ಗ್ಲೆನ್ ಮ್ಯಾಕ್ಸ್‌ವೆಲ್ ಕೈಯಿಂದ ಆರೆಂಜ್ ಕ್ಯಾಪ್ ಕಸಿದುಕೊಂಡ ಧವನ್

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯ ಎರಡನೇ ಜಯ ದಾಖಲಿಸಿದೆ. ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ ಭರ್ಜರಿ ಜಯ ಗಳಿಸಿದೆ.
ಐಪಿಎಲ್ 2021: ಸುದ್ದಿ, ವಿಶ್ಲೇಷಣೆ, ಅಂಕಿ ಅಂಶಗಳುಳ್ಳ ವಿಶೇಷ ಪುಟದ ಲಿಂಕ್
ಪಂಜಾಬ್ ವಿರುದ್ಧ ಗೆಲುವಿನೊಂದಿಗೆ ಐಪಿಎಲ್ ಪಾಯಿಂಟ್ ಟೇಬಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದ್ವಿತೀಯ ಸ್ಥಾನಕ್ಕೇರಿರುವುದಷ್ಟೇ ಅಲ್ಲ, ಗ್ಲೆನ್ ಮ್ಯಾಕ್ಸ್‌ವೆಲ್ ಕೈಯಲ್ಲಿದ್ದ ಆರೆಂಜ್ ಕ್ಯಾಪ್ ಈಗ ಧವನ್ ಕೈ ಸೇರಿದೆ. ಸದ್ಯಕ್ಕೆ ಧವನ್ ಅತ್ಯಧಿಕ ರನ್ ಸರದಾರರಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಭಾನುವಾರ (ಏಪ್ರಿಲ್ 18) ನಡೆದಿದ್ದ ಮೊದಲ ಪಂದ್ಯದ ಬಳಿಕ ಅತ್ಯಧಿಕ ರನ್ ಪಟ್ಟಿಯಲ್ಲಿ 176 ರನ್ ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಆರೆಂಜ್ ಕ್ಯಾಪ್ ತನ್ನದಾಗಿಸಿಕೊಂಡಿದ್ದರು.
ಆದರೆ ಮುಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಶಿಖರ್ ಧವನ್ ಅವರ ಒಟ್ಟಾರೆ ಟೋಟಲ್ 186 ರನ್ ಆಗಿದ್ದರಿಂದ ಈಗ ಆರೆಂಜ್ ಕ್ಯಾಪ್ ಧವನ್ ಕೈಯಲ್ಲಿದೆ. ಭಾನುವಾರದ ಪಂದ್ಯದಲ್ಲಿ ಧವನ್ ಪಂಜಾಬ್ ವಿರುದ್ಧ 49 ಎಸೆತಗಳಿಗೆ 92 ರನ್ ಬಾರಿಸಿದ್ದರು. ಅತ್ಯಧಿಕ ವಿಕೆಟ್‌ಗಾಗಿ ಕೊಡಲಾಗುವ ಪರ್ಪಲ್ ಕ್ಯಾಪ್ ಈಗ ಆರ್‌ಸಿಬಿ ಬೌಲರ್ ಹರ್ಷಲ್ ಪಟೇಲ್ ಕೈಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications