IPL 2022 Awards Full List : ಆರೆಂಜ್, ಪರ್ಪಲ್ ಕ್ಯಾಪ್, ಫೇರ್‌ಪ್ಲೇ ಅವಾರ್ಡ್ ಯಾರ ಪಾಲು? ಗೆದ್ದವರಿಗೆ ಸಿಕ್ಕ ಹಣವೆಷ್ಟು?

ಕಳೆದ ಮಾರ್ಚ್ ತಿಂಗಳ ಅಂತಿಮ ವಾರದಲ್ಲಿ ಆರಂಭವಾಗಿದ್ದ ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ನಿನ್ನೆ ( ಮೇ 29 ) ನಡೆದ ಗುಜರಾತ್ ಟೈಟನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಫೈನಲ್ ಪಂದ್ಯದ ಮೂಲಕ ತೆರೆಬಿದ್ದಿದೆ. ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗುಜರಾತ್ ಟೈಟನ್ಸ್ 7 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿ ತಾನು ಪದಾರ್ಪಣೆ ಮಾಡಿದ ಐಪಿಎಲ್ ಆವೃತ್ತಿಯಲ್ಲಿಯೇ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿ ಎದುರಾಳಿಗೆ ಸಾಧಾರಣ ಗುರಿಯನ್ನು ನೀಡಿತು.
ಅತ್ತ ಬಲಿಷ್ಠ ಗುಜರಾತ್ ಟೈಟನ್ಸ್ ರಾಜಸ್ಥಾನ್ ರಾಯಲ್ಸ್ ತಂಡ ನೀಡಿದ ಈ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 133 ರನ್ ಕಲೆಹಾಕಿ ಜಯಭೇರಿ ಬಾರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ ತಂಡದ ಜೋಸ್ ಬಟ್ಲರ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೀಗೆ ಫೈನಲ್ ಪಂದ್ಯ ಮುಕ್ತಾಯವಾದ ನಂತರ ಟೂರ್ನಿಯ ವಿವಿಧ ಬಹುಮಾನಗಳನ್ನು ಯಾವ ಆಟಗಾರ ಮತ್ತು ತಂಡಗಳು ಮುಡಿಗೇರಿಸಿಕೊಂಡಿವೆ ಹಾಗೂ ಎಷ್ಟು ಹಣವನ್ನು ಸಂಪಾದಿಸಿದ್ದಾರೆ ಎಂಬುದರ ಕುರಿತಾದ ವಿವರ ಕೆಳಕಂಡಂತಿದೆ ಓದಿ..

ಚಾಂಪಿಯನ್ ಮತ್ತು ರನ್ನರ್ ಅಪ್ ತಂಡಗಳಿಗೆ ಸಿಕ್ಕ ಹಣ
ಚಾಂಪಿಯನ್ಸ್: ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿರುವ ಗುಜರಾತ್ ಟೈಟನ್ಸ್ ಐಪಿಎಲ್ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವುದರ ಜತೆಗೆ 20 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿದೆ.
ರನ್ನರ್ ಅಪ್: ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಆಗಿ ಹೊರಹೊಮ್ಮಿದ ರಾಜಸ್ಥಾನ್ ರಾಯಲ್ಸ್ ತಂಡ 12.5 ಕೋಟಿ ಪಡೆದುಕೊಂಡಿದೆ.
ರಾಯಲ್ ಚಾಲೆಂಜರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳಿಗೂ ನಗದು ಬಹುಮಾನ: ಇನ್ನು ಟೂರ್ನಿಯಲ್ಲಿ ಮೂರನೇ ತಂಡವಾಗಿ ಹೊರಹೊಮ್ಮಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ 6.5 ಕೋಟಿ ರೂಪಾಯಿಗಳನ್ನು ಪಡೆದುಕೊಂಡಿವೆ.

ಉಳಿದ ಪ್ರಶಸ್ತಿಗಳ ಪಟ್ಟಿ
ಐಪಿಎಲ್ 2022ರ ಉದಯೋನ್ಮುಖ ಆಟಗಾರ - ಉಮ್ರಾನ್ ಮಲಿಕ್ - 10 ಲಕ್ಷ
ಅನ್ ಅಕಾಡೆಮಿ ಲೆಟ್ಸ್ ಕ್ರ್ಯಾಕ್ ಇಟ್ ಸಿಕ್ಸ್ ಅವಾರ್ಡ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಪಂಚ್ ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್ - ದಿನೇಶ್ ಕಾರ್ತಿಕ್ (SR - 183.33) - ಟಾಟಾ ಪಂಚ್ ಕಾರ್
ಡ್ರೀಮ್ 11 ಗೇಮ್ ಚೇಂಜರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಪೇ ಟಿಎಮ್ ಫೇರ್‌ಪ್ಲೇ ಪ್ರಶಸ್ತಿ - ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್
ಕ್ರೆಡ್ ಪವರ್ ಪ್ಲೇಯರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಫಾಸ್ಟೆಸ್ಟ್ ಡಿಲವರಿ ಆಫ್ ದ ಸೀಸನ್ - ಲಾಕಿ ಫರ್ಗುಸನ್ (157.3 KMPH) - 10 ಲಕ್ಷ
ರುಪೇ ಆನ್ ದಿ ಗೋ 4s ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ
ಅರಾಮ್ಕೊ ಪರ್ಪಲ್ ಕ್ಯಾಪ್ ವಿನ್ನರ್ ಆಫ್ ದಿ ಸೀಸನ್ - ಯುಜ್ವೇಂದ್ರ ಚಾಹಲ್ - 10 ಲಕ್ಷ
ಅರಾಮ್ಕೊ ಆರೆಂಜ್ ಕ್ಯಾಪ್ ವಿನ್ನರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ ಟಾಟಾ - 10 ಲಕ್ಷ
ಕ್ಯಾಚ್ ಆಫ್ ದಿ ಸೀಸನ್ - ಎವಿನ್ ಲೆವಿಸ್ - 10 ಲಕ್ಷ
ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಆಫ್ ದಿ ಸೀಸನ್ - ಜೋಸ್ ಬಟ್ಲರ್ - 10 ಲಕ್ಷ

ಅತಿ ಹೆಚ್ಚು ಪ್ರಶಸ್ತಿ ಪಡೆದ ಆಟಗಾರ ಬಟ್ಲರ್
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ 17 ಪಂದ್ಯಗಳಲ್ಲಿ ಕಣಕ್ಕಿಳಿದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರ ಜೋಸ್ ಬಟ್ಲರ್ 863 ರನ್ ಚಚ್ಚಿ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡು ಆರೆಂಜ್ ಕ್ಯಾಪ್ ವಿಜೇತರಾದರು. ಹೀಗೆ ಟೂರ್ನಿಯಲ್ಲಿ ಅಬ್ಬರಿಸಿರುವ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್ ಪಡೆದುಕೊಳ್ಳುವುದರ ಜತೆಗೆ ಸರಣಿ ಶ್ರೇಷ್ಠ ಹಾಗೂ ಇನ್ನುಳಿದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ಪ್ರಶಸ್ತಿ ಗೆದ್ದ ಆಟಗಾರ ಎನಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications