For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಪಾಯಿಂಟ್ಸ್ ಟೇಬಲ್, ಆರೆಂಜ್-ಪರ್ಪಲ್ ಕ್ಯಾಪ್ ಮಾಹಿತಿ

IPL 2021 Points Table, Orange and Purple Cap holders list after PBKS vs SRH Match

ದುಬೈ: ಸೆಪ್ಟೆಂಬರ್ 25ರ ಶನಿವಾರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಎರಡು ಪಂದ್ಯಗಳು ನಡೆದಿದ್ದವು. 36ನೇ ಪಂದ್ಯವಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಸೆಣಸಾಡಿದ್ದವು. ಇದರಲ್ಲಿ ಡೆಲ್ಲಿ 33 ರನ್‌ಗಳ ಜಯ ದಾಖಲಿಸಿತ್ತು. 37ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌ 5 ರನ್‌ ಗಳ ರೋಚಕ ಗೆಲುವು ಕಂಡಿತ್ತು.

ಈ ಎರಡು ಪಂದ್ಯಗಳ ಬಳಿಕ ಐಪಿಎಲ್ 2021ರ ಅಂಕಪಟ್ಟಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಈ ಸೀಸನ್‌ನಲ್ಲಿ ಸತತ ಸೋಲುಗಳನ್ನು ಕಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಸ್ ಅವಕಾಶವನ್ನು ಕಳೆದುಕೊಂಡಿದೆ. ಇನ್ನು ಹೈದರಾಬಾದ್ ಕೈಯಲ್ಲಿ 5 ಪಂದ್ಯಗಳಿದ್ದು, ಅವುಗಳಲ್ಲಾದರೂ ಪ್ರತಿಷ್ಠೆಗಾಗಿ ಪಂದ್ಯ ಗೆಲ್ಲಬೇಕಾಗಿದೆ.

ಎರಡೂ ಪಂದ್ಯಗಳ ಸ್ಕೋರ್‌

ಎರಡೂ ಪಂದ್ಯಗಳ ಸ್ಕೋರ್‌

36ನೇ ಪಂದ್ಯ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್ ಪೃಥ್ವಿ ಶಾ 10, ಶಿಖರ್ ಧವನ್ 8, ಶ್ರೇಯಸ್ ಐಯ್ಯರ್ 43, ರಿಷಭ್ ಪಂತ್ 24, ಶಿಮ್ರನ್ ಹೆಟ್ಮೈರ್ 28, ಲಲಿತ್ ಯಾದವ್ 14, ಅಕ್ಷರ್ ಪಟೇಲ್ 12, ಆರ್‌ ಅಶ್ವಿನ್ 6 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 154 ರನ್ ಗಳಿಸಿತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, ಯಶಸ್ವಿ ಜೈಸ್ವಾಲ್ 5, ಸಂಜು ಸ್ಯಾಮ್ಸನ್ 70, ಲಿಯಾಮ್ ಲಿವಿಂಗ್ಸ್ಟೋನ್ 1, ಡೇವಿಡ್ ಮಿಲ್ಲರ್ 7, ಮಹಿಪಾಲ್ ಲೊಮರ್ 19, ರಿಯಾನ್ ಪರಾಗ್ 2, ರಾಹುಲ್ ತೆವಾಟಿಯಾ 9, ತಬ್ರೇಜ್ ಶಮ್ಸಿ 2 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ಕಳೆದು 121 ರನ್ ಗಳಿಸಿತು.
37ನೇ ಪಂದ್ಯ: ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಂಜಾಬ್‌ ಕಿಂಗ್ಸ್‌, ಕೆಎಲ್ ರಾಹುಲ್ 21, ಮಯಾಂಕ್ ಅಗರ್ವಾಲ್ 5, ಕ್ರಿಸ್ ಗೇಲ್ 14, ಐಡೆನ್ ಮಾರ್ಕ್ರಮ್ 27, ನಿಕೋಲಸ್ ಪೂರನ್ 8, ದೀಪಕ್ ಹೂಡಾ 13, ಹರ್‌ಪ್ರೀತ್ ಬ್ರಾರ್ 18, ನಾಥನ್ ಎಲ್ಲಿಸ್ 12 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 125 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್, ಡೇವಿಡ್ ವಾರ್ನರ್ 2, ವೃದ್ಧಿಮಾನ್ ಸಹಾ 31,ಕೇನ್ ವಿಲಿಯಮ್ಸನ್ 1, ಮನೀಶ್ ಪಾಂಡೆ 13, ಕೇದಾರ್ ಜಾಧವ್ 12, ಅಬ್ದುಲ್ ಸಮದ್ 1, ಜೇಸನ್ ಹೋಲ್ಡರ್ 47 (29), ರಶೀದ್ ಖಾನ್ 3, ಭುವನೇಶ್ವರ್ ಕುಮಾರ್ 3 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್ ಕಳೆದು 120 ರನ್ ಗಳಿಸಿತು.

