For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜು: ಈ 5 ಸ್ಟಾರ್ ವಿಕೆಟ್ ಕೀಪರ್‌ಗಳಿಗೆ ಭಾರೀ ಬೇಡಿಕೆ ಖಚಿತ!

IPL 2022 Auction: Star wicket-keepers who could attract franchises to make big bids

ಐಪಿಎಲ್ ಮೆಗಾ ಹರಾಜಿನ ದಿನ ಮತ್ತಷ್ಟು ಹತ್ತಿರವಾಗುತ್ತಿದೆ. ಯಾವೆಲ್ಲಾ ಆಟಗಾರರು ಯಾವ ತಂಡಕ್ಕೆ ಸೇರಿಕೊಳ್ಳಲಿದ್ದಾರೆ ಎಂಬುದಕ್ಕೆ ಇನ್ನು ಕೆಲ ದಿನಗಳಲ್ಲಿಯೇ ಸ್ಪಷ್ಟ ಉತ್ತರ ದೊರೆಯಲಿದೆ. ಈ ವಾರಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜು ಈ ಎಲ್ಲಾ ಕುತೂಹಲಗಳಿಗೆ ಉತ್ತರವನ್ನು ನೀಡಲಿದೆ. ಇನ್ನು ಈ ಹರಾಜಿನಲ್ಲಿ ವಿಕೆಟ್‌ ಕೀಪರ್‌ಗಳು ಕೂಡ ಫ್ರಾಂಚೈಸಿಗಳ ಪ್ರಮುಖ ಗುರಿಯಾಗಿರಲಿದ್ದಾರೆ. ಟೂರ್ನಿಯ್ಲಲಿ ಭಾಗಿಯಾಗಲಿರುವ 10 ಫ್ರಾಂಚೈಸಿಗಳ ಪೈಕಿ ಆರು ಫ್ರಾಂಚೈಸಿಗಳು ಮೆಗಾ ಹರಾಜಿನಲ್ಲಿ ವಿಕೆಟ್‌ ಕೀಪರ್ ಮೇಲೆ ಕೂಡ ಕಣ್ಣಿಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್(ಎಂಎಸ್ ಧೋನಿ), ಡೆಲ್ಲಿ ಕ್ಯಾಪಿಟಲ್ಸ್(ರಿಷಭ್ ಪಂತ್) ರಾಜಸ್ಥಾನ್ ರಾಯಲ್ಸ್(ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್) ಹಾಗೂ ಲಕ್ನೋ ಸೂಪರ್‌ಜೈಂಟ್ಸ್(ಕೆಎಲ್ ರಾಹುಲ್) ಈ ತಂಡಗಳು ಈಗಾಗಲೇ ಮೊದಲ ಆಯ್ಕೆಯ ವಿಕೆಟ್ ಕೀಪರ್‌ಗಳನ್ನು ತಂಡದಲ್ಲಿ ಹೊಂದಿರುವುದರಿಂದಾಗಿ ಇತರ ಆರು ತಂಡಗಳು ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ಗಾಗಿ ಸಾಕಷ್ಟು ಪೈಪೋಟಿ ನಡೆಸಲಿದೆ.

ಹಾಗಾದರೆ ಮೆಗಾ ಹರಾಜಿನಲ್ಲಿ ಹೆಚ್ಚು ಪೈಪೋಟಿಗೆ ಒಳಗಾಗಲಿರುವ ವಿಕೆಟ್ ಕೀಪರ್ ಬ್ಯಾಟರ್‌ಗಳು ಯಾರ್ಯಾರು? ಈ ವರದಿಯಲ್ಲಿ ಆ ಬಗ್ಗೆ ಸಂಪೂರ್ಣ ಮಾಹಿತಿಯಿದೆ ಮುಂದೆ ಓದಿ..

ಕ್ವಿಂಟನ್ ಡಿ ಕಾಕ್(ದಕ್ಷಿಣ ಆಫ್ರಿಕಾ) ಮೂಲಬೆಲೆ 2 ಕೋಟಿ

ಕ್ವಿಂಟನ್ ಡಿ ಕಾಕ್(ದಕ್ಷಿಣ ಆಫ್ರಿಕಾ) ಮೂಲಬೆಲೆ 2 ಕೋಟಿ

ದಕ್ಷಿಣ ಆಪ್ರಿಕಾ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಸ್ಪೋಟಕ ಆರಂಭಿಕ ಆಟಗಾರನಾಗಿಯೂ ಸಮರ್ಥ ಆಟಗಾರನಾಗಿದ್ದಾರೆ. 2013ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಡಿ ಕಾಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದರು. 29ರ ಹರೆಯದ ಈ ಆಟಗಾರ ಐಪಿಎಲ್‌ನಲ್ಲಿ 77 ಪಂದ್ಯವನ್ನಾಡಿದ್ದು 1 ಶತಕ ಹಾಗೂ 16 ಅರ್ಧ ಶತಕದೊಂದಿಗೆ 2256 ರನ್‌ಗಳಿಸಿದ್ದಾರೆ. ಅಲ್ಲದೆ ವಿಕೆಟ್ ಹಿಂದೆ 67 ಬಲಿ ಪಡೆದಿದ್ದಾರೆ ಡಿಕಾಕ್. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಡಿ ಕಾಕ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಸಾಕಷ್ಟು ಬೇಡಿಕೆ ಪಡೆಯುವುದರಲ್ಲಿ ಅನುಮಾನವಿಲ್ಲ.

ಜಾನಿ ಬೈರ್‌ಸ್ಟೋವ್(ಇಂಗ್ಲೆಂಡ್) ಮೂಲಬೆಲೆ 1.50 ಕೋಟಿ

ಜಾನಿ ಬೈರ್‌ಸ್ಟೋವ್(ಇಂಗ್ಲೆಂಡ್) ಮೂಲಬೆಲೆ 1.50 ಕೋಟಿ

ಇಂಗ್ಲೆಂಡ್ ಮೂಲದ ವಿಕೆಟ್‌ಕೀಪರ್-ಬ್ಯಾಟರ್ ಬೈರ್‌ಸ್ಟೋವ್ ಕೂಡ ಬ್ಯಾಟಿಂಗ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿಯುವ ಆಟಗಾರ. ಕೀಪರ್ ಆಗಿ ಆಡುವುದರ ಹೊರತಾಗಿ, ಬೈರ್‌ಸ್ಟೋವ್ ಔಟ್‌ಫೀಲ್ಡ್‌ನಲ್ಲಿಯೂ ಸಮರ್ಥವಾಗಿ ಜವಾಬ್ಧಾರಿ ನಿರ್ವಹಿಸುತ್ತಾರೆ. ಬೈರ್‌ಸ್ಟೋವ್ ಐಪಿಎಲ್‌ನಲ್ಲಿ ಈವರೆಗೆ ಮೂರು ಸೀಸನ್‌ಗಳನ್ನು ಆಡಿದ್ದು ಮೂರು ವರ್ಷಗಳಲ್ಲಿಯೂ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದಾರೆ. ಒಟ್ಟು 28 ಪಂದ್ಯಗಳನ್ನು ಆಡಿರುವ ಬೈರ್‌ಸ್ಟೋವ್ 1038 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 7 ಅರ್ಧಶತಕಗಳು ಸೇರಿವೆ. ಜೊತೆಗೆ ಐಪಿಎಲ್‌ನಲ್ಲಿ ಕಡಿಮೆ ಅವಧಿಯಲ್ಲಿಯೇ ಬೈರ್‌ಸ್ಟೋವ್ 18 ಕ್ಯಾಚ್‌ಗಳನ್ನು ಮತ್ತು 4 ಸ್ಟಂಪಿಂಗ್‌ಗಳನ್ನು ಕೂಡ ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಫ್ರಾಂಚೈಸಿಗಳು ಬೈರ್‌ಸ್ಟೋವ್ ಮೇಲೆ ಚಿತ್ತ ನೆಟ್ಟಿವೆ.

