Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ತಂಡಕ್ಕೆ ಶಿಖರ್ ಧವನ್ ಕೊಡುಗೆ ಶ್ಲಾಘನೀಯ: ರಿಷಭ್ ಪಂತ್

IPL 2021: Rishabh Pant lauds Shikhar Dhawan on batting against Punjab Kings

ಮುಂಬೈ: ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಧವನ್ ಬ್ಯಾಟಿಂಗ್‌ ಬಲದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ಧ 6 ವಿಕೆಟ್‌ ಗೆಲುವನ್ನಾಚರಿಸಿತ್ತು. ತಂಡದ ಗೆಲುವಿಗೆ ಕಾರಣವಾದ ಧವನ್ ಅವರನ್ನು ನಾಯಕ ರಿಷಭ್ ಪಂತ್ ಶ್ಲಾಘಿಸಿದ್ದಾರೆ.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿದ್ದ ಪಂಜಾಬ್ ಕಿಂಗ್ಸ್‌, 195 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ನಿಂದ 49 ಎಸೆತಗಳಿಗೆ 92 ರನ್ ಸೇರಿಸಿದ್ದರು. ಇದರಲ್ಲಿ 13 ಫೋರ್ಸ್, 2 ಸಿಕ್ಸರ್‌ಗಳು ಸೇರಿದ್ದವು. ಡೆಲ್ಲಿ 18.2ನೇ ಓವರ್‌ನಲ್ಲೇ 198 ರನ್ ಬಾರಿಸಿ ಗೆಲುವನ್ನಾಚರಿಸಿತ್ತು.

ಪಂದ್ಯದ ಬಳಿಕ ಮಾತನಾಡಿದ ರಿಷಭ್ ಪಂತ್‌, 'ಶಿಖರ್ ಧವನ್‌ಗೆ ತುಂಬಾ ಅನುಭವವಿದೆ. ಹೆಚ್ಚು ಹೊಡೆತಗಳು ಎಲ್ಲಿ ಬೀಳುತ್ತವೆ, ಎಲ್ಲಿ ಫೀಲ್ಡ್ ಸೆಟ್ಟಿಂಗ್ ಮಾಡಬೇಕು ಇತ್ಯಾದಿ ಯಾವುದೇ ವಿಚಾರಗಳನ್ನು ನಾವು ಧವನ್ ಜೊತೆ ಮಾತನಾಡಬಹುದು,' ಎಂದಿದ್ದಾರೆ.

'ಕೊನೆಗೆ ಧವನ್ ಕೊಡುಗೆ ಶ್ಲಾಘನೀಯವಾಗಿರುತ್ತದೆ. ವಾತಾವರಣವನ್ನು ತಿಳಿಯಾಗಿಡಲು ನಾನು ಬಯಸುತ್ತೇನೆ. ಹೀಗಾಗಿ ಆಟಗಾರರು ಆಟವನ್ನು ಎಂಜಾಯ್ ಮಾಡ್ತಾರೆ, ಅವರ ಆಟ ಆಡಲು ಇದು ಅವರಿಗೆ ನೆರವಾಗುತ್ತದೆ,' ಎಂದು ಪಂತ್ ವಿವರಿಸಿದ್ದಾರೆ.

Story first published: Monday, April 19, 2021, 20:18 [IST]
Other articles published on Apr 19, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+