ಪಾಯಿಂಟ್ಸ್ ಟೇಬಲ್ ಮಾಹಿತಿ

ಪಾಯಿಂಟ್ಸ್ ಟೇಬಲ್ ಮಾಹಿತಿ

ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ರಿಷಭ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನದಲ್ಲಿದೆ. ಆಡಿರುವ 10 ಪಂದ್ಯಗಳಲ್ಲಿ 8 ಗೆಲುವುಗಳೊಂದಿಗೆ ಡೆಲ್ಲಿ ನಂ.1 ಸ್ಥಾನಕ್ಕೇರಿದೆ. ಶನಿವಾರ ಡೆಲ್ಲಿ ವಿರುದ್ಧ ಸೋತಿರುವ ರಾಜಸ್ಥಾನ್ ರಾಯಲ್ಸ್ 7ನೇ ಸ್ಥಾನಕ್ಕೆ ಕುಸಿದಿದೆ. ರಾಜಸ್ಥಾನ್ ತಂಡ ಆಡಿರುವ 9 ಪಂದ್ಯಗಳಲ್ಲಿ 4 ಪಂದ್ಯ ಗೆದ್ದು 4 ಪಾಯಿಂಟ್ಸ್‌ ಕಲೆ ಹಾಕಿದೆ. ಸನ್ ರೈಸರ್ಸ್ ಹೈದರಾಬಾದ್ ಸೋಲಿಸಿರುವ ಪಂಜಾಬ್ ಕಿಂಗ್ಸ್ 7ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. 10 ಪಂದ್ಯಗಳಲ್ಲಿ 4 ಪಂದ್ಯಗಳನ್ನು ಗೆದ್ದಿರುವ ಪಂಜಾಬ್ 8 ಪಾಯಿಂಟ್ಸ್ ಕಲೆ ಹಾಕಿದೆ. ಪಂಜಾಬ್ ಎದುರು ಸೋತಿರುವ ಹೈದರಾಬಾದ್ 9ರಲ್ಲಿ 1 ಪಂದ್ಯ ಗೆದ್ದು 2 ಪಾಯಿಂಟ್ಸ್ ಗಳಿಸಿದೆ. ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿದೆ. ಚೆನ್ನೈ 9ರಲ್ಲಿ 7 ಪಂದ್ಯಗಳನ್ನು ಗೆದ್ದಿದೆ. ತೃತೀಯ ಸ್ಥಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಿವೆ. ಆರ್‌ಸಿಬಿ 9ರಲ್ಲಿ 5 ಪಂದ್ಯಗಳನ್ನು ಗೆದ್ದಿದೆ. 4ನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವಿದೆ. 5ರಲ್ಲಿ ಪಂಜಾಬ್, 6ರಲ್ಲಿ ಮುಂಬೈ ಇಂಡಿಯನ್ಸ್, 7ರಲ್ಲಿ ರಾಜಸ್ಥಾನ್, 8ರಲ್ಲಿ ಹೈದರಾಬಾದ್ ತಂಡಗಳಿವೆ.

Harshal Patel RCB ತಂಡಕ್ಕೆ ಸಿಕ್ಕಿರುವ ಅಪರೂಪದ ಬೌಲರ್ | Oneindia Kannada
ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್

ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್

ಐಪಿಎಲ್ 36, 37ನೇ ಪಂದ್ಯದ ಬಳಿಕ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಂಥ ಬದಲಾವಣೆಗಳೇನೂ ಆಗಿಲ್ಲ. ಸೀಸನ್‌ನಲ್ಲಿ ಅತ್ಯಧಿಕ ರನ್ ಗಳಿಸುವ ಬ್ಯಾಟ್ಸ್ಮನ್ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಳ್ಳುತ್ತಾರೆ. ಅತೀ ಹೆಚ್ಚು ವಿಕೆಟ್‌ ಸಾಧನೆಗಾಗಿ ಪರ್ಪಲ್ ಕ್ಯಾಪ್ ಕೊಡಲಾಗುತ್ತದೆ. ಪಂದ್ಯಗಳು ಮುಂದುವರೆದಂತೆ ಆವರೆಗಿನ ಪಂದ್ಯಗಳ ಸಾಧನೆಗಳಿಗೆ ಅನುಗುಣವಾಗಿ ಆರೆಂಜ್ ಕ್ಯಾಪ್, ಪರ್ಪಲ್‌ ಕ್ಯಾಪ್ ಕೈಯಿಂದ ಕೈಗೆ ಬದಲಾಗುತ್ತಿರುತ್ತದೆ. ಈ ಸೀಸನ್‌ ಟಾಪ್ ಸ್ಕೋರರ್ ಶಿಖರ್ ಧವನ್ ಸದ್ಯ ಆರೆಂಜ್ ಕ್ಯಾಪ್ ಉಳಿಸಿಕೊಂಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್‌ನ ಧವನ್ 10 ಇನ್ನಿಂಗ್ಸ್‌ಗಳಲ್ಲಿ 430 ರನ್ ಗಳಿಸಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್‌ನ ಕೆಎಲ್ ರಾಹುಲ್ ಇದ್ದಾರೆ. 9 ಇನ್ನಿಂಗ್ಸ್‌ಗಳಲ್ಲಿ ರಾಹುಲ್ 401 ರನ್ ಗಳಿಸಿದ್ದಾರೆ. ತೃತೀಯ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್‌ನ ಸಂಜು ಸ್ಯಾಮ್ಸನ್ 9 ಇನ್ನಿಂಗ್ಸ್‌ಗಳಲ್ಲಿ 351 ರನ್ ಗಳಿಸಿದ್ದಾರೆ. ಇನ್ನು ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಹರ್ಷಲ್ ಪಟೇಲ್ (9 ಇನ್ನಿಂಗ್ಸ್‌ಗಳಲ್ಲಿ 19 ವಿಕೆಟ್‌) ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಆವೇಶ್ ಖಾನ್ (10 ಇನ್ನಿಂಗ್ಸ್‌ಗಳಲ್ಲಿ 15 ವಿಕೆಟ್‌), ತೃತೀಯ ಸ್ಥಾನದಲ್ಲಿ ರಾಜಸ್ಥಾನ್ ರಾಯಲ್ಸ್‌ನ ಕ್ರಿಸ್ ಮೋರಿಸ್ (8 ಇನ್ನಿಂಗ್ಸ್‌ಗಳಲ್ಲಿ 14 ವಿಕೆಟ್) ಇದ್ದಾರೆ.

Story first published: Sunday, September 26, 2021, 8:58 [IST]
Other articles published on Sep 26, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+