
ಭಾನುವಾರ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ ಈ ರೋಚಕ ಸೆಣೆಸಾಟಕ್ಕೆ ವೇದಿಕೆಯಾಗಲಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ಕೋಚ್ ಸೈಮನ್ ಕ್ಯಾಟಿಚ್ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹಾಗೂ ಅದರ ನಾಯಕ ಎಂಎಸ್ ಧೋನಿ ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.
ಚೆನ್ನೈ ವಿರುದ್ಧದ ಪಂದ್ಯದ ಹಿನ್ನೆಲೆಯಲ್ಲಿ ಮಾತನಾಡಿದ ಸೈಮನ್ ಕ್ಯಾಟಿಚ್ ಎಂಎಸ್ ಧೋನಿಯನ್ನು "ಮಾಸ್ಟರ್" ಎಂದು ಬಣ್ಣಿಸಿದ್ದಾರೆ. "ಧೋನಿ ಓರ್ವ ಮಾಸ್ಟರ್, ಮೂರು ಗೆಲುವುಗಳೊಂದಿಗೆ ಅವರು ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಅವರು ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿದ್ದಾರೆ, ಅವರಲ್ಲಿ ಅದ್ಭುತವಾಗಿ ಆಟಗಾರರು ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ನಾವು ದೊಡ್ಡ ಪ್ರಮಾಣದ ಗೌರವವನ್ನು ಹೊಂದಿದ್ದೇವೆ" ಎಂದು ಸೈಮನ್ ಕ್ಯಾಟಿಚ್ ಹೇಳಿದ್ದಾರೆ.
"ಈ ಪಂದ್ಯ ಅತ್ಯುತ್ತಮ ಪಂದ್ಯವಾಗಿರಲಿದೆ. ಮುಂಬೈನಲ್ಲಿ ನಾವು ಈಗಾಗಲೇ ಕೆಲ ಅದ್ಭುತ ಪಂದ್ಯಗಳನ್ನು ನೋಡಿದ್ದೇವೆ. ಚೆನ್ನೈ ಸೂಪರ್ ಕಿಂಗ್ಸ್ ಬಲಿಷ್ಠವಾದ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಹೊಂದಿದೆ. ಆದರೆ ಈ ಬಾರಿಯ ಆವೃತ್ತಿಯಲ್ಲಿ ನಮ್ಮ ಬೌಲಿಂಗ್ ಬಳಗ ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದೆ" ಎಂದು ಸೈಮನ್ ಕ್ಯಾಟಿಚ್ ಆರ್‌ಸಿಬಿ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.
ಈ ಬಾರಿಯ ಆವೃತ್ತಿಯ ಈವರೆಗಿನ ಪಂದ್ಯಗಳ ಪೈಕಿ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಎರಡು ತಂಡಗಳಾಗಿವೆ. ಎರಡು ತಂಡಗಲೂ ಕೂಡ ಅತ್ಭುತವಾದ ಪ್ರದರ್ಶನವನ್ನು ನೀಡುತ್ತಿದ್ದು ಗೆಲುವಿಗಾಗಿ ತೀವ್ರ ಸೆಣೆಸಾಟವನ್ನು ನಡೆಸಲಿದೆ.
ಆರ್‌ಸಿಬಿ ಆಡಿದ ನಾಲ್ಕು ಪಂದ್ಯಗಳಲ್ಲಿ ಎಲ್ಲಾ ಪಂದ್ಯಗಳನ್ನು ಕೂಡ ಗೆಲುವು ಸಾಧಿಸಿದ್ದು ಅಜೇಯ ಓಟವನ್ನು ಮುಂದಿವರಿರುವ ಇರಾದೆಯಲ್ಲಿದೆ. ಮತ್ತೊಂದೆಡೆ ಧೋನಿ ನೇತೃತ್ವದ ಸಿಎಸ್‌ಕೆ ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ ಸೋಲು ಅನುಭವಿಸಿದರೂ ಉಳಿದ ಮೂರು ಪಂದ್ಯಗಳಲ್ಲಿ ಅದ್ಭುತ ಆಟವನ್ನು ಪ್ರದರ್ಶಿಸಿ ಗೆಲುವು ಸಾಧಿಸಿದೆ. ಚೆನ್ನೈನ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗ ಆತ್ಮವಿಶ್ವಾಸದ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ದೊಡ್ಡ ಸಕಾರಾತ್ಮಕ ಸಂಗತಿಯಾಗಿದೆ.