ಐಪಿಎಲ್: ಎಂಎಸ್ ಧೋನಿಗೆ ಗೌರವ ಸಲ್ಲಿಸಿದ ರಾಜಸ್ಥಾನ್ ರಾಯಲ್ಸ್

ಮುಂಬೈ: ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 12ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಕಾದಾಡಲಿವೆ. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ಫ್ರಾಂಚೈಸಿ, ಚೆನ್ನೈ ನಾಯಕ ಎಂಎಸ್ ಧೋನಿಗೆ ಗೌರವ ಸಲ್ಲಿಸಿದೆ.
ಸೋಮವಾರದ ಪಂದ್ಯದೊಂದಿಗೆ ಎಂಎಸ್ ಧೋನಿ 200ನೇ ಪಂದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕರಾಗಿ ಆಡಿದಂತಾಗುತ್ತದೆ. ಹೀಗಾಗಿಯೇ ಕೂಲ್ ಕ್ಯಾಪ್ಟನ್ ಧೋನಿಗೆ ಆರ್‌ಆರ್ ವಿಭಿನ್ನ ರೀತಿಯಲ್ಲಿ ಗೌರವ ಸಲ್ಲಿಸಿದೆ. ಎಂಎಸ್‌ಡಿ ಫೋಟೋ ಹಾಕಿಕೊಂಡು ಆರ್‌ಆರ್ ಟ್ವೀಟ್ ಮಾಡಿದೆ.
39ರ ಹರೆಯದ ಧೋನಿ ಅವರು ರಾಜಸ್ಥಾನ್ ರಾಯಲ್ಸ್‌ನ ಬಹುತೇಕ ಯುವ ಆಟಗಾರರಿಗೆ ಬಹಳ ಹಿರಿಯ ಆಟಗಾರ. ಈ ಯುವ ಆಟಗಾರರೆಲ್ಲಾ ಚಿಕ್ಕವರಿದ್ದಾಗ ಧೋನಿ ಆಟ ನೋಡಿಕೊಂಡು ಬೆಳೆದು ನಿಂತವರು. ಆವತ್ತು ಧೋನಿಯನ್ನು ಟಿವಿಯಲ್ಲಿ ನೋಡಿದ್ದ ಆಟಗಾರು ಈ ದಿನ ಧೋನಿ ಎದುರಾಗಿ ಆಡುವ ಅವಕಾಶ ಬಂದೊಗಿದ್ದನ್ನು ಆರ್ಆರ್ ತನ್ನ ಟ್ವೀಟ್ ಮೂಲಕ ಹೇಳಿದೆ.
ಆರ್‌ಆರ್ ಯುವ ಆಟಗಾರರಾದ ಆಕಾಶ್ ಸಿಂಗ್, ಯಶಸ್ವಿ ಜೈಸ್ವಾಲ್, ಕುಲದೀಪ್ ಯಾದವ್, ಅನುಜ್ ರಾವತ್, ಚೇತನ್ ಸಕರಿಯಾ ಇವರೆಲ್ಲ ಚಿಕ್ಕವರಿದ್ದಾಗ ಧೋನಿಯನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದಂತೆ ಚಿತ್ರ ಹಾಕಿರುವ ರಾಜಸ್ಥಾನ್, ' ಈದಿನ ಪರದೆಯಿಂದ ಫೀಲ್ಡ್‌ಗೆ' ಎಂದು ಬರೆದುಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications