ಐಪಿಎಲ್ : ಕೊಹ್ಲಿಗಿಂತ ಉತ್ತಪ್ಪ ಬೆಸ್ಟ್ ಚೇಸರ್ ಎನ್ನುತ್ತಿವೆ ಈ ಅಂಕಿ ಅಂಶಗಳು!

ವಿರಾಟ್ ಕೊಹ್ಲಿ ಅವರನ್ನು ಚೇಸ್ ಮಾಸ್ಟರ್ ಎಂದು ಕರೆಯಲಾಗುತ್ತದೆ. ತಂಡದ ಇತರ ಆಟಗಾರರು ಕೈಕೊಟ್ಟರೂ ಸಹ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ಗುರಿಯನ್ನು ಮುಟ್ಟಿರುವ ಹಲವಾರು ಉದಾಹರಣೆಗಳಿವೆ. ಐಪಿಎಲ್ ಟೂರ್ನಿಯಲ್ಲಿಯೂ ಸಹ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್ ಮತ್ತು ಒಬ್ಬ ಒಳ್ಳೆಯ ಚೇಸರ್ ಕೂಡ ಹೌದು.
ಐಪಿಎಲ್ ಪಂದ್ಯಗಳಲ್ಲಿ ಚೇಸ್ ಮಾಡುವುದರಲ್ಲಿ ಸುರೇಶ್ ರೈನಾ ಅವರನ್ನು ಸಹ ವಿರಾಟ್ ಕೊಹ್ಲಿ ಮೀರಿಸಿದ್ದಾರೆ. ಹೌದು ಅಂಕಿಅಂಶಗಳ ಪ್ರಕಾರ ಪವರ್ ಹಿಟ್ಟರ್ ಸುರೇಶ್ ರೈನಾ ಅವರಿಗಿಂತಲೂ ವಿರಾಟ್ ಕೊಹ್ಲಿ ಡೇಂಜರಸ್ ಚೇಸರ್ ಎಂಬುದು ತಿಳಿದುಬಂದಿದೆ. ಆದರೆ ಅದೇ ಅಂಕಿಅಂಶಗಳ ಪ್ರಕಾರ ಗುರಿಯನ್ನು ಬೆನ್ನಟ್ಟುವಲ್ಲಿ ವಿರಾಟ್ ಕೊಹ್ಲಿ ಅವರನ್ನೂ ಮೀರಿಸಿದ ಮತ್ತೊಬ್ಬ ಆಟಗಾರ ಇದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

ರನ್ ಗುರಿ ಬೆನ್ನಟ್ಟುವಲ್ಲಿ ವಿರಾಟ್ ಕೊಹ್ಲಿ ಅವರನ್ನೂ ಮೀರಿಸಿದ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ. ಹೌದು ಅಂಕಿಅಂಶಗಳ ಪ್ರಕಾರ ರಾಬಿನ್ ಉತ್ತಪ್ಪ ಐಪಿಎಲ್ ಇತಿಹಾಸದಲ್ಲಿಯೇ ರನ್ ಚೇಸ್ ಮಾಡುವ ವೇಳೆ ಅತಿ ಹೆಚ್ಚು ರನ್ ಬಾರಿಸಿರುವ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಎದುರಾಳಿ ತಂಡಗಳು ನೀಡಿದ ರನ್ ಗಳ ಗುರಿ ಬೆನ್ನಟ್ಟುವ ವೇಳೆ ರಾಬಿನ್ ಉತ್ತಪ್ಪ ಇದುವರೆಗೂ 2724 ರನ್‌ಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
ರಾಬಿನ್ ಉತ್ತಪ್ಪ ಅವರಿಗಿಂತ 4 ರನ್ ಹಿಂದೆ ಇರುವ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಗಳಲ್ಲಿ ರನ್ ಚೇಸ್ ಮಾಡುವಾಗ ಇದುವರೆಗೂ ಬಾರಿಸಿರುವ ಒಟ್ಟು ರನ್ 2720. ಈ ಬಾರಿಯ ಐಪಿಎಲ್ ಇದೇ ತಿಂಗಳ 9ನೇ ತಾರೀಕಿನಿಂದ ಆರಂಭವಾಗಲಿದ್ದು ರಾಬಿನ್ ಉತ್ತಪ್ಪ ಅವರು ತಮ್ಮ ಹೆಸರಿನಲ್ಲಿರುವ ಈ ದಾಖಲೆಯನ್ನು ಉಳಿಸಿಕೊಳ್ಳುತ್ತಾರಾ ಅಥವಾ ವಿರಾಟ್ ಕೊಹ್ಲಿ ಅವರು ರಾಬಿನ್ ಉತ್ತಪ್ಪ ಅವರನ್ನು ಸರಿಗಟ್ಟಿ ಚೇಸಿಂಗ್ ವೇಳೆ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಳ್ಳುತ್ತಾರಾ ಎಂಬುದನ್ನು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications