2021ರ ಐಪಿಎಲ್ ಆರಂಭ, ಹರಾಜು, ಆತಿಥೇಯ ದೇಶ, ತಂಡಗಳ ಮಾಹಿತಿ

ದುಬೈ: 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತದಲ್ಲಿದೆ. ಇನ್ನು ಕೇವಲ ಎರಡು ಎರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಬಳಿಕ ಭಾರತದ ಅದ್ದೂರಿ ಟೂರ್ನಿ ಐಪಿಎಲ್‌ಗೆ ತೆರೆ ಬೀಳಲಿದೆ. ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮಾತ್ರ ಇನ್ನು ಟೂರ್ನಿಯಲ್ಲಿ ಉಳಿದುಕೊಂಡಿದೆ. ನವೆಂಬರ್ 8ರಂದು ಕ್ವಾಲಿಫೈರ್-2 ಅಥವಾ ಸೆಮಿಫೈನಲ್ ನಡೆದರೆ, ನವೆಂಬರ್ 10ಕ್ಕೆ ಫೈನಲ್ ನಡೆಯಲಿದೆ.
ಕೋವಿಡ್-19 ಕಾರಣ 2020ರ ಐಪಿಎಲ್ ಆವೃತ್ತಿಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಯ್ತು. ಮಾರ್ಚ್-ಏಪ್ರಿಲ್‌ನಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡಿತ್ತು. ಈ ಐಪಿಎಲ್ ಮುಕ್ತಾಯದ ಬಳಿಕ ಮುಂದಿನ ಐಪಿಎಲ್ ಕತೆಯೇನು?
2021ರ ಐಪಿಎಲ್ ಆವೃತ್ತಿಯ ಆರಂಭ, ಆಟಗಾರರ ಹರಾಜು, ಆತಿಥ್ಯ ವಹಿಸುವ ದೇಶ, ಪಾಲ್ಗೊಳ್ಳುವ ತಂಡಗಳು ಇತ್ಯಾದಿ ಎಲ್ಲಾ ಸಾಧ್ಯತೆಗಳ ಮಾಹಿತಿ ಇಲ್ಲಿದೆ.

ಐಪಿಎಲ್ ಹರಾಜು ಯಾವಾಗ?
ಮುಂದಿನ ಐಪಿಎಲ್‌ನ ಹರಾಜು ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಮಾತುಗಳು ಈ ವರ್ಷಾರಂಭದಲ್ಲೇ ಕೇಳಿ ಬಂದಿತ್ತು. ಕೊರೊನಾ ಕಾರಣ 2021ರ ಹರಾಜು ನಡೆಯೋದು ಅನುಮಾನವೆ. 'ಮುಂದಿನ ಐಪಿಎಲ್‌ಗೆ ಹರಾಜಿಗೆ ಸಂಬಂಧಿಸಿ ನಾವಿನ್ನೂ ಏನೂ ನಿರ್ಧರಿಸಲಿಲ್ಲ. ಈ ಸೀಸನ್ ಮುಗಿಯಲಿ,' ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

2021ರ ಐಪಿಎಲ್ ಆರಂಭ?
2021ರ ಐಪಿಎಲ್ ಅವೃತ್ತಿ ಮುಂದಿನ ವರ್ಷ ಮಾರ್ಚ್ ಮಧ್ಯದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಮುಂದಿನ ಐಪಿಎಲ್ ಅನ್ನು ಭಾರತದಲ್ಲೇ ನಡೆಸಲು ಬಯಸಿರುವುದಾಗಿ ಸೌರವ್ ಗಂಗೂಲಿ ಹೇಳಿಕೊಂಡಿದ್ದಾರೆ. 'ಕೊರೊನಾ ಲಸಿಕೆ ಐಪಿಎಲ್ ಸಮಯದಲ್ಲಿ ಕಂಡು ಹಿಡಿಯಬಹುದು. ಹೀಗಾಗಿ ನಾವು ಐಪಿಎಲ್ ಅನ್ನು ಭಾರತದಲ್ಲೇ ಆಯೋಜಿಸಬಹುದು,' ಎಂದು ಗಂಗೂಲಿ ಮಾಹಿತಿ ನೀಡಿದ್ದಾರೆ.

ಮುಂದಿನ ಐಪಿಎಲ್ ತಾಣ ಯಾವುದು?
2021ರ ಐಪಿಎಲ್ ಒಂದೋ ಈಗ ನಡೆಯುತ್ತಿರುವ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲೇ ನಡೆಯಬಹುದು ಇಲ್ಲವೆ ಭಾರತದಲ್ಲಿ ನಡೆಯಬಹುದು. ಕೊರೊನಾವೈರಸ್ ಪರಿಸ್ಥಿತಿಗಳಿಗೆ ಸಂಬಂಧಿಸಿ ತಾಣ ಅಂತಿಮವಾಗಿ ನಿರ್ಧಾರವಾಗಲಿದೆ.

ತಂಡಗಳು ಮತ್ತು ಬದಲಾವಣೆ
ಈ ಐಪಿಎಲ್‌ನಲ್ಲಿ ಆಡುತ್ತಿರುವ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ್ ರಾಯಲ್ಸ್, ಕಿಂಗ್ಸ್ 11 ಪಂಜಾಬ್, ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಂದಿನ ವರ್ಷವೂ ಕಣಕ್ಕಿಳಿಯಲಿವೆ. ಚೆನ್ನೈ ತಂಡದಲ್ಲಿ ಮುಂದಿನ ಸಾರಿ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications