For Quick Alerts
ALLOW NOTIFICATIONS  
For Daily Alerts
 

ಆತ ಆಟಗಾರನಲ್ಲ, ಆತ ಒಂದು ಭಾವನೆ: ಎಂಎಸ್ ಧೋನಿ ಬಗ್ಗೆ ಆಕಾಶ್ ಚೋಪ್ರ ಮಾತು

IPL 2022: Aakash Chopra praises MS Dhoni said He Is Not A Player But A Sentiment

ಈ ಬಾರಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆರಂಭಿಕ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿದೆ. ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೇಲೆ ಈ ಬಾರಿಯ ಟೂರ್ನಿಯಲ್ಲಿ ಸಹಜವಾಗಿಯೇ ಹೆಚ್ಚಿನ ನಿರೀಕ್ಷೆಗಳಿದ್ದವು. ಆದರೆ ಆರಂಭಿಕ ಎರಡು ಪಂದ್ಯಗಳಲ್ಲಿ ಅನುಭವಿಸಿದ ಸೋಲು ತಂಡಕ್ಕೆ ಆಘಾತ ನೀಡಿದೆ. ಆದರೆ ಟೂರ್ನಿಯಲ್ಲಿ ಮತ್ತೆ ಪುಟಿದೇಳುವ ವಿಶ್ವಾಸದಲ್ಲಿದೆ ಸಿಎಸ್‌ಕೆ. ಈ ಮಧ್ಯೆ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದರೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಹುಮ್ಮಸ್ಸು ಕಡಿಮೆಯಾಗಿಲ್ಲ. ಅದಕ್ಕೆ ಕಾರಣ ಎಂಎಸ್ ಧೋನಿ ಫಾರ್ಮ್.

ಮೊದಲ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದ ಎಂಎಸ್ ಧೋನಿ ಎರಡನೇ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 16 ರನ್ ಗಳಿಸಿ ಮಿಂಚಿದ್ದರು. ಮಾಜಿ ನಾಯಕನ ಈ ಪ್ರದರ್ಶನಕ್ಕೆ ಅಭಿಮಾನಿಗಳು ಪುಳಕಿತರಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪ್ರದರ್ಶನದ ಅಭಿಮಾನಿಗಳು ಮಾತ್ರವಲ್ಲ ಮಾಜಿ ಆಟಗಾರರು ಹಾಗೂ ವಿಶ್ಲೇಷಕರು ಕೂಡ ಧೋನಿ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಅದರಲ್ಲೂ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಧೋನಿ ಬಗ್ಗೆ ವಿಶೇಷ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

IPL 2022: Aakash Chopra praises MS Dhoni said He Is Not A Player But A Sentiment

ಆಟಗಾರನಿಗಿಂತ ಹೆಚ್ಚಾಗಿ ಆತ ಒಂದು ಭಾವನೆ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ಆಕಾಶ್ ಚೋಪ್ರ "ಎಂಎಸ್ ಧೋನಿ ಆಟಗಾರನಿಗಿಂತ ಹೆಚ್ಚಾಗಿ ಆತ ಒಂದು ಭಾವನೆ. ಆತ ಯಾವಾಗಲೂ ಸಮಯಕ್ಕಿಂತ ವಿರುದ್ಧವಾಗಿ ಚಲಿಸುತ್ತಿರುತ್ತಾರೆ. ಕೆಲವೇ ಎಸೆತಗಳಲ್ಲಿಯೂ ಆತನ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು. ಏನೇ ಆದರೂ ಧೋನಿ ಅಂದರೆ ಅದು ಧೋನಿ ಮಾತ್ರ" ಎಂದು ಆಕಾಶ್ ಚೋಪ್ರ ಎಂಎಸ್ ಧೋನಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸಿಎಸ್‌ಕೆ ಇನ್ನಿಂಗ್ಸ್ ಬಗ್ಗೆ ಆಕಾಶ್ ಚೋಪ್ರ ಬಳಿ ಅಭಿಪ್ರಾಯ ಕೇಳಿದಾಗ ಭಾರತದ ಮಾಜಿ ಕ್ರಿಕೆಟಿಗ ಚೆನ್ನೈ ಆರಂಭಿಕ ಆಟಗಾರ ರಾಬಿನ್ ಉತ್ತಪ್ಪ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. "ಎಲ್‌ಎಸ್‌ಜಿ ತಂಡ ಆವೇಶ್ ಖಾನ್‌ಗೆ ಮೊದಲ ಓವರ್ ನೀಡಿದರೂ ರಾಬಿನ್ ಉತ್ತಪ್ಪ ಅದ್ಭುತವಾದ ಆರಂಭವನ್ನು ನೀಡಿದರು. ಎಂತಾ ಅದ್ಭೂತವಾದ ಹಿಟ್ಟರ್ ಅವರು. ರಾಬಿನ್ ಮೂಕವಿಸ್ಮಿತರಾಗುವಂತೆ ಆಡಿದರು" ಎಂದು ಆಕಾಶ್ ಚೋಪ್ರ ವಿವರಿಸಿದ್ದಾರೆ.

ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2022ರ ಏಳನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ನೀಡಿದ್ದ ಬೃಹತ್ ಟಾರ್ಗೆಟ್‌ ಅನ್ನು ಲಕ್ನೋ ಸೂಪರ್ ಜೈಂಟ್ಸ್‌ ಚೇಸ್ ಮಾಡುವ ಮೂಲಕ ಅಬ್ಬರಿಸಿತು. ಐಪಿಎಲ್ ಇತಿಹಾಸದಲ್ಲಿಯೇ ನಾಲ್ಕನೇ ಗರಿಷ್ಠ ರನ್‌ಗಳನ್ನ ಚೇಸ್ ಮಾಡಿದ ಲಕ್ನೋ 211 ರನ್‌ಗಳನ್ನ ಬೆನ್ನಟ್ಟಿ ಈ ಸೀಸನ್‌ನಲ್ಲಿ ಮೊದಲ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು. ಬೃಹತ್ ಮೊತ್ತ ಬೆನ್ನತ್ತಿದ ಕೆ.ಎಲ್ ರಾಹುಲ್ ನಾಯಕತ್ವದ ಲಕ್ನೋ ತಂಡವು ಅದ್ಭುತ ಆರಂಭ ಪಡೆಯವಲ್ಲಿ ಯಶಸ್ವಿಯಾಯಿತು. ಎದುರಾಳಿ ತಂಡದ ಕ್ಯಾಚ್ ಡ್ರಾಪ್ ಜೊತೆಗೆ ಅಬ್ಬರದ ಬ್ಯಾಟಿಂಗ್ ನಡೆಸಿದ ಕೆ.ಎಲ್ ರಾಹುಲ್ 26 ಎಸೆತಗಳಲ್ಲಿ 40 ರನ್ ಸಿಡಿಸಿದ್ರೆ, ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ 45 ಎಸೆತಗಳಲ್ಲಿ 61 ರನ್‌ ಸಿಡಿಸಿ ಮಿಂಚಿದ್ದಾರೆ.

ಇದರ ನಡುವೆ ಮನೀಶ್ ಪಾಂಡೆ ಕೇವಲ 5 ರನ್‌ಗಳಿಸಿ ತುಶಾರ್ ದೇಶಪಾಂಡೆಗೆ ವಿಕೆಟ್‌ ಒಪ್ಪಿಸಿದ್ರು . ದೀಪಕ್ ಹೂಡ ಆಟ 13ರನ್‌ಗೆ ಮುಕ್ತಾಯಗೊಂಡಿತು. ಆದ್ರೆ ಅಬ್ಬರದ ಬ್ಯಾಟಿಂಗ್ ನಡೆಸಿದ ಎವಿನ್ ಲೂಯಿಸ್ ಕೇವಲ 23 ಎಸೆತಗಳಲ್ಲಿ 50 ರನ್ ಸಿಡಿಸಿ ಮಿಂಚಿದ್ರು. ಅಜೇಯ 55 ರನ್ ಕಲೆಹಾಕಿದ ಎವಿನ್ ಲೂಯಿಸ್ ಆರು ಬೌಂಡರಿ ಮತ್ತು ಮೂರು ಭರ್ಜರಿ ಸಿಕ್ಸರ್ ಸಿಡಿಸಿದ್ರು.

Story first published: Friday, April 1, 2022, 17:21 [IST]
Other articles published on Apr 1, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+