DC vs LSG: ವಿನ್ನಿಂಗ್ ಸಿಕ್ಸರ್ ಬಾರಿಸಿ ಕೊಹ್ಲಿ ಸ್ಟೈಲ್ ಕಾಪಿ ಮಾಡಿದ ಆಯುಷ್ ಬದೋನಿ; ವಿಡಿಯೋ ವೈರಲ್

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 15ನೇ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ನೂತನ ತಂಡ ಲಕ್ನೋ ಸೂಪರ್ ಜೈಂಟ್ಸ್ ನಡುವೆ ಏಪ್ರಿಲ್ 7ರ ಶುಕ್ರವಾರದಂದು ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 6 ವಿಕೆಟ್‌ಗಳ ಭರ್ಜರಿ ಜಯವನ್ನು ಸಾಧಿಸಿ ಸತತ ಮೂರನೇ ಗೆಲುವನ್ನು ದಾಖಲಿಸಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 4 ಪಂದ್ಯಗಳನ್ನಾಡಿರುವ ಲಕ್ನೋ ಸೂಪರ್ ಜೈಂಟ್ಸ್ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿ ನಂತರ ನಡೆದ 3 ಪಂದ್ಯಗಳಲ್ಲಿ ಸತತವಾಗಿ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಹೀಗೆ ಮೊದಲು ಬ್ಯಾಟಿಂಗ್ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 150 ರನ್‌ಗಳ ಸಾಮಾನ್ಯ ಗುರಿಯನ್ನು ನೀಡಿತು. ಲಕ್ನೋ ಸೂಪರ್ ಜೈಂಟ್ಸ್ ನೀಡಿದ ಈ ಗುರಿಯನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ಅಂತಿಮ ಓವರ್‌ನಲ್ಲಿ ಜಯದ ನಗೆ ಬೀರಿತು. ತಂಡದ ಪರ ಆರಂಭದಲ್ಲಿ ಕ್ವಿಂಟನ್ ಡಿ ಕಾಕ್ ಅಬ್ಬರಿಸಿದರೆ ನಂತರ ತಂಡದ ರನ್ ಗಳಿಕೆ ನಿಧಾನಗತಿಯಲ್ಲಿ ಸಾಗಿತ್ತು. ಅಂತಿಮವಾಗಿ ಕೊನೆಯ 5 ಎಸೆತಗಳಲ್ಲಿ ಗೆಲ್ಲಲು 5 ರನ್ ಅಗತ್ಯವಿದ್ದಾಗ ಕಣಕ್ಕಿಳಿದ ಆಯುಷ್ ಬದೋನಿ ಹಿಂದಿನ ಎಸೆತದಲ್ಲಿ ಅಕ್ಷರ್ ಪಟೇಲ್ ವಿಕೆಟ್ ಪಡೆದಿದ್ದ ಶಾರ್ದೂಲ್ ಠಾಕೂರ್ ಎಸೆದ ಅಂತಿಮ ಓವರ್‌ನ ಎರಡನೇ ಎಸೆತಕ್ಕೆ ಯಾವುದೇ ರನ್ ಬಾರಿಸಲಿಲ್ಲ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ಗೆ ಗೆಲ್ಲಲು 4 ಎಸೆತಗಳಿಗೆ 5 ರನ್ ಬಾರಿಸಬೇಕಿತ್ತು. ಇನ್ನು ನಂತರದ ಎಸೆತದಲ್ಲಿ ಚೆಂಡನ್ನು ಬೌಂಡರಿಗೆ ಅಟ್ಟಿದ ಆಯುಷ್ ಬದೋನಿ 3 ಎಸೆತಗಳಿಗೆ 1 ರನ್ ಬೇಕಿದ್ದಾಗ ಅಬ್ಬರದ ಸಿಕ್ಸರ್ ಬಾರಿಸಿ ವಿನ್ನಿಂಗ್ ಹೊಡೆತ ಬಾರಿಸಿದರು. ಹೀಗೆ ಅಂತಿಮವಾಗಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ಮಿಂಚಿದ ಆಯುಷ್ ಬದೋನಿ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಶೈಲಿಯ ಸಂಭ್ರಮಾಚರಣೆ ಮಾಡಿದ್ದು, ಈ ವಿಡಿಯೋ ವೈರಲ್ ಕೂಡ ಆಗಿದೆ. ಈ ವಿಡಿಯೋ ಮುಂದೆ ಇದೆ ನೋಡಿ.

ಕೊಹ್ಲಿ ಸ್ಟೈಲ್ ಕಾಪಿ ಮಾಡಿದ ಬದೋನಿ
ಮೊದಲೇ ಹೇಳಿದಂತೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿನ್ನಿಂಗ್ ಹೊಡೆತ ಬಾರಿಸಿದ ಆಯುಷ್ ಬದೋನಿ ವಿರಾಟ್ ಕೊಹ್ಲಿಯ ವಿಶೇಷ ಸಂಭ್ರಮಾಚರಣೆಯ ಶೈಲಿಯನ್ನು ನಕಲಿಸಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ತಮ್ಮ ಜೆರ್ಸಿ ಹಿಂದಿನ ತಮ್ಮ ಹೆಸರಿನ ಕಡೆ ಕೈ ತೋರಿಸಿ ಸಂಭ್ರಮಿಸಿದ್ದರು. ಅದೇ ರೀತಿ ಈಗ ಆಯುಷ್ ಬದೋನಿ ಕೂಡ ಸಂಭ್ರಮಿಸಿದ್ದು, ವಿನ್ನಿಂಗ್ ಹೊಡೆತ ಬಾರಿಸಿದ ನಂತರ ಜೆರ್ಸಿ ಹಿಂದಿನ ತಮ್ಮ ಹೆಸರನ್ನು ತೋರಿಸಿ ಸಂಭ್ರಮಿಸಿದ್ದಾರೆ.

ಬದೋನಿ ಐಪಿಎಲ್ ಅಂಕಿಅಂಶ
ಬದೋನಿ ಐಪಿಎಲ್ ಅಂಕಿಅಂಶದೋನಿ ಮೂಲತಃ ದೆಹಲಿ ಕ್ರಿಕೆಟಿಗ, 22 ವರ್ಷದ ಈ ಆಟಗಾರ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಆಫ್‌ಬ್ರೇಕ್ ಸ್ಪಿನ್ನರ್. ಭಾರತ ಅಂಡರ್ 19 ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ಆಡಿರುವ ಈ ಪ್ರತಿಭೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದೆಹಲಿ ತಂಡದ ಪರ 5 ಟಿ ಟ್ವೆಂಟಿ ಪಂದ್ಯಗಳನ್ನಾಡಿದ ಅನುಭವವಿದೆ. ಇನ್ನು ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಶ್ರೀಲಂಕಾ ಅಂಡರ್ 19 ತಂಡದ ವಿರುದ್ಧದ ಪಂದ್ಯದಲ್ಲಿ ಭಾರತ ಅಂಡರ್ 19 ತಂಡದ ಪರ ಕಣಕ್ಕಿಳಿದು 28 ಎಸೆತಗಳಿಗೆ ಅಜೇಯ 52 ರನ್ ಬಾರಿಸಿದ್ದ ಆಯುಷ್ ಬದೋನಿ ಹೆಚ್ಚಿನ ಪಂದ್ಯಗಳನ್ನಾಡಿರುವ ಅನುಭವವನ್ನು ಹೊಂದಿಲ್ಲ.

3 ವರ್ಷಗಳಿಂದ ಅವಕಾಶ ಸಿಗದೇ ಹಿನ್ನಡೆ ಅನುಭವಿಸಿದ್ದ ಬದೋನಿ
ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದು ಅಬ್ಬರಿಸುತ್ತಿರುವ ಬದೋನಿ ಕಳೆದ ಮೂರು ಐಪಿಎಲ್ ಹರಾಜಿನಲ್ಲಿ ಅವಕಾಶ ಸಿಗದೇ ಹಿನ್ನಡೆಯನ್ನು ಅನುಭವಿಸಿದ್ದರು. ಹೀಗೆ ಅವಕಾಶ ಸಿಗದೇ ಇದ್ದ ತನಗೆ ಅವಕಾಶ ಕೊಟ್ಟ ಲಕ್ನೋ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದರು ಆಯುಷ್ ಬದೋನಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications