IPL 2022: ಮುಂಬೈ ಇಂಡಿಯನ್ಸ್ ತಂಡದ ಬಲಿಷ್ಠ ಪ್ಲೇಯಿಂಗ್ XI ಆಯ್ಕೆ ಮಾಡಿದ ಆಕಾಶ್ ಚೋಪ್ರ!

ಐಪಿಎಲ್ 15ನೇ ಆವೃತ್ತಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಕೇವಲ ಒಂದು ದಿನ ಮಾತ್ರವೇ ಬಾಕಿಯಿದೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಚಾಂಪಿಯನ್ ಪಟ್ಟಕ್ಕೇರಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯೂ ಅದ್ಭುತ ಪ್ರದರ್ಶನ ನೀಡುವ ಗುರಿಯೊಂದಿಗೆ ಟೂರ್ನಿಗೆ ಸಜ್ಜಾಗುತ್ತಿದೆ. ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಅವರಂತಾ ಕೆಲ ಪ್ರಮುಖ ಆಟಗಾರರು ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಿಂದ ಬೇರ್ಪಟ್ಟಿದ್ದು ಹೊಸ ಆಟಗಾರರೊಂದಿಗೆ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಬಾರಿ ಮೆಗಾ ಹರಾಜಿನಲ್ಲಿ ಕೆಲ ಅದ್ಭುತ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿರುವ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭಾನುವಾರ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ್ ಬಲಿಷ್ಠ ಆಡುವ ಬಳಗದವನ್ನು ಹೆಸರಿಸಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಹೆಸರಿಸಿರುವ ಮುಂಬೈ ತಂಡದ ಬಲಿಷ್ಠ ಪ್ಲೇಯಿಂಗ್ XI ಹೇಗಿದೆ? ಮುಂದೆ ಓದಿ..

ಆಕಾಶ್ ಹೆಸರಿಸಿದ ಅಗ್ರ ಕ್ರಮಾಂಕ
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಆಕಾಶ್ ಚೋಪ್ರ ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಆಟಗಾರರನ್ನು ಹೆಸರಿಸಿದ್ದಾರೆ. ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರನ್ನು ನಿರೀಕ್ಷಿತವಾಗಿ ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿರುವ ಆಕಾಶ್ ಚೋಪ್ರ ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೆಸರಿಸಿದ್ದಾರೆ. "ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ತಂಡದ ಆರಂಭಿಕ ಆಟಗಾರರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕಣಕ್ಕಿಳಿಯಲಿದ್ದು ಮೊದಲ ಪಂದ್ಯದಲ್ಲಿ ಯಾದವ್ ಆಡುವುದು ಅನುಮಾನವಾಗಿರುವ ಕಾರಣ ಸಣ್ಣ ಬದಲಾವಣೆ ಮಾಡಿಕೊಳ್ಳುವ ಅಗತ್ಯ ಬರಬಹುದು" ಎಂದಿದ್ದಾರೆ ಆಕಾಶ್ ಚೋಪ್ರ.

