ಕೆಕೆಆರ್ ತಂಡ ಸೇರಿಕೊಂಡ ಆ್ಯರೋನ್ ಫಿಂಚ್: ಅಲೆಕ್ಸ್ ಹೇಲ್ಸ್ ಬದಲಿ ಆಯ್ಕೆ

ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಶುಕ್ರವಾರದಂದು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 15ನೇ ಸೀಸನ್‌ಗೆ ಆಸ್ಟ್ರೇಲಿಯಾದ ವೈಟ್-ಬಾಲ್ ಕ್ರಿಕೆಟ್ ನಾಯಕ ಆ್ಯರೋನ್ ಫಿಂಚ್ ಅನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿರುವುದಾಗಿ ಪ್ರಕಟಿಸಿದೆ.
ಬಯೋ ಬಬಲ್‌ನಿಂದ ಬೇಸತ್ತಿರುವ ಅಲೆಕ್ಸ್ ಹೇಲ್ಸ್ ಟೂರ್ನಮೆಂಟ್‌ನಿಂದ ಹಿಂದೆ ಸರಿಯುವ ಮನಸ್ಸು ಮಾಡಿದ್ದು, ಇಂಗ್ಲೆಂಡ್ ನ ಬ್ಯಾಟ್ಸ್‌ಮನ್ ಬದಲಿಗೆ ಆಸೀಸ್ ನಾಯಕ ಫಿಂಚ್‌ಗೆ ಅವಕಾಶ ನೀಡಲಾಗಿದೆ.
ಶಾರುಖ್ ಖಾನ್ ಒಡೆತನದ ಫ್ರಾಂಚೈಸಿ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಘೋಷಣೆ ಮಾಡಿದೆ.
ಏತನ್ಮಧ್ಯೆ, ಐಪಿಎಲ್ ಆಡಳಿತ ಮಂಡಳಿಯು ಆ್ಯರೋನ್ ಫಿಂಚ್ ಸಹಿ ಮಾಡುವ ಕುರಿತು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಅವರು 1.5 ಕೋಟಿ ರೂಪಾಯಿ ಬೆಲೆಯಲ್ಲಿ ಕೆಕೆಆರ್ ತಂಡವನ್ನ ಸೇರಲಿದ್ದಾರೆ.
ಕಳೆದ ವರ್ಷ ಯುಎಇಯಲ್ಲಿ ಆಸ್ಟ್ರೇಲಿಯಾವನ್ನ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗಾಗಿ ಮುನ್ನಡೆಸಿದ್ದ ಫಿಂಚ್, ಹಿಂದಿನ ಋತುವಿನಿಂದ ಹೊರಗುಳಿದ ನಂತರ ಐಪಿಎಲ್‌ಗೆ ಮರಳಿದ್ದಾರೆ. 2020 ರಲ್ಲಿ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅನ್ನು ಪ್ರತಿನಿಧಿಸಿದರು ಮತ್ತು ಅಬುಧಾಬಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು.
ಇಲ್ಲಿಯವರೆಗೆ, ಫಿಂಚ್ ಭಾರತೀಯ ಟಿ20 ಲೀಗ್‌ನಲ್ಲಿ 87 ಪಂದ್ಯಗಳನ್ನು ಆಡಿದ್ದಾರೆ, 25.38 ಸರಾಸರಿಯಲ್ಲಿ 2005 ರನ್ ಗಳಿಸಿದ್ದಾರೆ. ಅವರು 14 ಅರ್ಧ ಶತಕಗಳನ್ನು ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications