Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: 40 ಎಸೆತಗಳಿಗೆ ಅರ್ಧ ಶತಕ ಚಚ್ಚಿದ ಡೇವಿಡ್ ಮಿಲ್ಲರ್

IPL 2021: Rajasthan Royals David Miller slams a 40-ball half-century

ಮುಂಬೈ: ರಾಜಸ್ಥಾನ್ ರಾಯಲ್ಸ್‌ನ ಬ್ಯಾಟ್ಸ್‌ಮನ್‌ ಡೇವಿಡ್ ಮಿಲ್ಲರ್ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಮುಂಬೈ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಮಿಲ್ಲರ್ ಕೇವಲ 40 ಎಸೆತಗಳಲ್ಲಿ 50 ರನ್ ಬಾರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ 5ನೇ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬಂದಿದ್ದ ಡೇವಿಡ್ ವಿಲ್ಲರ್ 43 ಎಸೆತಗಳಲ್ಲಿ 62 ರನ್ ಸೇರಿಸಿದರು. ಇದರಲ್ಲಿ 7 ಫೋರ್ಸ್, 6 ಸಿಕ್ಸರ್‌ಗಳ ಸೇರಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರನ್ ಕೊಡುಗೆ ನೀಡಿದ್ದ ಇನ್ನೊಬ್ಬ ಆಟಗಾರನೆಂದರೆ ರಾಹುಲ್ ತೆವಾಟಿಯಾ (19 ರನ್). ಅಂದ್ಹಾಗೆ, ಐಪಿಎಲ್‌ನಲ್ಲಿ ಮಿಲ್ಲರ್ ಅವರ 10ನೇ ಅರ್ಧ ಶತಕವಿದು.

ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್

15.5ನೇ ಓವರ್‌ನಲ್ಲಿ ಆವೇಶ್‌ ಖಾನ್ ಎಸೆತಕ್ಕೆ ಲಲಿತ್ ಯಾದವ್‌ಗೆ ಕ್ಯಾಚಿತ್ತ ಡೇವಿಡ್ ಮಿಲ್ಲರ್ ನಿರ್ಗಮಿಸಿದರು. 31ರ ಹರೆಯದ ದಕ್ಷಿಣ ಆಫ್ರಿಕಾ ಆಟಗಾರ ಮಿಲ್ಲರ್, 81 ಐಪಿಎಲ್ ಪಂದ್ಯಗಳಲ್ಲಿ 1912 ಗಳಿಸಿದ್ದಾರೆ. ಇದಕ್ಕೂ ಮುನ್ನ ಮಿಲ್ಲರ್ ಪಂಜಾಬ್ ಕಿಂಗ್ಸ್‌ ಪರ ಆಡಿದ್ದರು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದು 147 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್‌ ತಂಡ 19.4 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 150 ರನ್ ಬಾರಿಸಿ ಗೆಲುವನ್ನಾಚರಿಸಿತು. ಜಯದೇವ್ ಉನಾದ್ಕತ್ ಪಂದ್ಯಶ್ರೇಷ್ಠರೆನಿಸಿದರು.

Story first published: Friday, April 16, 2021, 1:15 [IST]
Other articles published on Apr 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+