ಮುಂದಿನ ಪಂದ್ಯದಲ್ಲಿ ಆತನಿಗೆ ಅವಕಾಶ ನೀಡಬಾರದು: ಬಲಿಷ್ಠ ಆಟಗಾರನ ಬಗ್ಗೆ ಆಕಾಶ್ ಚೋಪ್ರ ಕಿಡಿ

ಸೋಮವಾರ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಪಡೆ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಸತತ ಐದು ಪಂದ್ಯಗಳ ಸೋಲಿನ ನಂತರ ಕೆಕೆಆರ್ ಗೆಲುವಿನ ರುಚಿ ಕಂಡಿದೆ. ಕೆಕೆಆರ್‌ನ ಮಧ್ಯಮ ಕ್ರಮಾಂಕದ ಆಟಗಾರರಾದ ನಿತೀಶ್ ರಾಣಾ ಹಾಗೂ ರಿಂಕಿ ಸಿಂಗ್ ಅದ್ಭುತ ಪ್ರದರ್ಶನದ ಕಾರಣದಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆಯೇ ಕೆಕೆಆರ್ ಗೆದ್ದು ಬೀಗಿದೆ.
ಈ ಪಂದ್ಯದ ಮುಕ್ತಾಯದ ಬಳಿಕ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಪ್ರತಿಕ್ರಿಯಿಸಿದ್ದಾರೆ. ಕೆಕೆಆರ್ ತಂಡದ ಗೆಲವುಇನ ಹೊರತಾಗಿಯೂ ತಂಡದ ಪ್ರಮುಖ ಆಟಗಾರನ ಬಗ್ಗೆ ಆಕಾಶ್ ಚೋಪ್ರ ಕಿಡಿ ಕಾರಿದ್ದಾರೆ. ಈ ಆಟಗಾರನಿಗೆ ಮುಂದಿನ ಪಂದ್ಯದಲ್ಲಿ ಆಡುವ ಅವಕಾಶವನ್ನು ನೀಡಬಾರದು ಎಂದಿದ್ದಾರೆ ಆಕಾಶ್ ಚೋಪ್ರ.
ಹಾಗಾದರೆ ಆಕಾಶ್ ಚೋಪ್ರ ಕಿಡಿ ಅಸಮಾಧಾನ ವ್ಯಕ್ತಪಡಿಸಿದ ಆ ಬಲಿಷ್ಠ ಆಟಗಾರ ಯಾರು? ಆಕಾಶ್ ಚೋಪ್ರ ಹೇಳಿದ್ದೇನು? ಮುಂದೆ ಓದಿ..

ಮಹತ್ವದ ಪಂದ್ಯದಲ್ಲಿ ಆರಂಭಿಕ ಆಟಗಾರ ವಿಫಲ
ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ 153 ರನ್‌ಗಳ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರಂಭಿಕ ಆಟಗಾರರ ವೈಫಲ್ಯದಿಂದಾಗಿ ಆಘಾತ ಅನುಭವಿಸಿತು. ಅದರಲ್ಲೂ ಅನುಭವಿ ಆಟಗಾರ ಆರೋನ್ ಫಿಂಚ್ ಈ ಪಂದ್ಯದಲ್ಲಿಯೂ ವೈಫಲ್ಯ ಅನುಭವಿಸಿದರು. 7 ಎಸೆತಗಳನ್ನು ಎದುರಿಸಿ ಈ ಪ್ರದರ್ಶನದಿಂದಾಗಿ ಮುಂದಿನ ಪಂದ್ಯದಲ್ಲಿ ಆರೋನ್ ಫಿಂಚ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಕಡಿಮೆಯಿದೆ ಎಂದಿದ್ದಾರೆ ಚೋಪ್ರ.