ಇಶಾನ್ ಕಿಶನ್ (ಭಾರತ) ಮೂಲಬೆಲೆ 2 ಕೋಟಿ

ಇಶಾನ್ ಕಿಶನ್ (ಭಾರತ) ಮೂಲಬೆಲೆ 2 ಕೋಟಿ

ಭಾರತ ತಂಡದ ಯುವ ಆಟಗಾರ ಇಶಾನ್ ಕಿಶನ್ ಕೂಡ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಹುತೇಕ ತಂಡಗಳ ಗಮನಸೆಳೆಯಬಲ್ಲ ಆಟಗಾರ. ಸ್ಪೋಟಕ ಆರಂಭಿಕ ಆಟಗಾರನಾಗಿಯೂ ಇಶಾನ್ ಕಿಶನ್ ತಂಡಕ್ಕೆ ಶಕ್ತಿ ನೀಡಬಲ್ಲ ಸಾಮರ್ಥ್ಯಹೊಂದಿದ್ದಾರೆ. ಅಲ್ಲದೆ ಮಧ್ಯಮ ಕ್ರಮಾಂಕದಲ್ಲಿಯೂ ಇಶಾನ್ ಕಿಶನ್ ಸಮರ್ಥವಾಗಿ ಬ್ಯಾಟ್ ಬೀಸಬಲ್ಲವರಾಗಿದ್ದಾರೆ. ಇನ್ನು ವಿಕೆಟ್ ಕೀಪರ ಮಾತ್ರವಲ್ಲದೆ ಫಿಲ್ಡರ್ ಆಗಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡಬಲ್ಲವರಾಗಿದ್ದಾರೆ. 2016ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿರುವ ಇಶಾನ್ ಕಿಶನ್ ಬಳಿಕ ಪ್ರತು ಆವೃತ್ತಿಯಲ್ಲಿಯೂ ತಮ್ಮ ಸಮರ್ಥ್ಯವನ್ನು ತೋರ್ಪಡಿಸುತ್ತಲೇ ಬಂದಿದ್ದಾರೆ. ಈಗ ಭಾರತೀಯ ತಂಡದ ಸೀಮಿತ ಓವರ್‌ಗಳ ಸದಸ್ಯ ಕೂಡ ಆಗಿದ್ದಾರೆ ಇಶಾನ್ ಕಿಶನ್. ಇದುವರೆಗೆ 61 ಐಪಿಎಲ್ ಪಂದ್ಯಗಳಲ್ಲಿ ಆಡಿರುವ ಇಶಾನ್ ಕಿಶನ್ 9 ಅರ್ಧಶತಕ ಸೇರಿದಂತೆ 1452 ರನ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಆಗಿ 19 ಕ್ಯಾಚ್‌ ಪಡೆದಿದ್ದು 2 ಸ್ಟಂಪ್ ಔಟ್ ಮಾಡಿದ್ದಾರೆ. ಭಾರತೀಯ ಆಟಗಾರನಾಗಿ, ಅವರು ಖಂಡಿತವಾಗಿಯೂ ಹೆಚ್ಚಿನ ಫ್ರಾಂಚೈಸಿಗಳಿಗೆ ನಂಬರ್ ಒನ್ ಆಯ್ಕೆಯಾಗಲಿದ್ದಾರೆ ಮತ್ತು ದೊಡ್ಡ ಖರೀದಿಗಳಲ್ಲಿ ಒಬ್ಬರು ಎಂದು ಖಚಿತವಾಗಿದೆ.

