ಐಪಿಎಲ್ 2022: ಆರ್‌ಸಿಬಿ ಹಂಚಿಕೊಂಡ ವಿಡಿಯೋ ಗಮನಿಸಿ 100% ಈತನೇ ನಾಯಕ ಎಂದ ಅಭಿಮಾನಿಗಳು!

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಇದೇ ತಿಂಗಳ 26ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವಿನ ಉದ್ಘಾಟನಾ ಪಂದ್ಯದ ಮೂಲಕ ಟೂರ್ನಿಗೆ ಅಧಿಕೃತವಾಗಿ ಚಾಲನೆ ದೊರೆಯಲಿದೆ.
ಇತ್ತ ಹಲವು ತಂಡದ ಆಟಗಾರರು ಮತ್ತು ತರಬೇತುದಾರರು ಅಭ್ಯಾಸಗಳನ್ನು ಆರಂಭಿಸಲು ಕ್ಯಾಂಪ್ ಸೇರಿಕೊಳ್ಳುತ್ತಿದ್ದರೆ, ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮಾತ್ರ ಇನ್ನೂ ಕೂಡ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದನ್ನು ಮಾತ್ರ ಘೋಷಿಸಿಯೇ ಇಲ್ಲ. ಹೌದು, ಮಾರ್ಚ್ 12ರ ಶನಿವಾರದಂದು ವಿರಾಟ್ ಕೊಹ್ಲಿ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಯಾರಾಗಲಿದ್ದಾರೆ ಎಂಬುದನ್ನು ವಿಶೇಷ ಕಾರ್ಯಕ್ರಮವೊಂದರ ಮೂಲಕ ಘೋಷಣೆ ಮಾಡಲು ಮುಂದಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಬಾರಿ ನಾಯಕನನ್ನು ಘೋಷಿಸುತ್ತಿರುವ ಅಂತಿಮ ಫ್ರಾಂಚೈಸಿಯಾಗಿದೆ.
ಈ ಕಾರ್ಯಕ್ರಮದ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ಇತ್ತೀಚಿಗಷ್ಟೆ ವಿಶೇಷ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅದರಲ್ಲಿ ತನ್ನ ನಾಯಕ ಯಾರೆಂಬುದನ್ನು ಮುಖ ಕಾಣದ ಹಾಗೆ ಅಸ್ಪಷ್ಟವಾಗಿ ತೋರಿಸಿತ್ತು. ಈ ವಿಡಿಯೋ ನೋಡಿದ ಹಲವಾರು ಕ್ರಿಕೆಟ್ ಅಭಿಮಾನಿಗಳು ಮುಂದಿನ ನಾಯಕ ಯಾರೆಂಬುದನ್ನು ಊಹಿಸಲು ಆರಂಭಿಸಿದ್ದರು. ಇತ್ತ ಮತ್ತೋರ್ವ ಅಭಿಮಾನಿ ವಿರಾಟ್ ಕೊಹ್ಲಿ ಮಾತನಾಡಿರುವ ವಿಡಿಯೋಗೆ ಕಾಮೆಂಟ್ ಮಾಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿರುವ ಆಟಗಾರ ಯಾರು ಎಂಬುದನ್ನು ಕೆಲ ಊಹೆಗಳ ಮೂಲಕ ಈ ಕೆಳಕಂಡಂತೆ ತಿಳಿಸಿದ್ದಾರೆ.

ಈತನೇ ಮುಂದಿನ ನಾಯಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಂಚಿಕೊಂಡಿರುವ ವಿಡಿಯೋದಲ್ಲಿ ಆಟಗಾರನೋರ್ವ ನಡೆದು ಬರುವ ವಿಡಿಯೋವನ್ನು ಮುಖ ಕಾಣದ ಹಾಗೆ ತೋರಿಸಿದ್ದು, 'ದಿ ಲೀಡರ್ ಆಫ್ ದಿ ಪ್ರೈಡ್ ಈಸ್ ಕಮಿಂಗ್' ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿರುವ ಆಟಗಾರನ ಕೈ ಮತ್ತು ಕೆಲವೊಂದಿಷ್ಟು ಚಿಹ್ನೆಗಳನ್ನು ಮತ್ತೊಂದು ಫೋಟೋದೊಂದಿಗೆ ಹೊಂದಾಣಿಕೆ ಮಾಡಿರುವ ಅಭಿಮಾನಿಯೋರ್ವ ಗ್ಲೆನ್ ಮ್ಯಾಕ್ಸ್‌ವೆಲ್ ಅವರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ನಾಯಕ ಎಂದು ಕಾಮೆಂಟ್ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಂಚಿಕೊಂಡಿರುವ ವಿಡಿಯೋದಲ್ಲಿರುವ ಆಟಗಾರನ ಚಿತ್ರ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಚಿತ್ರ ಬಹುತೇಕ ಹೊಂದಾಣಿಕೆಯಾಗುತ್ತಿರುವುದನ್ನು ಕಂಡ ಇತರೆ ನೆಟ್ಟಿಗರು ಈ ಅಭಿಮಾನಿಯ ಊಹೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆದರೆ ಟೂರ್ನಿಯ ಆರಂಭದ ಪಂದ್ಯಗಳಿಗೆ ಲಭ್ಯವಿಲ್ಲ ಮ್ಯಾಕ್ಸಿ
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮಾರ್ಚ್ ಕೊನೆಯ ವಾರದಲ್ಲಿ ಆರಂಭವಾಗುತ್ತಿದ್ದು ಅದೇ ಸಮಯಕ್ಕೆ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾದಲ್ಲಿ ವಿವಾಹವಾಗುತ್ತಿದ್ದಾರೆ. ಈ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಟೂರ್ನಿಯ ಕೆಲ ಆರಂಭಿಕ ಪಂದ್ಯಗಳಿಗೆ ಗ್ಲೆನ್ ಮ್ಯಾಕ್ಸ್‌ವೆಲ್ ಅಲಭ್ಯರಾಗಲಿದ್ದು, ಮ್ಯಾಕ್ಸ್‌ವೆಲ್ ಅವರಿಗೆ ನಾಯಕತ್ವ ನೀಡುವುದು ಅನುಮಾನ ಎಂದು ಕೂಡ ಕೆಲ ಕ್ರಿಕೆಟ್ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಕ್ವಾಡ್
ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಅನುಜ್ ರಾವತ್, ಫಿನ್ ಅಲೆನ್, ಆಕಾಶ್ ದೀಪ್, ಜೋಶ್ ಹ್ಯಾಜಲ್‌ವುಡ್, ಜೇಸನ್ ಬೆಹ್ರೆನ್‌ಡಾರ್ಫ್, ಚಾಮಾ ಮಿಲಿಂದ್, ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ವನಿಂದು ಹಸರಂಗ, ಶಹಬಾಜ್ ಅಹ್ಮದ್, ಮಾಹಿ ಶೆಪಾಲ್ ಅಹ್ಮದ್ ರುದರ್‌ಫೋರ್ಡ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್, ಡೇವಿಡ್ ವಿಲ್ಲಿ, ಲುವ್ನಿತ್ ಸಿಸೋಡಿಯಾ, ಸಿದ್ಧಾರ್ಥ್ ಕೌಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications