ಒಂದೇ ಕೈಯಲ್ಲಿ ಕ್ಯಾಚ್ ಪಡೆದು ಧವನ್ ಪೆವಿಲಿಯನ್‌ಗಟ್ಟಿದ ಸ್ಯಾಮ್ಸನ್: ವಿಡಿಯೋ

ಮುಂಬೈ: ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್, ರಾಜಸ್ತಾನ್ ರಾಯಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಂದಿರುವುದರಿಂದ ಯುವ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಹೆಗಲಿಗೆ ರಾಜಸ್ಥಾನ್ ರಾಯಲ್ಸ್ ನಾಯಕತ್ವದ ಜವಾಬ್ದಾರಿಯಿದೆ. ಆರ್‌ಆರ್ ನಾಯಕತ್ವವನ್ನು ಸ್ಯಾಮ್ಸನ್ ಚೆನ್ನಾಗಿ ನಿಭಾಯಿಸುತ್ತಿದ್ದಾರೆ ಕೂಡ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ ಮಾಡಿದ್ದರು. 63 ಎಸೆತಗಳಲ್ಲಿ 119 ರನ್ ಗಳಿಸಿದ್ದರು. ಇದು ಈ ಸೀಸನ್‌ನ ಚೊಚ್ಚಲ ಶತಕವಾಗಿತ್ತು. ಆದರೆ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದಿರಲಿಲ್ಲ. 4 ರನ್‌ನಿಂದ ಪಂಜಾಬ್ ಕಿಂಗ್ಸ್ ಪಂದ್ಯ ಗೆದ್ದುಕೊಂಡಿತ್ತು. ಆದರೆ ದ್ವಿತೀಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸ್ಯಾಮ್ಸನ್ ಅದ್ಭುತ ವಿಕೆಟ್ ಕೀಪಿಂಗ್‌ಗಾಗಿ ಗಮನ ಸೆಳೆದಿದ್ದಾರೆ.
ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲಿ ಸ್ಯಾಮ್ಸನ್ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಪಡೆದು ಡೆಲ್ಲಿ ಪ್ರಮುಖ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದ್ದಾರೆ.
ಡಿಸಿ ಪರ ಆರಂಭಿಕರಾಗಿ ಬಂದಿದ್ದ ಧವನ್, 3.1ನೇ ಓವರ್‌ನಲ್ಲಿ ಜಯದೇವ್ ಉನಾದ್ಕತ್ ಎಸೆತಕ್ಕೆ ರಿವರ್ಸ್ ಶಾಟ್ ಯತ್ನದಲ್ಲಿ ಸ್ಯಾಮ್ಸನ್‌ಗೆ ಕ್ಯಾಚಿತ್ತು ಕೇವಲ 9 ರನ್‌ಗೆ ನಿರ್ಗಮಿಸಿದರು. ಸ್ಯಾಮ್ಸನ್ ಒಂದೇ ಕೈಯಲ್ಲಿ ಕ್ಯಾಚ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications