For Quick Alerts
ALLOW NOTIFICATIONS  
For Daily Alerts
 

GT vs PBKS: ಪಂದ್ಯದಲ್ಲಿ ನಿಮ್ಮ ಡ್ರೀಮ್ ಟೀಮ್ ಗೆಲ್ಲಲು ಈ ಮೂವರನ್ನು ತಂಡದಿಂದ ಹೊರಗಿಡಿ

IPL 2022: 3 Players you should avoid in your dream team for GT vs PBKS match

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 16ನೇ ಪಂದ್ಯ ಇಂದು ( ಏಪ್ರಿಲ್ 8 ) ಮುಂಬೈನ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ನೂತನ ತಂಡ ಗುಜರಾತ್ ಟೈಟನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 2 ಪಂದ್ಯಗಳನ್ನಾಡಿರುವ ಗುಜರಾತ್ ಟೈಟನ್ಸ್ ಎರಡೂ ಪಂದ್ಯಗಳಲ್ಲಿಯೂ ಸಹ ಜಯ ಸಾಧಿಸಿದ್ದು, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಅತ್ತ 3 ಪಂದ್ಯಗಳನ್ನಾಡಿ 2 ಪಂದ್ಯಗಳಲ್ಲಿ ಗೆದ್ದು, ಉಳಿದೊಂದು ಪಂದ್ಯದಲ್ಲಿ ಸೋತಿರುವ ಪಂಜಾಬ್ ಕಿಂಗ್ಸ್ ಐದನೇ ಸ್ಥಾನದಲ್ಲಿದೆ.

ಇನ್ನು ಇತ್ತಂಡಗಳ ನಡುವಿನ ಈ ಪಂದ್ಯ ನಡೆಯಲಿರುವ ಬ್ರಬೌರ್ನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ಇದೇ ಮೊದಲ ಬಾರಿಗೆ ಯಾವುದೇ ಅನುಭವವಿಲ್ಲದೇ ಕಣಕ್ಕಿಳಿಯುತ್ತಿದ್ದರೆ, ಅತ್ತ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಿದ್ದ ಪಂಜಾಬ್ ಕಿಂಗ್ಸ್ 54 ರನ್‌ಗಳ ಜಯ ಸಾಧಿಸಿತ್ತು. ಹೀಗೆ ಈ ಕ್ರೀಡಾಂಗಣದಲ್ಲಿ ಬೃಹತ್ ಗೆಲುವು ಸಾಧಿಸಿದ ಉತ್ಸಾಹದಲ್ಲಿ ಪಂಜಾಬ್ ಕಿಂಗ್ಸ್ ಕಣಕ್ಕಿಳಿದರೆ, ಗುಜರಾತ್ ಟೈಟನ್ಸ್ ತಂಡಕ್ಕಿದು ಹೊಸ ಅನುಭವ ಎಂದೇ ಹೇಳಬಹುದು.

ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಪಂಜಾಬ್ ಕಿಂಗ್ಸ್ ಜಯ ಸಾಧಿಸುತ್ತಾ ಅಥವಾ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಒಂದೆಡೆ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಯಾವ ತಂಡ ಜಯ ಸಾಧಿಸಲಿದೆ ಎಂಬ ಚರ್ಚೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಈ ಪಂದ್ಯಕ್ಕೆ ಎರಡೂ ತಂಡಗಳ ಆಟಗಾರರನ್ನೊಳಗೊಂಡ ಡ್ರೀಮ್ ಟೀಮ್‌ಗಳನ್ನು ಕ್ರಿಕೆಟ್ ಪ್ರೇಮಿಗಳು ರಚಿಸುತ್ತಿದ್ದಾರೆ. ಹೀಗೆ ಕ್ರಿಕೆಟ್ ಪ್ರೇಮಿಗಳು ರಚಿಸುತ್ತಿರುವ ಡ್ರೀಮ್ ಟೀಮ್‌ಗಳಲ್ಲಿ ಈ ಕೆಳಕಂಡ ಮೂವರು ಆಟಗಾರರನ್ನು ಸೇರಿಸಿಕೊಳ್ಳದೇ ಹೊರಗಿಡುವುದು ಉತ್ತಮ ಎನ್ನಬಹುದು.

1. ಶಾರುಖ್ ಖಾನ್:
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗುತ್ತಿರುವ ಶಾರುಖ್ ಖಾನ್ ಮೊದಲ ಪಂದ್ಯದಲ್ಲಿ 20 ಎಸೆತಗಳನ್ನು ಎದುರಿಸಿ ಅಜೇಯ 24 ರನ್ ದಾಖಲಿಸಿದ್ದರು. ಶಾರುಖ್ ಖಾನ್ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡರೂ ಸಹ ಪಂಜಾಬ್ ಕಿಂಗ್ಸ್ ತಂಡದಲ್ಲಿ ಸಾಕಷ್ಟು ಬ್ಯಾಟ್ಸ್‌ಮನ್‌ಗಳಿರುವ ಕಾರಣ ಅವರಿಗೆ ಹೆಚ್ಚಿನ ಎಸೆತಗಳನ್ನು ಎದುರಿಸುವ ಅವಕಾಶ ಕಡಿಮೆ ಸಿಗಲಿದ್ದು, ಡ್ರೀಮ್ ಟೀಮ್‌ನಲ್ಲಿ ಹೆಚ್ಚು ಅಂಕಗಳು ಬರುವುದಿಲ್ಲ. ಹೀಗಾಗಿ ಶಾರುಖ್ ಖಾನ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡಿ.

2. ವರುಣ್ ಆರನ್
ಎರಡು ಪಂದ್ಯಗಳಲ್ಲಿ ಕಣಕ್ಕಿಳಿದು ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ವರುಣ್ ಆರನ್ ನಾಲ್ಕು ಓವರ್ ಬೌಲಿಂಗ್ ಮಾಡುವುದು ಅನುಮಾನ ಮೂಡಿಸಿದ್ದು, ಫ್ಯಾಂಟಸಿ ಅಂಕಗಳೂ ಸಹ ಕಡಿಮೆ ಬರಲಿವೆ. ಹೀಗಾಗಿ ವರುಣ್ ಆರನ್ ಅವರನ್ನು ನಿಮ್ಮ ಡ್ರೀಮ್ ಟೀಮ್‌ನಿಂದ ಹೊರಗಿಡುವುದು ಉತ್ತಮ ಎನ್ನಬಹುದು.

3. ಅಭಿನವ್ ಮನೋಹರ್
ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಅಭಿನವ್ ಮನೋಹರ್ ಏಳನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಆಟಗಾರನಾಗಿದ್ದು, ಹೆಚ್ಚು ಎಸೆತಗಳನ್ನು ಎದುರಿಸುವ ಅವಕಾಶ ಸಿಗುವುದಿಲ್ಲ. ಹೀಗಾಗಿ ಅಭಿನವ್ ಮನೋಹರ್ ಅವರಿಗೆ ನಿಮ್ಮ ಡ್ರೀಮ್ ಟೀಮ್‌ನಲ್ಲಿ ಸ್ಥಾನ ನೀಡುವುದು ಸರಿಯಲ್ಲ ಎನ್ನಬಹುದು.

Story first published: Friday, April 8, 2022, 16:23 [IST]
Other articles published on Apr 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+