ಸಂಜು ಸ್ಯಾಮ್ಸನ್ - 452 ರನ್
4. ಫಾಫ್ ಡು ಪ್ಲೆಸಿಸ್ - 435 ರನ್
5. ರುತುರಾಜ್ ಗಾಯಕ್ವಾಡ್ - 407 ರನ್
( ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 45 ಪಂದ್ಯಗಳ ನಂತರ )

ಪರ್ಪಲ್ ಕ್ಯಾಪ್ ಪಟ್ಟಿ - ಟಾಪ್ 5 ಬೌಲರ್‌ಗಳು
1. ಹರ್ಷಲ್ ಪಟೇಲ್ - 26 ವಿಕೆಟ್‍ಗಳು
2. ಆವೇಶ್ ಖಾನ್ - 18 ವಿಕೆಟ್‍ಗಳು
3. ಜಸ್ಪ್ರೀತ್ ಬೂಮ್ರಾ - 16 ವಿಕೆಟ್‍ಗಳು
4. ಅರ್ಷದೀಪ್ ಸಿಂಗ್ - 16 ವಿಕೆಟ್‍ಗಳು
5. ಮೊಹಮ್ಮದ್ ಶಮಿ - 15 ವಿಕೆಟ್‍ಗಳು
( ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ 45 ಪಂದ್ಯಗಳ ನಂತರ )
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications