For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆಗೆ ಆರಿಸಲ್ಪಟ್ಟಾಗ ಧೋನಿ ಹೇಳಿದ ಮಾತು ಬಹಿರಂಗಪಡಿಸಿದ ಉತ್ತಪ್ಪ

IPL 2021: Robin Uthappa reveals what MS Dhoni told him after Chennai Super Kings move

ಬೆಂಗಳೂರು: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದಾರೆ. ಈ ಬಾರಿ ಸಿಎಸ್‌ಕೆಗೆ ಆರಿಸಲ್ಪಟ್ಟಾಗ ತಂಡದ ನಾಯಕ ಎಂಎಸ್ ಧೋನಿ ಹೇಳಿದ ಮಾತನ್ನು ಉತ್ತಪ್ಪ ಸ್ಮರಿಸಿಕೊಂಡಿದ್ದಾರೆ.

2017ರ ಟಿ20 ವಿಶ್ವಕಪ್‌ ವಿಜೇತ ತಂಡಕ್ಕೆ ಎಂಎಸ್ ಧೋನಿ ನಾಯಕರಾಗಿದ್ದಾಗ ರಾಬಿನ್ ಉತ್ತಪ್ಪ ಕೂಡ ತಂಡದಲ್ಲಿದ್ದರು. ಹೀಗಾಗಿ ಮತ್ತೆ ಸಿಎಸ್‌ಕೆ ನಾಯಕತ್ವದ ತಂಡ ಸೇರಿಕೊಂಡ ಬಗ್ಗೆ ಉತ್ತಪ್ಪ ಮಾತನಾಡಿದ್ದಾರೆ. ತಂಡ ಸೇರಿದ ಕೂಡಲೇ ಧೋನಿ ಹೇಳಿದ್ದೇನೆಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಉತ್ತಪ್ಪ ಹೇಳಿಕೊಂಡಿದ್ದಾರೆ.

'ನನಗೆ ಕರೆ ಮಾಡಿದ ಧೋನಿ, ನಿನ್ನನ್ನು ಈ ತಂಡಕ್ಕೆ ಕರೆತರುವಲ್ಲಿ ನನ್ನ ನಿರ್ಧಾರವೇನಿಲ್ಲ. ಇದನ್ನು ನಿನಗೆ ನಾನು ತಿಳಿಸಬಯಸುತ್ತೇನೆ. ಅದು ನಮ್ಮ ಲೀಡರ್‌ಶಿಪ್‌ ಗುಂಪಿನ ನಿರ್ಧಾರ. ನಿನ್ನ ಸ್ವಂತ ಸಾಮರ್ಥ್ಯ, ಕೌಶಲಗಳೊಂದಿಗೆ ನಿನ್ನನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದ್ದೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳಿ ಎಂದು ಎಲ್ಲರಲ್ಲೂ ಹೇಳಿದ್ದೆ. ಯಾಕೆಂದರೆ ಧೋನಿ ಇದ್ದಿದ್ದಕ್ಕೆ ನಿನ್ನನ್ನು ಸಿಎಸ್‌ಕೆಗೆ ಆರಿಸಲಾಯ್ತು ಅನ್ನೋ ಮಾತು ನಾಳೆ ಬರಬಾರದು ಅಲ್ವಾ?' ಎಂದು ಧೋನಿ ಹೇಳಿರುವುದಾಗಿ ಉತ್ತಪ್ಪ ತಿಳಿಸಿದ್ದಾರೆ.

ಮಾತು ಮುಂದುವರೆಸಿದ ಉತ್ತಪ್ಪ, 'ಪ್ರಾಮಾಣಿಕತೆ ಇದ್ದವರಲ್ಲಿ ಈ ನಡೆ ಅದ್ಭುತವಾದುದು ಅಲ್ಲವೆ? ನಾನು ಖಂಡಿತವಾಗಿಯೂ ಇದನ್ನು ಮೆಚ್ಚಿಕೊಳ್ಳುತ್ತೇನೆ. ನನ್ನ ಸ್ವಂತ ಕೌಶಲ್ಯದಿಂದ, ನನ್ನ ಸ್ವಂತ ವಿಶ್ವಾಸಾರ್ಹತೆಯಿಂದ ನಾನು ಸಿಎಸ್‌ಕೆಗೆ ಬಂದಿದ್ದೇನೆ ಅನ್ನೋದು ನನಗೆ ಗೊತ್ತು. ಇದೇ ಕಾರಣಕ್ಕೆ ನಾನು ಧೋನಿಯನ್ನು ಪ್ರೀತಿಸುತ್ತೇನೆ,' ಎಂದಿದ್ದಾರೆ.

Story first published: Thursday, March 25, 2021, 9:57 [IST]
Other articles published on Mar 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+