Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್ 2021: ಮುಂಬೈ ವಿರುದ್ಧ ನಟರಾಜನ್ ಆಡದಿರಲು ಬಲವಾದ ಕಾರಣ ಹೇಳಿದ ಲಕ್ಷ್ಮಣ್

IPL 2021: VVS Laxman explains T natarajan why did not play against Mumabi Indians

ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ವೇಗಿ ಟಿ ನಟರಾಜನ್ ಬದಲಿಗೆ ಖಲೀಲ್ ಅಹ್ಮದ್ ಕಣಕ್ಕಿಳಿದಿದ್ದರು. ಈ ಬಾರಿಯ ಐಪಿಎಲ್‌ನಲ್ಲೂ ಆಡಿದ ಮೊದಲ ಎರಡು ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ನಟರಾಜನ್ ಮೂರನೇ ಪಂದ್ಯದಿಂದ ಹೊರಗುಳಿದಿದ್ದು ಅಚ್ಚರಿ ಮೂಡಿಸಿತ್ತು. ಇದಕ್ಕೆ ಹೈದರಾಬಾದ್ ತಂಡದ ಮೆಂಟರ್ ಕಾರಣವನ್ನು ನೀಡಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಸೋತ ಬಳಿಕ ಮಾತನಾಡಿದ ವಿವಿಎಸ್ ಲಕ್ಷ್ಮಣ್ ಟಿ ನಟರಾಜನ್ ಅವರು ಮುಂಬೈ ವಿರುದ್ಧದ ಪಂದ್ಯದಲ್ಲಿ ಆಡಲು ಟಿ ನಟರಾಜನ್ ಅಸಮರ್ಥರಾಗಿದ್ದರು ಎಂದು ತಿಳಿಸಿದ್ದಾರೆ. ಅವರು ಎಡ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ ಎಂದು ಮಾಹಿತಿ ನೀಡಿದರು.

"ದುರಾದೃಷ್ಟವಶಾತ್ ಇಂದಿನ ಪಂದ್ಯದಲ್ಲಿ ಎಡ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿರುವ ಕಾರಣ ನಟರಾಜನ್ ಆಡುವ ಬಳಗದಿಂದ ಹೊರಗುಳಿದಿದ್ದಾರೆ. ಅವರು ಇಂದಿನ ಪಂದ್ಯದಲ್ಲಿ ಆಡಲು ಅಸಮರ್ಥರಾಗಿದ್ದಾರೆ. ಹಾಗಾಗಿ ಖಲೀಲ್ ಅಹ್ಮದ್ ಅವರನ್ನು ಕಣಕ್ಕಿಳಿಸಲಾಯಿತು" ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್.

ಇದಕ್ಕೂ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಿರ್ದೇಶಕರು ಕೂಡ ನಟರಾಜನ್ ಅವರು ಕಣಕ್ಕಿಳಿಯದ ಬಗ್ಗೆ ಪ್ರತಿಕ್ರಿಯಿಸಿ ನಟರಾಜನ್ ಅವರನ್ನು ಕೈಬಿಟ್ಟಿಲ್ಲ ಅವರಿಗೆ ವಿಶ್ರಾಂತಿಯನ್ನು ನೀಡಲಾಗಿದೆ ಎಂದು ಹೇಳಿದ್ದರು. ಅವರ ಒತ್ತಡವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಟಾಮ್ ಮೂಡಿ ತಿಳಿಸಿದ್ದರು.

ಬಳಿಕ ನಟರಾಜನ್ ಅವರ ಸ್ಥಾನದಲ್ಲಿ ಆಡಿದ ಖಲೀಲ್ ಅಹ್ಮದ್ ಅವರನ್ನು ಲಕ್ಷ್ಮಣ್ ಪ್ರಶಂಸಿಸಿದರು. "ಈ ಬಾರಿಯ ಆವೃತ್ತಿಯಲ್ಲಿ ಮೊದಲ ಪಂದ್ಯವನ್ನು ಆಡಿದ ಖಳೀಲ್ ಅಹ್ಮದ್ ಅವರ ಪ್ರದರ್ಶನ ಅತ್ಯುತ್ತಮವಾಗಿದೆ. ಅವರು ಪರಿಸ್ಥಿತಿಯನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸಾಕಷ್ಟು ಏರಿಳಿತಗಳನ್ನು ಮಾಡಿದ್ದಾರೆ. ಖಲೀಲ್ ಅಹ್ಮದ್ ಅವರ ಬೌಲಿಂಗ್‌ ಹೈದರಾಬಾದ್ ತಂಡಕ್ಕೆ ಸಕಾರಾತ್ಮಕ ಸಂಗತಿಯಾಗಿದೆ" ಎಂದಿದ್ದಾರೆ ಲಕ್ಷ್ಮಣ್. 4 ಓವರ್‌ಗಳನ್ನು ಎಸೆತ ಖಲೀಲ್ 24 ರನ್‌ ನೀಡಿ ಒಂದು ವಿಕೆಟ್ ಪಡೆದುಕೊಂಡರು.

Story first published: Sunday, April 18, 2021, 14:15 [IST]
Other articles published on Apr 18, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+