For Quick Alerts
ALLOW NOTIFICATIONS  
For Daily Alerts
 

ಪತ್ನಿಗೆ ಮುತ್ತಿಕ್ಕಿದ ಸೂರ್ಯಕುಮಾರ್ ಯಾದವ್, ಚಿತ್ರ ವೈರಲ್

IPL 2021: Suryakumar Yadav’s adorable kiss to his wife pic goes viral in social media

ದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯ ಆರಂಭಿಕ ಪಂದ್ಯಗಳಲ್ಲಿ ಸೋತು ನಿರಾಸೆ ಮೂಡಿಸಿದ್ದ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತೆ ಗೆಲುವಿನ ಲಯಕ್ಕೆ ಬಂದಿದೆ. ಏಪ್ರಿಲ್ 29ರ ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ 7 ವಿಕೆಟ್‌ ಸುಲಭ ಜಯ ಗಳಿಸಿತ್ತು.

ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ ಮುಂಬೈಯ ಕ್ವಿಂಟನ್ ಡಿ ಕಾಕ್ 70, ಕೃನಾಲ್ ಪಾಂಡ್ಯ 39, ರೋಹಿತ್ ಶರ್ಮಾ 14, ಸೂರ್ಯಕುಮಾರ್ ಯಾದವ್ 16, ಕೀರನ್ ಪೊಲಾರ್ಡ್ 16 ರನ್‌ನೊಂದಿಗೆ ಮುಂಬೈ 18.3ನೇ ಓವರ್‌ಗೆ 3 ವಿಕೆಟ್‌ ಕಳೆದು 172 ರನ್ ಬಾರಿಸಿ ಪಂದ್ಯ ಗೆದ್ದಿತ್ತು.

ಪಂದ್ಯ ಗೆದ್ದಿದ್ದರಿಂದ ಮುಂಬೈ ಆಟಗಾರರು ಹುಮಸ್ಸಿನಲ್ಲಿದ್ದರು. ಎಂಐ ಪ್ರಮುಖ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್ ಕೂಡ ಖುಷಿಯಲ್ಲಿದ್ದರು. ಈ ವೇಳೆ ಸ್ಟೇಡಿಯಂನಲ್ಲಿ ಯಾದವ್ ತನ್ನ ಪತ್ನಿ ದೇವಿಶಾ ಶೆಟ್ಟಿಗೆ ಪ್ರೀತಿಯಿಂದ ಮುತ್ತಿಕ್ಕಿದ್ದರು. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಭಾರತದ ಮಾಜಿ ವೇಗಿ ಝಹೀರ್ ಖಾನ್ ಪತ್ನಿ ಸಾಗರಿಕಾ ಘಾಟೆ ಈ ಚಿತ್ರವನ್ನು ಶೇರ್ ಮಾಡಿದ್ದರು.

ಸ್ಟೇಡಿಯಂನಲ್ಲಿದ್ದ ಯಾದವ್ ಸ್ಟೇಡಿಯಂನ ಇನ್ನೊಂದು ಬದಿಯಲ್ಲಿದ್ದ ಪತ್ನಿಗೆ ಕಿಸ್ ಮಾಡಿದ್ದರು. ಇಬ್ಬರ ಮಧ್ಯ ಗಾಜಿನ ಗೋಡೆಯಿತ್ತು. ಪತ್ನಿ ದೇವಿಶಾ ಮಾಸ್ಕ್ ಕೂಡ ಹಾಕಿದ್ದರು. ಆದರೆ ಇಬ್ಬರ ಪ್ರೀತಿಗೆ ಅದ್ಯಾವುದೂ ಅಡ್ಡಿ ಅನ್ನಿಸಿರಲಿಲ್ಲ. ಇದೇ ಕಾರಣಕ್ಕೆ ಈ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Story first published: Friday, April 30, 2021, 20:42 [IST]
Other articles published on Apr 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+