ದಿನೇಶ್ ಕಾರ್ತಿಕ್(ಭಾರತ) ಮೂಲಬೆಲೆ 2 ಕೋಟಿ

ದಿನೇಶ್ ಕಾರ್ತಿಕ್(ಭಾರತ) ಮೂಲಬೆಲೆ 2 ಕೋಟಿ

ಅನುಭವಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ವಿಕೆಟ್ ಹಿಂದೆ ಮಿಂಚಿನ ವೇಗದಲ್ಲಿ ಕೈ ಚಳಕ ತೋರಿಸಬಲ್ಲ ಆಟಗಾರನಾಗಿದ್ದಾರೆ. ಅಲ್ಲದೆ ಅಂದ್ಯದ ಅಂತ್ಯದ ವೇಳೆಗೆ ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಕೂಡ ದಿನೇಶ್ ಕಾರ್ತಿಕ್‌ಗೆ ಇದೆ. ಇನ್ನು ನಾಯಲನಾಗಿ ಕೂಡ ತಂಡವನ್ನು ಮುನ್ನಡೆಸಿರುವ ಅನುಭವ ಕಾರ್ತಿಕ್‌ಗೆ ಇರುವುದರಿಂದ ಕೆಲ ತಂಡಗಳು ನಾಯಕನ ಹುಡುಕಾಟದಲ್ಲಿಯೂ ಇದ್ದು ಆ ತಮಡಗಳಿಗೆ ನಾಯಕತ್ವಕ್ಕೂ ಡಿಕೆ ಆಯ್ಕೆಯಾಗಬಲ್ಲರು.
2008ರ ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿಯೇ ಟೂರ್ನಿಗೆ ಪದಾರ್ಪಣೆ ಮಾಡಿರುವ ದಿನೇಶ್ ಕಾರ್ತಿಕ್ ಈವರೆಗೆ 213 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 19 ಅರ್ಧಶತಕಗಳ ಬಾರಿಸಿರುವ ಅವರು 4046 ರನ್ ಗಳಿಸಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 123 ಕ್ಯಾಚ್‌ಗಳನ್ನು ಪಡೆದಿದ್ದರೆ ಮತ್ತು 32 ಸ್ಟಂಪಿಂಗ್ ಮಾಡಿದ್ದಾರೆ. 36ರ ಹರೆಯದ ದಿನೇಶ್ ಕಾರ್ತಿಕ್ ಈವರೆಗೆ ಡೆಲ್ಲಿ ಕ್ಯಾಪಿಟಲ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಲಯನ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

Rohit Sharma ಅವರ ಹೊಸ ಪ್ರಯೋಗ ವರ್ಕೌಟ್ ಆಗುತ್ತಾ? | Oneindia Kannada
ನಿಕೋಲಸ್ ಪೂರನ್(ವೆಸ್ಟ್ ಇಂಡೀಸ್) ಮೂಲಬೆಲೆ 1.50 ಕೋಟಿ

ನಿಕೋಲಸ್ ಪೂರನ್(ವೆಸ್ಟ್ ಇಂಡೀಸ್) ಮೂಲಬೆಲೆ 1.50 ಕೋಟಿ

ವೆಸ್ಟ್ ಇಂಡೀಸ್ ಮೂಲದ ಪ್ರತಿಭಾವಂತ ಆಟಗಾರ ನಿಕೋಲನ್ ಪೂರನ್ ಟಿ20 ಕ್ರಿಕೆಟ್ ಮಾದರಿಗೆ ಹೇಳಿ ಮಾಡಿಸಿದ ಆಟಗಾರ. ತನ್ನ ಬಿಗ್ ಹಿಟ್ಟಿಂಗ್ ಸಾಮರ್ಥ್ಯ ಹಾಘೂ ವಿಕೆಟ್‌ನ ಹಿಂದಿನ ಚುರುಕುತನದ ಕಾರಣಕ್ಕೆ ಸಾಕಷ್ಟು ಬೇಡಿಕೆಯನ್ನು ಹೊಂದಿರುವುದರಲ್ಲಿ ಅನುಮಾನವಿಲ್ಲ. ಕಳೆದ ಮೂರು ವರ್ಷಗಳಿಂದ ಐಪಿಎಲ್‌ನಲ್ಲಿ ಪೂರನ್ ಆಡುತ್ತಿದ್ದಾರೆ. ಆದರೆ ಐಪಿಎಲ್‌ನಲ್ಲಿ ಪೂರನ್ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನಿಡಲು ವಿಫಲವಾಗಿದ್ದಾರೆ. ಅದರಲ್ಲೂ ಕಳೆದ ಆವೃತ್ತಿಯಲ್ಲಿ ಪೂರನ್ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಹಾಗಿದ್ದರೂ ಪೂರನ್ ಸಾಮರ್ಥ್ಯದ ಬಗ್ಗೆ ಫ್ರಾಂಚೈಸಿಗಳಿಗೆ ಯಾವುದೇ ಅನುಮಾನಗಳಿಲ್ಲ. ಹೀಗಾಗಿ ಈ ಬಾರಿಯ ಟೂರ್ನಿಯ ಆರಂಭಕ್ಕೂ ಮುನ್ನ ನಡೆಯಲಿರುವ ಹರಾಜಿನಲ್ಲಿ ನಿಕೋಲಸ್ ಪೂರನ್ ಕೂಡ ಸಾಕಷ್ಟು ಬೇಡಿಕೆಯನ್ನು ಹೊಂದುವುದರಲ್ಲಿ ಅನುಮಾನವಿಲ್ಲ.

Story first published: Tuesday, February 8, 2022, 15:43 [IST]
Other articles published on Feb 8, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+