For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ವಿಚಾರದಲ್ಲಿ ಸೌತ್ ಆಫ್ರಿಕಾವನ್ನು ಟೀಕಿಸಿದ ಅಫ್ರಿದಿ

 IPL 2021: Shahid Afridi Criticizes South Africa for Releasing Players For IPL Amid Pakistan Series

ಇಡೀ ವಿಶ್ವದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಹುಟ್ಟುಹಾಕಿರುವಷ್ಟು ಕ್ರೇಜ್ ಮತ್ತು ಬೇಡಿಕೆಯನ್ನು ಕ್ರಿಕೆಟ್‌ನ ಬೇರೆ ಯಾವುದೇ ಫ್ರಾಂಚೈಸಿ ಲೀಗ್ ಕೂಡ ಹುಟ್ಟು ಹಾಕಿಲ್ಲ. ಪ್ರತಿಯೊಬ್ಬ ಕ್ರಿಕೆಟರ್ ಕೂಡ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಬೇಕು ಎಂಬ ಹಂಬಲವನ್ನು ಹೊಂದಿರುತ್ತಾನೆ, ಅಷ್ಟರಮಟ್ಟಿಗಿದೆ ಐಪಿಎಲ್ ಟೂರ್ನಿಯ ವಿಖ್ಯಾತಿ.

ಕೇವಲ ಭಾರತ ಮಾತ್ರವಲ್ಲದೆ ಇತರ ದೇಶದ ಕ್ರಿಕೆಟ್ ಬೋರ್ಡ್‌ಗಳೂ ಸಹ ಐಪಿಎಲ್ ಬಂತೆಂದರೆ ಪ್ರಮುಖ ಆಟಗಾರರನ್ನು ಐಪಿಎಲ್ ಟೂರ್ನಿಗೆ ಮೊದಲನೇ ಪ್ರಾಶಸ್ತ್ಯ ನೀಡಿ ಕಳುಹಿಸಿಕೊಡುತ್ತಾರೆ. ಇದೀಗ ಅದೇ ರೀತಿ ಸೌತ್ಆಫ್ರಿಕಾ ಕ್ರಿಕೆಟ್ ಕ್ವಿಂಟನ್ ಡಿ ಕಾಕ್ ಹಾಗೂ ಕಗಿಸೊ ರಬಾಡ ಸೇರಿದಂತೆ ಇನ್ನೂ ಕೆಲ ಪ್ರಮುಖ ಆಟಗಾರರನ್ನು ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯ ಮಧ್ಯದಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಕಳುಹಿಸಿಕೊಟ್ಟಿದೆ. ಇದಾದ ಬಳಿಕ ಪಾಕಿಸ್ತಾನ - ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಪಾಕಿಸ್ತಾನ ತಂಡ 2-1 ಅಂತರದಿಂದ ವಶಪಡಿಸಿಕೊಂಡಿತು.

 IPL 2021: Shahid Afridi Criticizes South Africa for Releasing Players For IPL Amid Pakistan Series

ಪಾಕಿಸ್ತಾನ ತಂಡ ಗೆದ್ದ ನಂತರ ಟ್ವೀಟ್ ಮಾಡಿದ ಪಾಕ್ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಏಕದಿನ ಸರಣಿಯಲ್ಲಿ ಜಯಗಳಿಸಿದ್ದಕ್ಕೆ ಶುಭಾಶಯವನ್ನು ಕೋರಿದರು. ಇದೇ ಸಮಯದಲ್ಲಿ ಮತ್ತೊಂದು ಟ್ವೀಟ್ ಮಾಡಿದ ಅಫ್ರಿದಿ ಸರಣಿ ಮಧ್ಯದಲ್ಲಿ ತಮ್ಮ ತಂಡದ ಪ್ರಮುಖ ಆಟಗಾರರನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಆಡಲು ಕಳುಹಿಸಿಕೊಟ್ಟಿದ್ದಕ್ಕೆ ಸೌತ್ ಆಫ್ರಿಕಾ ತಂಡದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದರು.

ಸರಣಿ ಮಧ್ಯದಲ್ಲಿ ತಮ್ಮ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆಡಲು ಪ್ರಯಾಣ ಬೆಳೆಸುವುದಕ್ಕೆ ಅನುವು ಮಾಡಿಕೊಟ್ಟ ಸೌತ್ಆಫ್ರಿಕಾ ಕ್ರಿಕೆಟ್ ಬೋರ್ಡ್ ನೋಡಿದರೆ ಆಶ್ಚರ್ಯವಾಗುತ್ತದೆ. ಟಿ ಟ್ವೆಂಟಿ ಕ್ರಿಕೆಟ್ ಲೀಗ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಪ್ರಭಾವ ಬೀರುತ್ತಿರುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.

Story first published: Thursday, April 8, 2021, 12:16 [IST]
Other articles published on Apr 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+