MI vs RR ಪಂದ್ಯದ ಬಳಿಕ ಆರೆಂಜ್ ಹಾಗೂ ಪರ್ಪಲ್ ಕ್ಯಾಪ್ ಮತ್ತು ಅಂಕಪಟ್ಟಿಯಲ್ಲಾದ ಬದಲಾವಣೆ ಹೀಗಿದೆ

ಯುಎಇಯಲ್ಲಿ ನಡೆಯುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ಮುಗಿಯುವ ಹಂತಕ್ಕೆ ಬಂದಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಪ್ಲೇ ಆಫ್ ಸುತ್ತು ನಡೆಯಲಿದೆ.
ಇನ್ನು ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪ್ಲೇ ಆಫ್ ಹಂತಕ್ಕೆ ಈಗಾಗಲೇ ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಅಧಿಕೃತವಾಗಿ ಪ್ರವೇಶವನ್ನು ಪಡೆದುಕೊಂಡಿವೆ. ಹೀಗೆ ಈ ಮೂರೂ ತಂಡಗಳು ಅಧಿಕೃತವಾಗಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಿದ ನಂತರ ನಾಲ್ಕನೇ ತಂಡವಾಗಿ ಯಾವ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸಲಿವೆ ಎಂಬ ಕುತೂಹಲ ಇತ್ತೀಚಿಗೆ ನಡೆದ ಕೆಲ ಪಂದ್ಯಗಳ ನಂತರ ಸಾಕಷ್ಟು ದೊಡ್ಡ ಮಟ್ಟಕ್ಕೆ ತಲುಪಿದೆ.
ಪ್ಲೇ ಆಫ್ ಸುತ್ತಿಗೆ ನಾಲ್ಕನೇ ತಂಡವಾಗಿ ಪ್ರವೇಶ ಪಡೆದುಕೊಳ್ಳಲು ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪೈಪೋಟಿಗೆ ಬಿದ್ದಿದ್ದವು. ಆದರೆ ಅಕ್ಟೋಬರ್ 5ರ ಮಂಗಳವಾರದಂದು ನಡೆದ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡ ಸೋಲು ಅನುಭವಿಸಿ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿದೆ.
ಹೌದು, ಅಕ್ಟೋಬರ್ 5ರ ಮಂಗಳವಾರದಂದು ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 90 ರನ್ ಗಳಿಸಿತು. ಹೀಗೆ ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ 91 ರನ್‌ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕ ಆಟಗಾರ ಇಶಾನ್ ಕಿಶನ್ 25 ಎಸೆತಗಳಲ್ಲಿ 50 ರನ್ ಬಾರಿಸಿದ ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 8.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಬಾರಿಸಿ ಉತ್ತಮ ನೆಟ್ ರನ್ ರೇಟ್ ಪಡೆದುಕೊಂಡು ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಹಾಗೂ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿಯುವ ಮೂಲಕ ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದು ಇನ್ನುಳಿದ ತಂಡಗಳಾದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಹೀಗೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಭರ್ಜರಿ ಗೆಲುವನ್ನು ಸಾಧಿಸಿದ ನಂತರ ಟೂರ್ನಿಯ ಅಂಕಪಟ್ಟಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಆಟಗಾರರ ಪಟ್ಟಿಯಲ್ಲಿ ಕೆಲ ಬದಲಾವಣೆಗಳಾಗಿದ್ದು, ಅದರ ವಿವರ ಮುಂದೆ ಇದೆ ಓದಿ.

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಪಂದ್ಯದ ನಂತರ ಅಂಕ ಪಟ್ಟಿ
1. ಡೆಲ್ಲಿ ಕ್ಯಾಪಿಟಲ್ಸ್ - 20 ಅಂಕಗಳು
2. ಚೆನ್ನೈ ಸೂಪರ್ ಕಿಂಗ್ಸ್ - 18 ಅಂಕಗಳು
3. ರಾಯಲ್ ಚಾಲೆಂಜರ್ಸ್ ಬೆಂಗಳೂರು - 16 ಅಂಕಗಳು
4. ಕೋಲ್ಕತ್ತಾ ನೈಟ್ ರೈಡರ್ಸ್ - 12 ಅಂಕಗಳು
5. ಮುಂಬೈ ಇಂಡಿಯನ್ಸ್ - 12 ಅಂಕಗಳು
6. ಪಂಜಾಬ್ ಕಿಂಗ್ಸ್ - 10 ಅಂಕಗಳು
7. ರಾಜಸ್ಥಾನ್ ರಾಯಲ್ಸ್ - 10 ಅಂಕಗಳು
8. ಸನ್ ರೈಸರ್ಸ್ ಹೈದರಾಬಾದ್ - 4 ಅಂಕಗಳು

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಪಂದ್ಯದ ನಂತರ ಆರೆಂಜ್ ಕ್ಯಾಪ್ ಪಟ್ಟಿಯ ಟಾಪ್ 5 ಆಟಗಾರರು
1. ಕೆಎಲ್ ರಾಹುಲ್ - 528 ರನ್‌ಗಳು
2. ರುತುರಾಜ್ ಗಾಯಕ್ವಾಡ್ - 521 ರನ್‌ಗಳು
3. ಶಿಖರ್ ಧವನ್ - 501 ರನ್‌ಗಳು
4. ಸಂಜು ಸ್ಯಾಮ್ಸನ್ - 483 ರನ್‌ಗಳು
5. ಫಾಫ್ ಡು ಪ್ಲೆಸಿಸ್ - 470 ರನ್‌ಗಳು

ರಾಜಸ್ಥಾನ್ ರಾಯಲ್ಸ್ vs ಮುಂಬೈ ಇಂಡಿಯನ್ಸ್ ಪಂದ್ಯದ ನಂತರ ಪರ್ಪಲ್ ಕ್ಯಾಪ್ ಪಟ್ಟಿಯ ಟಾಪ್ 5 ಆಟಗಾರರು
1. ಹರ್ಷಲ್ ಪಟೇಲ್ - 26 ವಿಕೆಟ್‍ಗಳು
2. ಆವೇಶ್ ಖಾನ್ - 22 ವಿಕೆಟ್‍ಗಳು
3. ಜಸ್ಪ್ರೀತ್ ಬುಮ್ರಾ - 19 ವಿಕೆಟ್‍ಗಳು
4. ಮೊಹಮ್ಮದ್ ಶಮಿ - 18 ವಿಕೆಟ್‍ಗಳು
5. ಅರ್ಷದೀಪ್ ಸಿಂಗ್ - 16 ವಿಕೆಟ್‍ಗಳು
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications