Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2022: ಆಕಾಶ್ ಚೋಪ್ರಾ ಟ್ವೀಟ್‌ಗೆ ಟಕ್ಕರ್ ನೀಡಿದ ಯುಜವೇಂದ್ರ ಚಹಾಲ್‌

Aakash chopra vs chahal

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಜಸ್ಥಾನ್ ರಾಯಲ್ಸ್ ತಂಡದ ಸ್ಪಿನ್ನರ್ ಯುಜವೇಂದ್ರ ಚಹಾಲ್ ಅವರು ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಅವರೊಂದಿಗೆ ಟ್ವಿಟರ್‌ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಆಕಾಶ್ ಚೋಪ್ರಾ ಅವರ ಬ್ಯಾಟ್ಸ್‌ಮನ್ ಪರವಾಗಿ ಟ್ವೀಟ್‌ಗೆ ಉತ್ತರವಾಗಿ ಬೌಲರ್‌ಗಳ ಪರವಾಗಿ ಚಾಹಲ್ ಅವರು ಕೌಂಟರ್ ನೀಡಿದರು. ಇವರಿಬ್ಬರ ನಡುವಿನ ಫನ್ ಟ್ವೀಟ್ ವಾರ್ ವೈರಲ್ ಆಗಿದೆ.

ಐಪಿಎಲ್ 2022 ರ 11ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವರ್ಸಸ್ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್‌ ಸೀಸನ್‌ನ ಅತಿದೊಡ್ಡ ಸಿಕ್ಸರ್ ಅನ್ನು ಬಾರಿಸಿದ್ರು. ಚೆನ್ನೈ ವೇಗಿ ಮುಖೇಶ್ ಚೌಧರಿ ಅವರ ಬೌಲಿಂಗ್‌ನಲ್ಲಿ ಲಿವಿಂಗ್‌ಸ್ಟೋನ್ 108 ಮೀಟರ್ ದೂರಕ್ಕೆ ಸಿಕ್ಸರ್ ಬಾರಿಸಿದ್ರು. ಇದು ಈ ಋತುವಿನಲ್ಲಿ ಇದುವರೆಗಿನ ಅತಿ ದೊಡ್ಡ ಸಿಕ್ಸರ್ ಆಗಿದೆ.

ಈ ಸೂಪರ್ ಸಿಕ್ಸ್ ಅನ್ನು ಹೊಗಳಿರುವ ಆಕಾಶ್ ಚೋಪ್ರಾ ಟ್ವೀಟ್ ಮಾಡಿದ್ದಾರೆ. 100 ಮೀಟರ್ ದಾಟುವ ಸಿಕ್ಸರ್ ಗೆ 8 ರನ್ ನೀಡಬೇಕು ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‌ಗೆ ಚಹಾಲ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. 100 ಮೀಟರ್ ದಾಟುವ ಸಿಕ್ಸರ್ ಗೆ 8 ರನ್ ಮಾಡಿದ್ರೆ, ಸತತ ಮೂರು ಡಾಟ್ ಬಾಲ್ ಎಸೆದರೆ ಬೌಲರ್‌ಗೆ ವಿಕೆಟ್ ನೀಡಬೇಕು ಎಂದು ಕೌಂಟರ್ ಅಟ್ಯಾಕ್ ಮಾಡಿದ್ದಾರೆ. ಚಾಹಲ್ ಅವರ ಕೌಂಟರ್ ಬಗ್ಗೆ ಆಕಾಶ್ ಚೋಪ್ರಾ ಉತ್ತರ ನೀಡದೆ ಕಂಗಾ;ಆದ್ರು. ಆದ್ರೆ ಈ ಮೋಜಿನ ಸಂಭಾಷಣೆಗೆ ಸಿಎಸ್‌ಕೆ ಮಾಜಿ ಪ್ಲೇಯರ್ ಸುರೇಶ್ ರೈನಾ "ಹಹ್ಹ" ಎಂದು ಪ್ರತಿಕ್ರಿಯಿಸಿದರು.

ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್‌, ಚೆನ್ನೈ ತಂಡವನ್ನು 54 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಲಿವಿಂಗ್ ಸ್ಟೋನ್ (32 ಎಸೆತಗಳಲ್ಲಿ 5 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 60 ರನ್) ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. ಅವರ ಜೊತೆ ಶಿಖರ್ ಧವನ್ (33) ಮತ್ತು ಜಿತೇಶ್ ಶರ್ಮಾ (26) ಕೊಡುಗೆ ನೀಡಿದರು.

ಚೆನ್ನೈ ಬೌಲರ್‌ಗಳಾದ ಡ್ವೇನ್ ಪ್ರಿಟೋರಿಯಸ್ ಮತ್ತು ಕ್ರಿಸ್ ಜೋರ್ಡಾನ್ ತಲಾ ಎರಡು ವಿಕೆಟ್ ಪಡೆದರು. ಮುಖೇಶ್ ಚೌಧರಿ, ಡ್ವೇನ್ ಬ್ರಾವೋ ಮತ್ತು ಜಡೇಜಾ ತಲಾ ಎರಡು ವಿಕೆಟ್ ಪಡೆದರು. ಬಳಿಕ ಬ್ಯಾಟಿಂಗ್‌ಗೆ ಇಳಿದ ಚೆನ್ನೈ 18 ಓವರ್‌ಗಳಲ್ಲಿ 126 ರನ್‌ಗಳಿಗೆ ಕುಸಿಯಿತು. ಶಿವಂ ದುಬೆ (57) ಹೊರತುಪಡಿಸಿ ಎಲ್ಲರೂ ವಿಫಲರಾದರು. ಈ ಮೂಲಕ ಸಿಎಸ್‌ಕೆ ಸತತ ಮೂರು ಪಂದ್ಯಗಳಲ್ಲಿ ಸೋಲನ್ನ ಕಂಡಿತು.

Story first published: Tuesday, April 5, 2022, 10:16 [IST]
Other articles published on Apr 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+