IPL 2022: ಟ್ವಿಟ್ಟರ್ ಮೂಲಕ ಐಪಿಎಲ್ ನಿವೃತ್ತಿ ಘೋಷಿಸಿದ ರಾಯುಡು; ಕೆಲವೇ ನಿಮಿಷಕ್ಕೆ ಟ್ವೀಟ್ ಮಾಯ!

ಪ್ರಸ್ತುತ ನಡೆಯುತ್ತಿರುವ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರತಿಭಾನ್ವಿತ ಆಟಗಾರ ಅಂಬಟಿ ರಾಯುಡು ಶನಿವಾರ ( ಮೇ 14 ) ತನ್ನ ಅಧಿಕೃತ ಟ್ವಿಟ್ಟರ್ ಖಾತೆಯ ಮೂಲಕ ನಿವೃತ್ತಿಯನ್ನು ಘೋಷಿಸಿದರು. ಹೌದು, ಇಂದು 12.46ರ ಸಮಯಕ್ಕೆ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದ್ದ ಅಂಬಾಟಿ ರಾಯುಡು ಇದೇ ತನ್ನ ಕೊನೆಯ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಎಂದು ಬರೆದುಕೊಂಡಿದ್ದರು.
ಟ್ವಿಟ್ಟರ್‌ನಲ್ಲಿ ಅವರು "ಇದು ನನ್ನ ವೃತ್ತಿ ಜೀವನದ ಅಂತಿಮ ಐಪಿಎಲ್ ಆವೃತ್ತಿ ಎಂದು ಹೇಳಲು ನಾನು ಸಂತೋಷಪಡುತ್ತಿದ್ದೇನೆ. ಇಲ್ಲಿ ನಾನು ಆಡುತ್ತಾ ಸದ್ಭುತವಾದ ಸಮಯವನ್ನು ಕಳೆದಿದ್ದೇನೆ. ಕಳೆದ 13 ವರ್ಷಗಳಲ್ಲಿ ನಾನು ಎರಡು ಶ್ರೇಷ್ಠ ತಂಡಗಳಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದೇನೆ. ನನ್ನ ಈ ಪ್ರಯಾಣವನ್ನು ಸುಂದರವಾಗಿಸಿದ್ದಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ನಾನು ತುಂಬು ಹೃದಯದಿಂದ ಧನ್ಯವಾದ ಹೇಳುತ್ತಿದ್ದೇನೆ" ಎಂದು ಹೇಳಿದ್ದರು.
ಹೀಗೆ ಅಂಬಾಟಿ ರಾಯುಡು ಅವರ ದಿಢೀರ್ ನಿವೃತ್ತಿಯ ಟ್ವೀಟ್ ಕಂಡ ಕ್ರಿಕೆಟ್ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದರು ಹಾಗೂ ಇಷ್ಟು ದಿನಗಳ ಕಾಲ ತಮ್ಮನ್ನು ಬ್ಯಾಟಿಂಗ್ ಪ್ರದರ್ಶನದ ಮೂಲಕ ಮನರಂಜಿಸಿದ ಆಟಗಾರನಿಗೆ ಕೃತಜ್ಞತೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು. ಸಾಮಾಜಿಕ ಜಾಲತಾಣಗಳ ಮೂಲಕ ಅಂಬಾಟಿ ರಾಯುಡು ಅವರ ಉತ್ತಮ ಇನ್ನಿಂಗ್ಸ್‌ಗಳ ಕುರಿತು ಕ್ರಿಕೆಟ್ ಅಭಿಮಾನಿಗಳು ಚರ್ಚಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕತೊಡಗಿದರು.
ಹೀಗಿರುವಾಗಲೇ ಅಂಬಾಟಿ ರಾಯುಡು ತಮ್ಮ ನಿವೃತ್ತಿ ಕುರಿತು ಮಾಡಿದ್ದ ಈ ಟ್ವೀಟ್ ಡಿಲೀಟ್ ಆಗಿದೆ. ಹೌದು, ಇಂಡಿಯನ್ ಪ್ರಿಮಿಯರ್ ಲೀಗ್ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಅಂಬಾಟಿ ರಾಯುಡು ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅಂಬಾಟಿ ರಾಯುಡು ಟ್ವೀಟ್ ಡಿಲೀಟ್ ಮಾಡಿರುವ ಸುದ್ದಿ ಇದೀಗ ಸಾಕಷ್ಟು ಕುತೂಹಲ ಹಾಗೂ ಚರ್ಚೆಗಳಿಗೆ ಕಾರಣವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅಂಬಾಟಿ ರಾಯುಡು ಟ್ವೀಟ್ ಡಿಲೀಟ್ ಆಗಲು ಕಾರಣ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಹೀಗೆ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿ ಮಾಡಿದ್ದ ಟ್ವೀಟ್ ಮಾಯವಾಗಲು ಅಸಲಿ ಕಾರಣವೇನು ಎಂಬ ಕುತೂಹಲ ಕೆರಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications