Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ಪಡೆಯಬಾರದಾಗಿತ್ತು ಎಂದ ಶಿಖರ್ ಧವನ್

IPL 2021: Shikhar Dhawan said match shouldnt have gone into Super Over

ಡೆಲ್ಲಿ ಕ್ಯಾಪಟಲ್ಸ್ ತಂಡದ ಅನುಭವಿ ಆಟಗಾರ ಶಿಖರ್ ಧವನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ರೋಚಕ ಹಣಾಹಣಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ಪಡೆಯಬಾರದಾಗಿತ್ತು. ಅದಕ್ಕೂ ಮೊದಲೇ ಪಂದ್ಯವನ್ನು ನಾವು ಗೆಲ್ಲಬಹುದಾಗಿತ್ತು ಎಂದು ಧವನ್ ಹೇಳಿದ್ದಾರೆ.

"ಇದೊಂದು ಅತ್ಯಂತ ರೋಚಕವಾದ ಪಂದ್ಯವಾಗಿತ್ತು. ಆದರೆ ಪಂದ್ಯದ ಫಲಿತಾಂಶವನ್ನು ಸೂಪರ್ ಓವರ್‌ಲ್ಲಿ ಪಡೆಯಬಾರದಾಗಿತ್ತು. ನಾವು ಇದನ್ನು ಸುಲಭವಾಗಿ ಗೆಲ್ಲುವ ಅವಕಾಶವಿತ್ತು. ಆದರೆ ನಾವು ಕೆಲವು ತಪ್ಪುಗಳನ್ನು ಮಾಡಿದೆವು. ಆದರೆ ಅದು ಆಟದಲ್ಲಿ ಸಾಮಾನ್ಯ ಎಂದು ಧವನ್ ಹೇಳಿದ್ದಾರೆ.

"ನನ್ನ ಪ್ರಕಾರ ಆವೇಶ್ ಖಾನ್ ಎಸೆದ 19ನೇ ಓವರ್‌ನಲ್ಲಿ ಎರಡು ಬೌಂಡರಿಗಳು ಸಿಡಿದವು. ನಾವು ಅದನ್ನು ತಪ್ಪಿಸಬಹುದಾಗಿತ್ತು. ಆದರೆ ಅದು ಆಟದಲ್ಲಿ ಸಾಮಾನ್ಯ. ನಾವು ಪಂದ್ಯವನ್ನು ಸಂಒಊರ್ಣವಾಗಿ ಹಿಡಿತದಲ್ಲಿಟ್ಟುಕೊಂಡಿದ್ದೆವು. ಆದರೆ ಅಂತಿಮ ಹಂತದಲ್ಲಿ ಆ ರೀತಿಯಾಗಿ ಬಿಟ್ಟುಕೊಡಬಾರದಾಗಿತ್ತು" ಎಂದು ಧವನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ಕೆಲ ಸಣ್ಣ ಸಂಗತಿಗಳು ದೊಡ್ಡ ಪರಿಣಾಮವನ್ನು ಬೀರುತ್ತದೆ. ವಾರ್ನರ್ ಒಂದು ರನ್ ಸಂಪೂರ್ಣಗೊಳಿಸದಿರುವುಕ್ಕೆ ಸಂತಸಪಡುತ್ತೇನೆ. ಅದರಿಂದಾಗಿ ನಾವು ಮೇಲುಗೈ ಸಾಧಿಸಿದೆವು ಹಾಗೂ ಪಂದ್ಯದಲ್ಲಿ ಗೆಲುವು ಸಾಧಿಸಿದೆವು" ಎಂದು ಶಿಖರ್ ಧವನ್ ಪಂದ್ಯದ ಅಂತ್ಯದ ಬಳಿಕ ಪ್ರತಿಕ್ರಿಯಿಸಿದ್ದಾರೆ.

Story first published: Monday, April 26, 2021, 13:44 [IST]
Other articles published on Apr 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+