Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭಿಮಾನಿಗಳಿಗೆ ಭಾರೀ ನಿರಾಸೆ: ಐಪಿಎಲ್ ಪಂದ್ಯ ವೀಕ್ಷಿಸಲು ಶೇ.25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ

IPL 2022

ಐಪಿಎಲ್ 15ನೇ ಸೀಸನ್‌ ವೇಳಾಪಟ್ಟಿಯನ್ನ ಈಗಾಗಲೇ ಬಿಸಿಸಿಐ ಬಿಡುಗಡೆಗೊಳಿಸಿದ್ದು, ಪ್ರೇಕ್ಷಕರು ತಮ್ಮ ನೆಚ್ಚಿನ ತಂಡದ ಪಂದ್ಯ ವೀಕ್ಷಿಸಲು ಎದುರು ನೋಡುತ್ತಿದ್ದಾರೆ. ಆದ್ರೆ ಅಭಿಮಾನಿಗಳಿಗೆ ನಿರಾಸೆ ಮೂಡಿಸುವಂತಹ ಸುದ್ದಿಯನ್ನ ಬಿಸಿಸಿಐ ಪ್ರಕಟಿಸಿದೆ.

ಈ ಬಾರಿ ಮೈದಾನದಲ್ಲೇ ಹೋಗಿ ಪಂದ್ಯ ವೀಕ್ಷಿಸಲು ಕಷ್ಟಸಾಧ್ಯವಾಗಿದೆ. ಏಕೆಂದರೆ ಕೋವಿಡ್-19 ಕಾರಣದಿಂದಾಗಿ ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸಲು ಅವಕಾಶ ನೀಡುವುದಾಗಿ ಬುಧವಾರ ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್ 2022 ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿದ್ದು ಶೇಕಡಾ 25ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡುವುದಾಗಿ ಪ್ರಕಟಿಸಿದೆ. ವಾಂಖೆಡೆ ಸ್ಟೇಡಿಯಂ, ಮತ್ತು ಡಿವೈ ಪಾಟೀ್‌ ಸ್ಟೇಡಿಯಂನಲ್ಲಿ ತಲಾ 20 ಪಂದ್ಯಗಳು ನಡೆಯಲಿದ್ದು, ಪುಣೆಯ ಎಂಸಿಎ ಹಾಗೂ ಬ್ರಬೋನ್ ಸ್ಟೇಡಿಯಂನಲ್ಲಿ ತಲಾ 15 ಪಂದ್ಯ ನಡೆಯಲಿದೆ.

ಮಹಾರಾಷ್ಟ್ರದಲ್ಲಷ್ಟೇ ಟೂರ್ನಿ ನಡೆಸಲಾಗುತ್ತಿರುವುದರಿಂದ ಬೇರೆ ರಾಜ್ಯದ ಪ್ರೇಕ್ಷಕರು ಸ್ಟೇಡಿಯಂಗೆ ತೆರಳಿ ಪಂದ್ಯ ವೀಕ್ಷಿಸುವುದು ಕನಸಿನ ಮಾತಾಗಿದೆ. ಆದ್ರೆ ಲೀಗ್‌ ಪಂದ್ಯಗಳನ್ನ ನೋಡಲು ಆನ್‌ಲೈನ್‌ನಲ್ಲಿ ಪ್ರತಿ ಬಾರಿಯಂತೆ ಟಿಕೆಟ್ ಖರೀದಿಸಲು ಸಾಧ್ಯವಿದೆ.

ಆನ್‌ಲೈನ್‌ನಲ್ಲಿ ಖರೀದಿ ಹೇಗೆ? ಎಷ್ಟು ರೂಪಾಯಿ?
ಐಪಿಎಲ್‌ ಟಿಕೆಟ್ ದರಗಳು 400 ರೂಪಾಯಿನಿಂದ ಪ್ರಾರಂಭಗೊಳ್ಳುತ್ತದೆ. ಸ್ಟೇಡಿಯಂನ ವಿವಿಧ ಮೂಲೆಗಳಿಗೆ ಸಂಬಂಧಪಟ್ಟಂತೆ ದರ ನಿಗದಿಯಾಗಿರುತ್ತದೆ. ಇನ್ನೊಂದು ಬದಿಯಲ್ಲಿ, ಕಡಿಮೆ ಬೆಲೆಯ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಅನುಮತಿಸಲಾಗುವುದಿಲ್ಲ. ಇವುಗಳನ್ನ ನೀವು ನೇರವಾಗಿ ಕ್ರೀಡಾಂಗಣದಿಂದ ಖರೀದಿಸಬೇಕು. ಈ ತಂತ್ರದ ಬಳಕೆಗೆ ಲಭ್ಯತೆಯ ನಿಯಮಿತ ಟಿಕೆಟ್ ಖರೀದಿ ಮತ್ತು ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸುವವರಿಗೆ ಅನುಕೂಲವಾಗುತ್ತದೆ.

ಸ್ಟೇಡಿಯಂನಲ್ಲಿ ಯಾವ ವರ್ಗದ ಸೀಟ್‌ಗಳಿಗೆ ಎಷ್ಟು ರೂಪಾಯಿ ದರವಿದೆ ಎಂಬುದನ್ನ ಈ ಕೆಳಗೆ ನೋಡಬಹುದು

ಬ್ಲಾಕ್ ಕ್ಲಬ್‌ಹೌಸ್ ಲೋವರ್: 9,000 ರೂ.
ಬ್ಲಾಕ್ ಕ್ಲಬ್‌ಹೌಸ್ ಅಪ್ಪರ್: 3,000 ರೂ.
ಬ್ಲಾಕ್ ಬಿ: 2,100 ರೂ.
ಬ್ಲಾಕ್ ಎಲ್‌: 1,800 ರೂ.
ಬ್ಲಾಕ್ ಸಿ & ಕೆ: 1,000 ರೂ.
ಬ್ಲಾಕ್ ಎಫ್: 900 ರೂ.
ಬ್ಲಾಕ್ ಬಿ1, ಡಿ, ಇ, ಎಫ್‌1, ಜಿ, ಎಚ್, ಜೆ, ಎಲ್‌1: 500 ರೂ.
ಬ್ಲಾಕ್ ಸಿ1, ಡಿ1, ಎಫ್‌1, ಜಿ1, ಎಚ್‌1, ಕೆ1: 400 ರೂ.

ಐಪಿಎಲ್ ಅಧಿಕೃತ ವೆಬ್‌ಸೈಟ್‌ನಲ್ಲೂ ಟಿಕೆಟ್ ಖರೀದಿಸಿ
ಭಾರತದಲ್ಲಿ ಐಪಿಎಲ್ ಕ್ರಿಕೆಟ್ ಹಬ್ಬ ಪ್ರಾರಂಭವಾಗಲು ಕೇವಲ 7 ದಿನಗಳು ಬಾಕಿ ಉಳಿದಿವೆ. ಅಭಿಮಾನಿಗಳು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್ www.iplt20.com ನಲ್ಲಿ ಟಿಕೆಟ್‌ಗಳನ್ನು ಖರೀದಿಸಬಹುದು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಹದಿನೈದು ಆವೃತ್ತಿಗಳು ಮಾರ್ಚ್ 26 ರಂದು ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವು ಮಾರ್ಚ್ 29 ರಂದು ನಡೆಯಲಿದೆ.

Story first published: Thursday, March 24, 2022, 9:48 [IST]
Other articles published on Mar 24, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+