ಫಿಂಚ್ ಬ್ಯಾಟಿಂಗ್‌ನಲ್ಲಿದೆ ದೊಡ್ಡ ಸಮಸ್ಯೆ
"ರನ್ ಬೆನ್ನಟ್ಟುವ ಸಂದರ್ಭದಲ್ಲಿ ನಿಮ್ಮ ಗಮನ ಸಹಜವಾಗಿಯೇ ಆರೋನ್ ಫಿಂಚ್ ಕಡೆಗೆ ಸೆಳೆಯುತ್ತದೆ. ನಿಜಕ್ಕೂ ಆತನೋರ್ದ ಬಲಿಷ್ಠ ಆಟಗಾರ. ಆದರೆ ಆತನಲ್ಲಿ ದೊಡ್ಡ ಸಮಸ್ಯೆಯಿದೆ. ಒಳಗೆ ಬರುವ ಎಸೆತಗಳು ಆತನಿಗೆ ಹೆಚ್ಚು ಸಮಸ್ಯೆಯುಂಟು ಮಾಡುತ್ತದೆ. ಅದಕ್ಕೆ ಬಹಳ ಆತ ಪರದಾಡುವುದು ಸ್ಪಷ್ಟವಾಗುತ್ತದೆ. ಅದು ತಮಾಷೆಯ ಸಂಗತಿಯಲ್ಲ. ಹಾಗಾಗಿ ಆತ ಮುಂದಿನ ಪಂದ್ಯದಲ್ಲು ಆಡಲಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಒಂದು ಪಂದ್ಯದಲ್ಲಿ ಉತ್ತಮ ರನ್‌ಗಳಿಸಿದರು ಕೂಡ ಆತನ ಫಾರ್ಮ್ ಚೆನ್ನಾಗಿದೆ ಎಂದು ನನಗೆ ಅನಿಸುತ್ತಿಲ್ಲ" ಎಂದು ಆಕಾಶ್ ಚೋಪ್ರ ಪಂದ್ಯದ ಮುಕ್ತಾಯದ ಬಳಿಕ ಹೇಳಿಕೆ ನೀಡಿದ್ದಾರೆ.

ರಾಣಾ, ರಿಂಕು ಸಿಂಗ್ ಆಟಕ್ಕೆ ಚೋಪ್ರ ಮೆಚ್ಚುಗೆ
ಇನ್ನು ಸೋಮವಾರ ನಡೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಮಧ್ಯಮ ಕ್ರಮಾಂಕದ ಇಬ್ಬರು ಆಟಗಾರರಾದ ನಿತೀಶ್ ರಾಣಾ, ಹಾಗೂ ರಿಂಕು ಸಿಂಗ್. ಈ ಇಬ್ಬರು ಆಟಗಾರರ ಜವಾಬ್ಧಾರಿಯುತ ಬ್ಯಾಟಿಂಗ್‌ನ ಕಾರಣದಿಂದಾಗಿ ಸತತ ಸೋಲಿನ ಸರಪಳಿಯನ್ನು ತುಂಡರಿಸುವಲ್ಲಿ ಕೆಕೆಆರ್ ಯಶಸ್ವಿಯಾಗಿದೆ. ಈ ಬಗ್ಗೆಯೂ ಚೋಪ್ರ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಪ್ರತಿ ಗೆಲುವು ಕೆಕೆಆರ್‌ಗೆ ಮುಖ್ಯ
ಈ ಬಾರಿಯ ಟೂರ್ನಿಯ ಆರಂಭಿಕ ನಾಲ್ಕು ಪಂದ್ಯಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೇಲುಗೈ ಸಾಧಿಸಿದ್ದ ಕೆಕೆಆರ್ ನಂತರ ಸತತ ಸೋಲಿನ ಸುಳಿಗೆ ಸಿಲುಕಿತು. ನಿರಂತರ 5 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲು ಅನುಭವಿಸಿತು. ಹೀಗಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಈ ಗೆಲುವು ಕೆಕೆಆರ್ ತಂಡಕ್ಕೆ ಬಹಳ ಮಹತ್ವದ್ದಾಗಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂದಿನ ಹಂತಕ್ಕೇರಬೇಕಿದ್ದರೆ ಮುಂದಿನ ಪ್ರತಿ ಪಂದ್ಯಗಳು ಕೂಡ ಕೆಕೆಆರ್‌ಗೆ ಮುಖ್ಯವಾಗಿದೆ. ನಾಲ್ಕು ಪಂದ್ಯಗಳು ಮಾತ್ರವೇ ಕೆಕೆಆರ್‌ಗೆ ಬಾಕಿಯಿದ್ದು ಪ್ರತಿ ಪಂದ್ಯದಲ್ಲಿ ಕೂಡ ಗೆಲುವು ಸಾಧಿಸಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications