Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕನ್ನಡದಲ್ಲಿ ಟ್ವೀಟ್ ಮಾಡಿ ಗಮನ ಸೆಳೆದ ಯುಜುವೇಂದ್ರ ಚಾಹಲ್

IPL 2021: RCB spinner Yuzvendra Chahals Kannada Tweet goes viral

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ರಮುಖ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿದೆ. ಕಾರಣ ಚಾಹಲ್ ಈ ಬಾರಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್‌ ಪ್ರವಾಸ ಸರಣಿಯಲ್ಲಿ ಯುಜುವೇಂದ್ರ ಚಾಹಲ್ ಪಾಲ್ಗೊಂಡಿದ್ದರು. ಆದರೆ ಅಲ್ಲಿ ಚಾಹಲ್ ಅಂಥ ಗಮನಾರ್ಹ ಪ್ರದರ್ಶನವೇನೂ ನೀಡಿರಲಿಲ್ಲ. ಈಗ ಐಪಿಎಲ್‌ನತ್ತ ಸಿದ್ಧತೆ ನಡೆಸುತ್ತಿರುವ ಚಾಹಲ್ ಆರ್‌ಸಿಬಿ ತಂಡದ ಟ್ರೇನಿಂಗ್ ಕ್ಯಾಂಪ್ ಸೇರಿಕೊಂಡಿದ್ದಾರೆ.

ಮಾರ್ಚ್ 31ರ ಬುಧವಾರ ಚಾಹಲ್ ಮಾಡಿದ್ದ ಟ್ವೀಟ್ ಕನ್ನಡಿಗರ ಗಮನ ಸೆಳೆದಿತ್ತು. ಕರ್ನಾಟಕದ ತಂಡ ಆರ್‌ಸಿಬಿಯಲ್ಲಿ ಆಡುವ ಚಾಹಲ್‌ಗೂ ಕನ್ನಡದ ಮೇಲೆ ಪ್ರೀತಿ ಇರುವುದನ್ನು ಚಾಹಲ್ ಅವರ ಆ ಟ್ವೀಟ್ ಹೇಳುತ್ತಿತ್ತು. ಏಕೆಂದರೆ ಚಾಹಲ್, ಈ ಬಾರಿ ಕನ್ನಡದಲ್ಲಿ ಟ್ವೀಟ್ ಮಾಡಿದ್ದರು.

'ಆರ್‌ಸಿಬಿ ಕುಟುಂಬದೊಂದಿಗೆ ಮತ್ತೆ ಒಂದಾಗಲು ನನಗೆ ಮತ್ತೆ ತುಂಬಾ ಸಂತೋಷವಾಗಿದೆ,' ಎಂದು ಬರೆದುಕೊಂಡಿರುವ ಚಾಹಲ್, ಜೊತೆಗೊಂದು ಹೃದಯದ ಚಿಹ್ನೆಯನ್ನೂ ಹಾಕಿಕೊಂಡಿದ್ದಾರೆ. ಏಪ್ರಿಲ್ 9ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಚೆನ್ನೈಯಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಕಾದಾಡಲಿವೆ.

Story first published: Thursday, April 1, 2021, 9:49 [IST]
Other articles published on Apr 1, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+