ಮಧ್ಯಮ ಕ್ರಮಾಂಕದಲ್ಲಿನ ಕೊರತೆ ಹೇಳಿದ ಚೋಪ್ರ
ಇನ್ನು ಅಗ್ರ ಕ್ರಮಾಂಕದ ಬಳಿಕ ಮುಂದಿನ ಬ್ಯಾಟಿಂಗ್ ಕ್ರಮಾಂಕವನ್ನು ಆಕಾಶ್ ಚೋಪ್ರ ಆಯ್ಕೆ ಮಾಡಿದ್ದಾರೆ. ಆದರೆ ಈ ಬ್ಯಾಟರ್‌ಗಳಲ್ಲಿ ಒಂದು ಕೊರತೆಯನ್ನು ಕೂಡ ಚೋಪ್ರ ಬೊಟ್ಟು ಮಾಡಿದ್ದಾರೆ. ಅದು ಅರೆಕಾಲಿನ ಬೌಲಿಂಗ್ ಆಯ್ಕೆ. "ತಿಲಕ್ ವರ್ಮ ಬಹುಶಃ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಬಹುದು. ಕಿರಾನ್ ಪೊಲಾರ್ಡ್ 50ನೇ ಕ್ರಮಾಂಕ ಹಾಗೂ ಟಿಮ್ ಡೇವಿಡ್ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆದರೆ ಇಲ್ಲಿ ಹೆಚ್ಚಿನ ಬೌಲಿಂಗ್ ಆಯ್ಕೆಗಳು ಇಲ್ಲದಿರುವುದನ್ನು ನೀವು ಗಮನಿಸಬಹುದು. ಟಿಮ್ ಡೇವಿಡ್ ಹಾಗೂ ಕಿರಾನ್ ಪೊಲಾರ್ಡ್ ಬೌಲಿಂಗ್ ಮಾಡುತ್ತಾರಾದರೂ ಈ ಹಿಂದಿನ ಆವೃತ್ತಿಯಲ್ಲಿದ್ದಂತಾ ಗುಣಮಟ್ಟದ ಬೌಲಿಂಗ್ ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ಆವೃತ್ತಿಯಲ್ಲಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ 3 ಓವರ್‌ಗಳ ಬೌಲಿಂಗ್ ಮಾಡಬಲ್ಲ ಅತ್ಯುತ್ತಮ ಬೌಲರ್‌ಗಳೂ ಆಗಿದ್ದರು" ಎಂದಿದ್ದಾರೆ ಆಕಾಶ್ ಚೋಪ್ರ.

ಬೌಲಿಂಗ್ ವಿಭಾಗ
ಇನ್ನು ಬೌಲಿಂಗ್ ಆಲ್‌ರೌಂಡರ್‌ಗಳಾಗಿ ಡೇನಿಯಲ್ ಸ್ಯಾಮ್ಸ್, ಫ್ರಾಬಿಯನ್ ಅಲೆನ್ ಹಾಗೂ ಅರ್ಶದ್ ಖಾನ್ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಿದ್ದು ಅವರನ್ನು ಟಿಮ್ ಡೇವಿಡ್ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿಸಬೇಕು ಎಂದಿದ್ದಾರೆ ಚೋಪ್ರ. ನಂತರ "ಬೂಮ್ರಾ ಅವರನ್ನು ನೀವು ಆಯ್ಕೆ ಮಾಡಿಕೊಳ್ಳಲೇ ಬೇಕು, ಅದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಮುರುಗನ್ ಅಶ್ವಿನ್ ಬದಲಿಗೆ ಮಯಾಂಕ್ ಮಾರ್ಕಂಡೆ ಅವರನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಇನ್ನು ಉನಾದ್ಕಟ್ ಹಾಗೂ ಬಸಿಲ್ ತಂಪಿ ಮಧ್ಯೆ ಉನಾದ್ಕಟ್ ಅವರನ್ನು ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ನಂತರ ಟೈಮಲ್ ಮಿಲ್ಸ್ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದಿದ್ದಾರೆ ಆಕಾಶ್ ಚೋಪ್ರ.

ಚೋಪ್ರ ಆಯ್ಕೆ ಮಾಡಿರುವ ಮುಂಬೈ ಪ್ಲೇಯಿಂಗ್ XI
ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಎನ್ ತಿಲಕ್ ವರ್ಮಾ, ಕೀರಾನ್ ಪೊಲಾರ್ಡ್, ಟಿಮ್ ಡೇವಿಡ್, ಡೇನಿಯಲ್ ಸ್ಯಾಮ್ಸ್/ಫ್ಯಾಬಿಯನ್ ಅಲೆನ್/ಅರ್ಷದ್ ಖಾನ್, ಜಸ್ಪ್ರೀತ್ ಬೂಮ್ರಾ, ಮಯಾಂಕ್ ಮಾರ್ಕಂಡೆ, ಜಯದೇವ್ ಉನಾದ್ಕಟ್, ಟೈಮಲ್ ಮಿಲ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications