For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್

IPL 2021: Top 5 bowlers with most dot Balls in IPL history

ಇಂಡಿಯನ್ ಪ್ರಿಮಿಯರ್ ಲೀಗ್ ಎಂದರೆ ಕೇವಲ ಬ್ಯಾಟ್ಸ್‌ಮನ್‌ಗಳು ಹಿಗ್ಗಾಮುಗ್ಗಾ ರನ್ ಚಚ್ಚಿ ದಾಖಲೆ ನಿರ್ಮಿಸುವ ಟೂರ್ನಿಯಲ್ಲ. ಬೌಲರ್‌ಗಳೂ ಸಹ ಅತ್ಯುತ್ತಮ ಪ್ರದರ್ಶನವನ್ನು ತೋರಿ ಮಿಂಚಲು ಐಪಿಎಲ್ ಒಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು.

ಕೆಲ ಬೌಲರ್‌ಗಳು ಹೆಚ್ಚಿನ ವಿಕೆಟ್ ತೆಗೆದುಕೊಳ್ಳುವುದರ ಮೂಲಕ ದಾಖಲೆಗಳನ್ನು ನಿರ್ಮಿಸಿದರೆ ಮತ್ತಷ್ಟು ಬೌಲರ್‌ಗಳು ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಹಾಕುವುದರ ಮೂಲಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಟಿ ಟ್ವೆಂಟಿ ಪಂದ್ಯಗಳಲ್ಲಿ ಡಾಟ್ ಬಾಲ್ ಹಾಕುವುದು ಸುಲಭದ ಮಾತಲ್ಲ. ಅದರಲ್ಲಿಯೂ ಹೊಡಿ ಬಡಿ ಆಟ ಎನಿಸಿಕೊಂಡಿರುವ ಐಪಿಎಲ್ ಪಂದ್ಯಗಳಲ್ಲಂತೂ ಡಾಟ್ ಬಾಲ್ ಹಾಕುವುದು ತೀರಾ ಕಷ್ಟದ ಕೆಲಸವೇ ಸರಿ.

ಡಾಟ್ ಬಾಲ್ ಗಳನ್ನು ಹಾಕಿ ಬ್ಯಾಟ್ಸ್‌ಮನ್‌ಗಳನ್ನು ಒತ್ತಡಕ್ಕೆ ತಳ್ಳುವುದು ಪ್ರತಿಯೊಬ್ಬ ಬೌಲರ್‌ಗೂ ಕರಗತವಾಗದ ವಿದ್ಯೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಹಾಕಿರುವ ಟಾಪ್ 5 ಬೌಲರ್‌ಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..

ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್
5. ಪಿಯೂಷ್ ಚಾವ್ಲಾ

ಇಂಡಿಯನ್ ಪ್ರಿಮಿಯರ್ ಲೀಗ್‌ನ 163 ಇನ್ನಿಂಗ್ಸ್‌ಗಳಲ್ಲಿ ರ ಬೌಲಿಂಗ್ ಮಾಡಿರುವ ಪಿಯೂಷ್ ಚಾವ್ಲಾ 1146 ಡಾಟ್ ಬಾಲ್ ಗಳನ್ನು ಎಸೆದು ಟಾಪ್ 5 ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್
4. ಲಸಿತ್ ಮಾಲಿಂಗ

ಇಂಡಿಯನ್ ಪ್ರಿಮಿಯರ್ ಲೀಗ್‌ನ 122 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಶ್ರೀಲಂಕಾ ಬೌಲರ್ ಲಸಿತ್ ಮಾಲಿಂಗ 1155 ಡಾಟ್ ಬಾಲ್ ಗಳನ್ನು ಹಾಕಿ 4ನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್
3. ಭುವನೇಶ್ವರ್ ಕುಮಾರ್

ಇಂಡಿಯನ್ ಪ್ರಿಮಿಯರ್ ಲೀಗ್‌ನ 121 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ಭುವನೇಶ್ವರ್ ಕುಮಾರ್ ಒಟ್ಟು 1164 ಡಾಟ್ ಬಾಲ್ ಗಳನ್ನು ಎಸೆದು 3 ನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್
2. ರವಿಚಂದ್ರನ್ ಅಶ್ವಿನ್
ಇಂಡಿಯನ್ ಪ್ರೀಮಿಯರ್ ಲೀಗ್‌ನ 151 ಇನ್ನಿಂಗ್ಸ್‌ಗಳಲ್ಲಿ ಬೌಲಿಂಗ್ ಮಾಡಿರುವ ರವಿಚಂದ್ರನ್ ಅಶ್ವಿನ್ 1170 ಡಾಟ್ ಬಾಲ್ ಗಳನ್ನು ಎಸೆದು ಎರಡನೇ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಡಾಟ್ ಬಾಲ್ ಹಾಕಿರುವ ಟಾಪ್ 5 ಬೌಲರ್ಸ್
1. ಹರ್ಭಜನ್ ಸಿಂಗ್
ಭಾರತದ ಲೆಜಂಡರಿ ಬೌಲರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ 157 ಇನ್ನಿಂಗ್ಸ್‌ಗಳಲ್ಲಿ 1249 ಡಾಟ್ ಬಾಲ್ ಗಳನ್ನು ಎಸೆದು ಅತಿ ಹೆಚ್ಚು ಡಾಟ್ ಬಾಲ್ ಎಸೆದ ಐಪಿಎಲ್ ಬೌಲರ್‌ಗಳು ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿಕೊಂಡಿದ್ದಾರೆ.

Story first published: Tuesday, March 30, 2021, 8:07 [IST]
Other articles published on Mar 30, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+