IPL 2022: ಚೆನ್ನೈ ವಯಸ್ಕರ ತಂಡ?; ಸಿಎಸ್‌ಕೆ ಸೇರಲು ನನಗಿನ್ನೂ ವಯಸ್ಸಾಗಿಲ್ಲ ಎಂದ ಖ್ಯಾತ ಕ್ರಿಕೆಟಿಗ!

ಸದ್ಯ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುತ್ತಿದ್ದು, ಈ ಬಾರಿಯ ಟೂರ್ನಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಯಾಕೋ ಆರಂಭದಲ್ಲಿಯೇ ತೀರಾ ದೊಡ್ಡ ಪೆಟ್ಟನ್ನು ಕೊಟ್ಟಿದೆ. ಹೌದು, ಇಷ್ಟು ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಯಾವುದೇ ಆವೃತ್ತಿಯಲ್ಲಿಯೂ ಪಡೆದುಕೊಳ್ಳದಷ್ಟು ಅತಿ ಕೆಟ್ಟ ಆರಂಭವನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಡೆದುಕೊಂಡಿದೆ.
ಟೂರ್ನಿಯಲ್ಲಿ ಆಡಿದ ಮೊದಲ 3 ಪಂದ್ಯಗಳಲ್ಲಿಯೂ ಸೋಲನ್ನು ಅನುಭವಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಇದೇ ಮೊದಲ ಬಾರಿಗೆ ಆಡಿದ ಮೊದಲ 3 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಹೀಗೆ ಹಿಂದೆಂದೂ ಕಂಡಿರದ ರೀತಿ ಸೋಲನ್ನು ಕಂಡು ಭಾರೀ ಟೀಕೆ ಹಾಗೂ ಚರ್ಚೆಗೆ ಒಳಗಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಕುರಿತಾಗಿ ಇದೀಗ ಭಾರತದ ಮಾಜಿ ಕ್ರಿಕೆಟಿಗನೋರ್ವ ಟೀಕೆಯನ್ನು ಮಾಡಿ ವ್ಯಂಗ್ಯವಾಡಿದ್ದಾರೆ.
ಹೌದು, ನಿಮಗೆಲ್ಲಾ ತಿಳಿದಿರುವ ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಆಟಗಾರರೆಲ್ಲಾ ಅತಿಯಾದ ವಯಸ್ಸಾದ ಕ್ರಿಕೆಟಿಗರು ಎಂಬ ಕಾರಣವನ್ನಿಟ್ಟುಕೊಂಡು ಸಾಕಷ್ಟು ಟ್ರೋಲ್ ಹಾಗೂ ಟೀಕೆಗಳನ್ನು ಮಾಡಲಾಗುತ್ತಿರುತ್ತದೆ. ವಯಸ್ಸಾದ ಕ್ರಿಕೆಟಿಗರೇ ತುಂಬಿರುವ ಈ ತಂಡ ವಯಸ್ಕರ ತಂಡ ಎಂದು ಹಲವಾರು ನೆಟ್ಟಿಗರು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರ ಕಾಲನ್ನು ಎಳೆದಿದ್ದರು. ಈ ಸಾಲಿಗೆ ಇದೀಗ ಭಾರತದ ಖ್ಯಾತ ಕ್ರಿಕೆಟಿಗನೋರ್ವ ಕೂಡ ಸೇರಿಕೊಂಡಿದ್ದು ಈ ಕೆಳಕಂಡಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಾಲೆಳೆದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ಮಿಶ್ರಾಗೆ ಮನವಿ
ಗುಜರಾತ್ ಟೈಟಾನ್ಸ್ ಕೋಚ್ ಆಶಿಷ್ ನೆಹ್ರಾ ಫೋಟೋವನ್ನು ಭಾರತದ ಮಾಜಿ ಕ್ರಿಕೆಟಿಗ ಅಮಿತ್ ಮಿಶ್ರಾ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಹೀಗೆ ಅಮಿತ್ ಮಿಶ್ರಾ ಹಂಚಿಕೊಂಡಿದ್ದ ಫೋಟೋಗೆ ನೆಟ್ಟಿಗನೋರ್ವ ರಿಪ್ಲೈ ಮಾಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಬನ್ನಿ ಎಂದು ಅಮಿತ್ ಮಿಶ್ರಾಗೆ ಟ್ವೀಟ್ ಮೂಲಕ ಮನವಿ ಮಾಡಿದ್ದರು.

ಈ ಕೋರಿಕೆಗೆ ವ್ಯಂಗ್ಯವಾಡಿದ ಅಮಿತ್ ಮಿಶ್ರಾ
ಅಭಿಮಾನಿಯೋರ್ವನ ಈ ಕೋರಿಕೆಗೆ ಪ್ರತಿಕ್ರಿಯಿಸಿದ 39 ವರ್ಷ ವಯಸ್ಸಿನ ಅಮಿತ್ ಮಿಶ್ರಾ ರಿ ಟ್ವೀಟ್ ಮೂಲಕ ಪ್ರತ್ಯುತ್ತರವನ್ನು ನೀಡಿದ್ದು, ಕ್ಷಮಿಸಿ ಗೆಳೆಯ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ನಾನಿನ್ನೂ 2 ವರ್ಷ ಚಿಕ್ಕವನು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅಮಿತ್ ಮಿಶ್ರಾ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ಹೆಚ್ಚಿನ ವಯಸ್ಸಾಗಿರಬೇಕು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ವಯಸ್ಸಾದವರು ಎಂದು ಪರೋಕ್ಷವಾಗಿ ಟ್ರೋಲ್ ಮಾಡಿದ್ದಾರೆ.

ಅಮಿತ್ ಮಿಶ್ರಾ ಟ್ರೋಲ್ ಕುರಿತು ವ್ಯಕ್ತವಾಯಿತು ಮಿಶ್ರ ಪ್ರತಿಕ್ರಿಯೆ
ಇನ್ನು ಅಮಿತ್ ಮಿಶ್ರಾ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧವಾಗಿ ಮಾಡಿರುವ ಈ ಟ್ವೀಟ್ ಕುರಿತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರೋಧಿಗಳು ರಿಪ್ಲೈ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಭಿಮಾನಿಗಳು ಅಮಿತ್ ಮಿಶ್ರಾ ಟ್ವೀಟ್ ವಿರುದ್ಧ ಕಿಡಿಕಾರುತ್ತಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರೋಧಿಗಳು ಅಮಿತ್ ಮಿಶ್ರಾ ಮಾಡಿರುವ ಈ ಟ್ವೀಟ್ ನಿಜ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಲು ವಯಸ್ಸಾಗಿರಬೇಕು ಎಂದು ಮತ್ತಷ್ಟು ಟ್ರೋಲ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications