Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಚೆನ್ನೈ ಸೂಪರ್ ಕಿಂಗ್ಸ್ ಶಿಬಿರವನ್ನು ಸೇರಲು ಸುರೇಶ್ ರೈನಾ ಸಜ್ಜು

 IPL 2021: Suresh Raina exited to join Chennai Super Kings camp

ಕಳೆದ ಬಾರಿಯ ಐಪಿಎಲ್‌ನಿಂದ ದಿಢೀರ್ ಹೊರಗುಳಿದು ಸುದ್ದಿಯ ಕೇಂದ್ರಬಿಂದುವಾಗಿದ್ದ ಸುರೇಶ್ ರೈನಾ ಈಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಬಳಗವನ್ನು ಕೂಡಿಕೊಳ್ಳಲು ಸಜ್ಜಾಗಿದ್ದಾರೆ. ಐಪಿಎಲ್ 14ನೇ ಆವೃತ್ತಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೂಡಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಸುರೇಶ್ ರೈನಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬುಧವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸುರೇಶ್ ರೈನಾ ಅಭ್ಯಾಸ ನಡೆಸುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡಿತ್ತು. ಇದರಲ್ಲಿ 'ಚಿನ್ನ ತಾಲ ಕಮಿಂಗ್ ಸೂನ್' ಎಂದು ಬರೆದುಕೊಳ್ಳುವ ಮೂಲಕ ಶೀಘ್ರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬಳಗ ಸೇರಿಕೊಳ್ಳುವ ಸುಳಿವನ್ನು ಸಿಎಸ್‌ಕೆ ನೀಡಿತ್ತು.

ಈ ಟ್ವೀಟ್‌ಅನ್ನು ಸುರೇಶ್ ರೈನಾ ರೀಟ್ವೀಟ್ ಮಾಡಿದ್ದು "ತುಂಬಾ ಉತ್ಸುಕನಾಗಿದ್ದೇನೆ ಹಾಗೂ ಕಾತುರದಿಂದ ನಮ್ಮ ಗುಹೆ ಸೇರಲು ಕಾಯುತ್ತಿದ್ದೇನೆ" ಎಂದು ಈ ಟ್ವೀಟ್‌ನಲ್ಲಿ ತಮ್ಮ ಉತ್ಸುಕತೆಯನ್ನು ಸುರೇಶ್ ರೈನಾ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಕಾರಣಗಳನ್ನು ಮುಂದಿಟ್ಟು ಸುರೇಶ್ ರೈನಾ ಕಳೆದ ಆವೃತ್ತಿಯಲ್ಲಿ ಅಂತಿಮ ಹಂತದಲ್ಲಿ ಟೂರ್ನಿಯಿಂದ ಹೊರಗುಳಿದಿದ್ದರು. ಅದಾದ ನಂತರದ ಬೆಳವಣಿಗೆಗಳು ಸುರೇಶ್ ರೈನಾ ಮತ್ತೆ ಸಿಎಸ್‌ಕೆ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ಎನ್ನುವಂತ ವರದಿಗಳು ಬರತೊಡಗಿದವು. ಆದರೆ ಇತ್ತೀಚೆಗೆ ನಡೆದ ಐಪಿಎಲ್ ಹರಾಜಿಗೂ ಮುನ್ನ ಸಿಎಸ್‌ಕೆ ತಂಡ ಸುರೇಶ್ ರೈನಾ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವ ಮೂಲಕ ಈ ಎಲ್ಲಾ ಅನುಮಾನಗಳಿಗೂ ತೆರೆ ಎಳೆದಿತ್ತು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಂತ್ಯವಾದ ಬಳಿಕ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆದ ಹರಾಜಿನಲ್ಲಿ ಚೆನ್ನೈ ಕೆಲ ಉತ್ತಮ ಆಟಗಾರರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊಯೀನ್ ಅಲಿ ಮತ್ತು ಕೆ ಗೌತಮ್ ಅವರಂತಾ ಆಟಗಾರರನ್ನು ಚೆನ್ನೈ ಸೇರ್ಪಡೆಗೊಳಿಸಿದ್ದು ಅದಕ್ಕೂ ಮುನ್ನ ರಾಬಿನ್ ಉತ್ತಪ್ಪ ಅವರನ್ನು ಟ್ರೇಡಿಂಗ್‌ನಲ್ಲಿ ಸೇರಿಸಿಕೊಂಡಿತ್ತು. ಅನುಭವಿ ಚೇತೇಶ್ವರ್ ಪೂಜಾರ ಅವರನ್ನು ಕೂಡ ಚೆನ್ನೈ ತನ್ನ ತಂಡಕ್ಕೆ ಸೇರ್ಪಡೆಗೊಳಿಸಿದೆ.

Story first published: Thursday, March 18, 2021, 16:34 [IST]
Other articles published on Mar 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+