Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಚೆನ್ನೈ ವಿರುದ್ಧ ಮುಂಬೈ ಗೆಲ್ಲುವ ಫೇವರೀಟ್ ಎಂದ ಸ್ಕಾಟ್ ಸ್ಟೈರಿಸ್

IPL 2021: Scott Styris pick MI as favourites to defeat CSK

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶನಿವಾರ ಮುಖಾಮುಖಿಯಾಗುತ್ತಿದೆ. ಈ ಎರಡು ಬಲಿಷ್ಠ ತಂಡಗಳಲ್ಲಿ ಗೆಲುವು ಯಾರಿಗೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಸ್ಕಾಟ್ ಸ್ಟೈರಿಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮುಂಬೈ ಇಂಡಿಯನ್ಸ್ ತಂಡವನ್ನು ಆರಿಸಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆಲ್ಲಲಿದೆ ಎನ್ನಲು ಸ್ಕಾಟ್ ಸ್ಟೈರಿಸ್ ಕಾರಣವನ್ನು ಕೂಡ ನೀಡಿದ್ದಾರೆ. "ನನ್ನ ಪ್ರಕಾರ ಮುಂಬೈ ಇಂಡಿಯನ್ಸ್ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ. ಸಿಎಸ್‌ಕೆ ಯಾವುದೇ ರೀತಿಯಲ್ಲಿಯೂ ಪ್ರದರ್ಶನವನ್ನು ನೀಡಲಿ, ಮುಂಬೈ ಇಂಡಿಯನ್ಸ್ ಈ ಪಂದ್ಯವನ್ನು ಗೆಲ್ಲಲಿದ್ದಾರೆ. ನನ್ನ ಪ್ರಕಾರ ಇದು ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಸಣ್ಣ ಪರೀಕ್ಷೆಯಿದ್ದಂತೆ. ಯಾಕೆಂದರೆ ಮುಂಬೈ ಇಂಡಿಯನ್ಸ್ ಸವಾಲಿನಲ್ಲಿ ನಿಮ್ಮನ್ನು ನೀವು ಪರೀಕ್ಷಿಸಿಕೊಳ್ಳುವ ಅವಕಾಶವಿದೆ" ಎಂದಿದ್ದಾರೆ ಸ್ಕಾಟ್ ಸ್ಟೈರಿಸ್.

"ಮುಂಬೈ ಇಂಡಿಯನ್ಸ್ ಆಡಿದ ಎಲ್ಲಾ ಪಂದ್ಯಗಳನ್ನು ಕೂಡ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡಿದ್ದು ಮೊದಲ ಆರು ಪಂದ್ಯಗಳಲ್ಲಿ ಮೂರು ಗೆಲುವು ಹಾಗೂ ಮೂರು ಸೋಲನ್ನು ಕಂಡಿದೆ. ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಆರು ಪಂದ್ಯಗಳ ಪೈಕಿ ಮೊದಲ ಪಂದ್ಯದ ಸೋಲು ಹೊರತುಪಡಿಸಿ ಉಳಿದ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ.

"ಈವರೆಗೆ ಆಡಿದ ಪಂದ್ಯಗಳ ಆಧಾರದಲ್ಲಿ ನೀವು ಮುಂಬೈ ತಂಡವನ್ನು ನೀವು ನಿರ್ಣಯಿಸಲು ಸಾಧ್ಯವಿಲ್ಲ. ಚೆನ್ನೈ ಭೀಕರವಾದ ಪಿಚ್‌ಆಗಿದೆ. ಈಗ ಅವರು ಅಲ್ಲಿಂದ ಹೊರಬಿದ್ದಿದ್ದಾರೆ. ಈಗ ಅವರು ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಿರುವ ಪಿಚ್‌ಗೆ ಬಂದಿದ್ದಾರೆ. ಮುಮದಿನ ಪಂದ್ಯಗಳಲ್ಲಿ ಆಟಗಾರರು ಉತ್ತಮ ಆಟವನ್ನು ಪ್ರದರ್ಶಿಸುವ ಭರವಸೆಯಿದೆ" ಎಂದು ಸ್ಟೈರಿಸ್ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ.

Story first published: Sunday, May 2, 2021, 7:37 [IST]
Other articles published on May 2, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+